ಸುರಗಿರಿ ಮಹಾಲಿಂಗೇಶ್ವರ ದೇವಾಸ್ಥಾನಕ್ಕೆ ಸುಮಾರು 600 ವರುಷಗಳ ಇತಿಹಾಸವಿದೆ ಸುರಗಿರಿ ಮಹಾಲಿಂಗೇಶ್ವರ ಮೂರು ಘಟ್ಟಗಳಲ್ಲಿ ಮೂರು ವಿಭಿನ್ನ ಸಂಪ್ರದಾಯಗಳಿಂದ ಆರಾಧನೆಗೊಂಡಿದೆ ಶೈವ ಮೂಲ ಮಹಾದೇವನಾಗಿ ಮಧ್ಯಯುಗಿನ ಆಳುಪರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಲಿಂಗ ಜನಪರ ಬಾಯಿಯಲ್ಲಿ ದೆಂದ ಗುಡ್ಡೆಯ ರುದ್ರ ದೇವನೆಂದು ದೆಂದ ಗುಡ್ಡೆಯ ಮಹಾ ರುದ್ರನೆಂದು ಜನ ಜನಿತವಾಗಿ ಮುಂದೆ ಕೆಳದಿ ಅರಸರ ಕಾಲದಲ್ಲಿ ವಿರ ಶೈವರ ವಶಕ್ಕೆ ಬಂದು ಲಿಂಗಾಯಿತ ಧರ್ಮದಂತೆ ಪೂಜಿಸಲ್ಪಟ್ಟ ನಂತರ ಮಹಾಲಿಂಗೇಶ್ವರನೆಂದು ಕರೆಯಿಸಿಕೊಂಡ ಮುಂದೆ ಹೈದರಾಲಿ ಟಿಪ್ಪು ಸುಲ್ತಾನ ಕಾಲದಲ್ಲಿ ,1782,,1789ರವರೆಗೆ ,ರಾಜಕೀಯ ಕಾರಣಗಳಿಂದ ಉಂಟಾದ ಧಾರ್ಮಿಕ ಪಲ್ಲಟದಿಂದ ಕಾಲ ಗರ್ಭ ಸೇರಿದ ತದ ನಂತರ ಕ್ರಿ,ಶ,1897ರಲ್ಲಿ ತನ್ನ ಸನ್ನಿಧಿಯನ್ನು ಯಮನಮ್ಮನ ಮುಕಾಂತರ ಈ ಜಗತ್ತಿಗೆ ತೋರ್ಪಡಿಸಿಕೊಂಡ 1897ರಲ್ಲಿ ಇಲ್ಲಿಯ ಸಾನಿಧ್ಯ ಲೋಕಕ್ಕೆ ಅನಾವರಣಗೊಂಡ ಕತೆಯನ್ನು ಈಗಿನ ಅರ್ಚಕ ಕುಟುಂಬದ ಹಿರಿಯರೂ ದೇವಳದ ಉಗಮಕ್ಕೆ ಕಾರಣ ಕರ್ತೆಯಾದ ಯಮನಮ್ಮನ ವಂಶಜರು ಆದ ಅಂಗಡಿಮಾರು ಕೃಷ್ಣ ಭಟ್ಟರು ಅವರದೇ ಮಾತುಗಳಲ್ಲಿ ಬರೆದು ಕೊಟ್ಟ ಹಸ್ತ ಪ್ರತಿಯ ಲೇಖನವನ್ನು ಇಲ್ಲಿ ಕೊಡಲಾಗಿದೆ
1987,ನೆ ಇಸವಿಯಲ್ಲಿ ಅತ್ತೂರು ಮಾಗಣೇ ಕೇರೆಂಜೂರು ಮುಗುಳಿಯ ಈಗ ಅಂಗಡಿಮಾರು ಮನೆಯಲ್ಲಿ ವಾಸವಾಗಿದ್ದ ದೊಡ್ಡ ಮಗ ಅನಂತ ಮನೆಯ ಜಗಲಿಯಲ್ಲಿ ಮಲಗಿದ್ದ ಚಿಕ್ಕ ಮಗಳು ಎಂಟು ವರುಷ ಪ್ರಾರಂಭದ ನಾಗವೇಣಿಯೊಡನೆ ಮನೆಯ ಒಳಗಡೆ ರಾತ್ರಿ ಕಾಲದಲ್ಲಿ ಮರುದಿನ ಉದಯಕ್ಕೆ ಮೂರು ಗಂಟೆ ಇರುವಾಗಲೇ ಪ್ರಶಾಂತ ಸಮಯದಲ್ಲಿ ಭಜನೆಯನ್ನು ಭಕ್ತಿಯಿಂದ ಹಾಡುತ್ತ ಬರುತ್ತಿರುವುದು ಒಳಗೆ ಮಲಗಿದ್ದ ಯಮುನಮ್ಮನವರ ಕಿವಿಗೆ ಇಂಪಾಗಿ ಕೇಳುತ್ತಿತ್ತು ಯಮುನಕ್ಕನವರು ಎದ್ದು ಅಂಗಳಕ್ಕೆ ಬಂದು ಒಬ್ಬರಲ್ಲಿ ವಿಚಾರಿಸಿದರು ಓ ಭಜಕರೆ ನೀವು ಎಲ್ಲಿಯ ಭಜನಾ ಮಂಡಳಿಯವರು ನಿಮಗೆ ಕುಡಿಯಲು ನೀರು ಬೇಕೇ ಎಂದರು ನಮಗೆ ನೀರು ಬೇಡ ನಾವು ದೂರದ ಊರಿನಿಂದ ಬಂದವರಲ್ಲ ಇಲ್ಲೇ ಹತ್ತಿರದ ದೆಂದ ಗುಡ್ಡೆಯ ಕ್ಷೇತ್ರದಿಂದ ಬಂದವರು ನಾವೆಲ್ಲ ಎಂದರು ಇನ್ನು ಮುಂದೆ ಈ ದೆಂದ ಗುಡ್ಡೆ ಕ್ಷೇತ್ರದಲ್ಲಿ ದೇವಾಲಯ ಆಗಬೇಕಾಗಿದೆ ಅದಕ್ಕೆ ಮೊತ್ತ ಮೊದಲು ಸದ್ರಿ ಕ್ಷೇತ್ರದಲ್ಲಿ ಈಗ ಕಾಲ ಸುಮೂಹೂರ್ತದಲ್ಲಿ ದೇವರ ಲಿಂಗದ ಮುಂಬಾಗದಲ್ಲಿ ಪ್ರಾರ್ಥಿಸಿಕೊಳ್ಳಲು ನೀವು ಈಗ ಅಲ್ಲಿಗೆ ಅಗತ್ಯವಾಗಿ ಬರಬೇಕಾಗಿದೆ ಎಂದು ಯಮುನಮ್ಮನವರಿಗೆ ತಿಳಿಸಿದರು ಅದಕ್ಕೆ ಯಮುನಮ್ಮ ನಾನು ಹೆಣ್ಣು ಹೆಂಗಸು ವಿಧವೆ ನಾನು ಯಾಕೆ ಈ ರಾತ್ರಿ ಕಾಲದಲ್ಲಿ ಬರಬೇಕು ಈ ಊರಿನಲ್ಲಿ ಗುತ್ತಿನವರು ಜಾಗದ ಮಾಗಣೆಯವರು ಗಣ್ಯರು ಧನಿಕರು ಉಧಾರಿಗಳು ಎಲ್ಲಾ ಇದ್ದಾರೆ ಅವರನ್ನು ಕರೆಯಿರಿ ಎಂದರು ಯಮುನಮ್ಮ.
ಅಮ್ಮ ನೀವು ಹೇಳುವುದು ಸರಿ ಆದರೆ ನೀವು ದಿನಾಲೂ ಶಿವಲಿಂಗಕ್ಕೆ ಪ್ರದಕ್ಷಿಣೆ ಬಂದು ಈ ಕ್ಷೇತ್ರ ಅಭಿವೃದ್ಧಿ ಹೊಂದಲೀ ತನ್ನ ಜೀವಿತ ಕಾಲದಲ್ಲಿ ಆದರೂ ನೋಡುವ ಭಾಗ್ಯ ನನಗಿದೆಯೋ ಇಲ್ಲವೋ ಎಂದು ಹಂಬಲಿಸುವ ನೀವು ಬರಬೇಕು ಎಂದರು
ಸ್ವಾಮಿ ಇದೇನು ನಿನ್ನ ಮಹಿಮೆ ನನ್ನ ಮನೋಗತ ಸ್ವಾಮಿ ಒಬ್ಬರಿಗೆ ಗೊತ್ತು ಇವರಿಗೆ ಗೊತ್ತಾಗಬೇಕಾದರೆ ಬಂದವರು ಮನುಷ್ಯರಲ್ಲ ಇನ್ನು ಮಾತಾಡಿ ಹೊತ್ತು ಕಳೆಯ ಬಾರದು ಮಗನಿಗೆ ನಿದ್ದೆ ಬಂದಿದೆ ಎಬ್ಬಿಸಲು ತಿಳಿಸಲು ಸಮಯ ಕಳೆಯ ಬಾರದು ಕ್ಷೇತ್ರಕ್ಕೆ ಹೋಗಿ ಬೇಗನೆ ಬರಬೇಕು ಎಂದು ಆಲೋಚಿಸಿ ಅವರೊಡನೆ ಮನೆ ಹೊರಟರು ಈಗೇಯೇ ಇದು,11,02,1969 ರಂದು ವಿಷ್ಣುಮೂರ್ತಿ ಆಚಾರ್ಯರು ಉರವನೆಲ್ಲಾ ಒಟ್ಟು ಗೂಡಿಸಿ ಸುಪ್ರಸಿದ್ಧ ಜೋತಿಸ್ಯ ಕುಂಜಕಣ್ಣ ಪುದುವಾಲರ ಮೂಲಕ ಪ್ರೇಶ್ನೆ ಇರಿಸಿ ತಾರೀಕು ,26,2,1970ರಂದು ಶ್ರೀ ಪೇಜಾವರ ವಿಶ್ವೇಶತೀರ್ಥರು ಶಿಲಾನ್ಯಾಸಗೈದರು ,22,02,1971ರಂದು,
ನಿಧಿಕಲಾಶ ಸ್ಥಾಪನೆ ಹಾಗೂ ಷಡಾಧಾರ ಪ್ರತಿಷ್ಠೆಗಳು ನಡೆದು 12,05,1971,ರಂದು ಬ್ರಮ್ಮ ಕಲಶ ವಿಜೃಂಭಣೆಯಿಂದ ನಡೆದು ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನವಾಯಿತು ಈ ದೇವಸ್ಥಾನವು ಮಂಗಳೂರು ತಾಲೂಕಿನಲ್ಲಿದೆ ಇದು ಮಂಗಳೂರಿನಿಂದ 25 ಕಿ ಮಿ ದೂರವಿದೆ ಮಂಗಳೂರು ನಿಂದ ಸುರತ್ಕಲ್ ಕಿನ್ನಿಗೋಳಿ ಮಾರ್ಗವಾಗಿ ಬರುವಾಗ ಪಕ್ಷಿಕೆರೆ ಎಂಬಲ್ಲಿ ಇದರ ಮುಖ್ಯ ದ್ವಾರವಿದೆ ಈ ದ್ವಾರದಿಂದ 1 ಕಿ ಮಿ ದೂರ ಬಂದರೆ ಸಿಗುವುದೇ ನಮ್ಮ ಸುರಗಿರಿ ದೇವಸ್ಥಾನ.
ಇಲ್ಲಿ ರುದ್ರಾಭಿಷೇಕ ಪೂಜೆಯು ದೇವರಿಗೆ ಬಹಳ ಇಷ್ಟವಾದದ್ದು ಈ ದೇವಸ್ಥಾನ ಪ್ರೇವೇಶಿಸುತ್ತಿದ್ದಂತೆ ಮೇಲುಗಡೇ ನೋಡಿದರೆ ಭವ್ಯವಾದ ಶಿವನ ಮೂರ್ತಿ ಇದೇ ಇದನ್ನು ಒಂದು ಸಲ ನೋಡಿ ನಮಸ್ಕರಿಸಿದರೆ ಭಕ್ತಿ ಭಾವ ಮೂಡುತ್ತದೆ ದೇವಸ್ತಾನಕ್ಕೆ ಒಳಗಡೆ ಹೋಗುವ ಬಲ ಭಾಗದಲ್ಲಿ ಇಲ್ಲಿಯ ಪ್ರಸಿದ್ಧ ದೈವ ಅಣ್ಣಪ್ಪ ಪಂಜುರ್ಲಿ ದೈವಸ್ಥಾನವಿದೆ ಇದರಿಂದ ಮುಂದೆ ಹೋದರೆ ಸಿಗುವುದೇ ಮಹಾ ಅವಾತಾರಿ ಮಹಾಲಿಂಗೇಶ್ವರ ದೇವರು ಮಹಾಲಿಂಗೇಶ್ವರ ದೇವರ ದರುಶನ ಅದ ಮೇಲೆ ಮುಂದೆ ಸಾಗಿದರೆ ಮಹಾಗಣಪತಿ ದೇವರ ಭವ್ಯ ಮೂರ್ತಿ ಇದೆ ಇದಕ್ಕೆ ನಮಸ್ಕರಿಸಿ ಮುಂದೆ ಬಂದು ತಿರ್ಥಪ್ರಸಾದ ಸ್ವೀಕರಿಸಿ ಹೊರಗಡೆ ಬಂದು ಬಲಗಡೆ ತಿರುಗಿದರೆ ನಾಗದೇವರ ಗುಡಿ ಇದೆ ನಾಗದೇವರಿಗೆ ನಮಸ್ಕರಿಸಿ ತನ್ನ ಕಷ್ಟವನ್ನು ಹೇಳಿದರೆ ನಾಗ ದೇವರು ಮಹಾಲಿಂಗೇಶ್ವರ ದೇವರು ಕಷ್ಟವನ್ನು ಪರಿಹರಿಸುವುದು ಖಂಡಿತ ಇಲ್ಲಿ ಪ್ರತಿ ಸೋಮವಾರ ಭಜನಾ ಕಾರ್ಯಕ್ರಮ ನಡೆಯುತ್ತದೆ ಅದು ಅಲ್ಲದೆ ಪ್ರತಿ ಸಂಕ್ರಮಣದಂದು ಅನ್ನ ಸಂತರ್ಪಣೆ ಕೂಡ ನಡೆಯುತ್ತದೆ.
ವರುಷಕ್ಕೆ ಒಂದು ಸಲ ಈ ಮಾಗಣೆಗೆ ಸಂಭಂದ ಪಟ್ಟ ಗ್ರಾಮಗಳ ಮನೆ ಮನೆಗೆ ತೆರಳಿ ಭಜನಾ ಕಾರ್ಯಕ್ರಮವನ್ನು ನಡೆಸುತ್ತಾರೆ ಅದು ಅಲ್ಲದೆ ಮಕರ ಸಂಕ್ರಾಂತಿಯಂದು ಇಲ್ಲಿ ವಿಜೃಂಭಣೆಯ ಭಜನಾ ಸೇವೆ ನಡೆಯುತ್ತದೆ ಇಲ್ಲಿ ಏಪ್ರಿಲ್ ತಿಂಗಳಿನಲ್ಲಿ ಜಾತ್ರಾ ಮಹೋತ್ಸವ ಹಗಲು ರಥೋತ್ಸವ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಅನೇಕ ಗಣ್ಯರು ಆಗಮಿಸುತ್ತಾರೆ ಇಲ್ಲಿ ಕಾವೇರಿ ಸಂಕ್ರಮಣದಂದು ಕೆರೆ ಸ್ಥಾನ ವಿಶೇಷ ಪೂಜೆ ಪುರಸ್ಕಾರಗಳು ನಡೆಯುತ್ತವೆ ಇಲ್ಲಿಗೆ ಭೇಟಿ ನೀಡಿ ಮಹಾಲಿಂಗೇಶ್ವರ ಮಹಾಗಣಪತಿ ನಿಮ್ಮ ಬೇಡಿಕೆಯನ್ನು ಈಡೇರಿಸುವುದು ಖಂಡಿತ.