BELLARY RYMEC : "ಉದ್ಯಮಿಯಾಗು-ಉದ್ಯೋಗನೀಡು" ಕಾರ್ಯಗಾರದ ಸಮಾರಂಭ

varthajala
0

ಬಳ್ಳಾರಿ ನ 18. ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 18.11.2021 ರಂದು ಉದ್ಯಮಶೀಲತಾ ಅಭಿವೃದ್ದಿ ವಿಭಾಗ ದಿಂದ ಜರುಗಿದ ಉದ್ಯಮಶೀಲತಾ ಜಾಗೃತಿ ಕಾರ್ಯಗಾರ "ಉದ್ಯಮಿಯಾಗು-ಉದ್ಯೋಗನೀಡು" Industries Interaction to Become an Entrepreneur ಕಾರ್ಯಗಾರದ ಸಮಾರಂಭದ ಉದ್ಘಾಟನೆ ಜರುಗಿತು.

ಈ ಉದ್ಘಾಟನಾ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದವರು  ಸೋಮಶೇಖರ ಬಿ., ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬಳ್ಳಾರಿ.  ಸಿ.ಕೆ.ನಾಗರಾಜ, ಜಿಲ್ಲಾ ಕೈಗಾರಿಕಾ ಕೇಂದ್ರ, ಬಳ್ಳಾರಿ, ಜಯಕಷ್ಣ, ಉದ್ಯಮಿ, ಹಾಗೂ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ|| ಟಿ.ಹನುಮಂತ ರೆಡ್ಡಿ, ಹಾಗೂ ಉಪ-ಪ್ರಾಂಶುಪಾಲರು ಡಾ|| ಸವಿತ ಸೊನೊಳಿ,  ಮಹಾವಿದ್ಯಾಲಯದ ಉದ್ಯಮಶೀಲತಾ ಅಭಿವೃದ್ದಿ ವಿಭಾಗದ ತಂಡ- ಡಾ||ಶ್ರೀಶೈಲ, ಪ್ರಾಶಾಂತ್ ಖೇಣಿ, ಶ್ರೀಮತಿ. ಅಪರ್ಣ ವಸ್ತçದ್, ವೀರೇಶ್ ಗೌಡರು, ಲಿಂಗನ ಗೌಡರು,  ಫಣೀಂದ್ರ ರೆಡ್ಡಿ, ಮಹಾವಿದ್ಯಾಲಯದ ಐ.ಕ್ಯೂ.ಏ.ಸಿ-ಕ್ವಾಲಿಟೀ ವಿಭಾಗದ ಡಾ||ವೀರಗಂಗಾಧರ ಸ್ವಾಮಿ, ಮ್ಯಾನೇಜ್ ಮೆಂಟ್ ವಿಭಾಗದ ಡಾ||ತಿಮ್ಮನ ಗೌಡರು, ಇವರು ಹಾಗೂ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಭಾಗವಹಿಸಿದರು.

 ಸೋಮಶೇಖರ ಬಿ., ಮಾತನಾಡುತ್ತಾ “"ಭವ್ಯ ಭಾರತದ ನಿರ್ಮಾಣಕ್ಕೆ ಬೇಕಾಗಿರುವುದು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಮತ್ತು ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಅಂದಿನ ದಿನಗಳಲ್ಲೇ ಕೈಗಾರಿಕವೇ ಇಲ್ಲವೇ ವಿನಾಶವೇ ಭಾರತ ಸರ್ಕಾರವು ಎಂದು ಒತ್ತಾಯಿಸಿರುತ್ತಾರೆ, ಇವತ್ತಿನ ಪೀಳೀಗೆಗೆ ಒಂದು ಆಲೋಚನೆ ಕೊಟ್ಟರೆ ಸಾಕು. ಅವರು ಸಾಕಷ್ಟು ಮಾಡಿತೋರಿಸುತ್ತಾರೆ ಎನ್ನುವುದು ಕಂಡು ಬರುತ್ತದೆ. ಇಂದು ದೇಶಕ್ಕೆ ಉದ್ಯೋಗ ಅವಕಾಶಗಳನ್ನು ಸೃಷ್ಠಿಸುವವರು ಬೇಕಾಗಿದ್ದಾರೆ. ಈ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ|| ಟಿ.ಹನುಮಂತ ರೆಡ್ಡಿ, ಹಾಗೂ ಉಪ-ಪ್ರಾಂಶುಪಾಲರು ಡಾ|| ಸವಿತ ಸೊನೊಳಿ, ಮಾತನಾಡುತ್ತಾ "ಭಾರತ ಸರ್ಕಾರವು ವಿದ್ಯಾರ್ಥಿ ದೆಸೆಯಲ್ಲೇ ವಿದ್ಯಾರ್ಥಿಗಳಿಗೆ ಉದ್ಯಮ ಶೀಲತಾ ಜಾಗೃತಿ ಕೋರ್ಸ್ಗಳು ಆಯೋಜಿಸಲು ಕರೆ ನೀಡಿದ್ದು, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೆ ಒಂದು ಉದ್ಯೋಗ ಬೇಕಾಗಿದೆ. ಆದರೆ, ಉದ್ಯೋಗ ಸೃಷ್ಠಿಸುವವರು ತುಂಬಾ ವಿರಳ. ಆದುದರಿಂದ ನೀವು ವಿದ್ಯಾರ್ಥಿಗಳು ಉದ್ಯೋಗ ಹಾಗೂ ಉದ್ಯಮ ಸೃಷ್ಠಿಸುವಲ್ಲಿ ತೊಡಗಿರಿ. ಅದರಿಂದ ಹಲವಾರು ಜನಗಳಿಗೆ ಜೀವನಾವಕಾಶ ಮಾಡಿಕೊಡುವುದರಲ್ಲಿ ಯಶಸ್ವಿಯಾಗಲಿದೆ" ಎಂದರು. 

ಈ ಸಮಾರಂಭವನ್ನು ಆರಂಭದಲ್ಲಿ ಮಹಾವಿದ್ಯಾಲಯದ ಐ.ಕ್ಯೂ.ಏ.ಸಿ-ಕ್ವಾಲಿಟೀ ವಿಭಾಗದ ಡಾ||ವೀರಗಂಗಾಧರ ಸ್ವಾಮಿ, ಉದ್ಯಮಶೀಲತಾ ಅಭಿವೃದ್ದಿ ವಿಭಾಗದ ಡಾ||ಶ್ರೀಶೈಲ, ಇವರು ಗಣ್ಯರನ್ನು ಸ್ವಾಗತಿಸಿದರು, ಕು||ಸುಶ್ರಾವ್ಯ, ಪ್ರಾರ್ಥಿಸಿದರು, ಶ್ರೀಮತಿ. ಅಪರ್ಣ ವಸ್ತçದ್ ನಿರೂಪಣೆ ಮಾಡಿದರು. ಪ್ರಾಶಾಂತ್ ಖೇಣಿ ವಂದಿಸಿದರು. 


Post a Comment

0Comments

Post a Comment (0)