November 13, Delhi: ವಾಯುಮಾಲಿನ್ಯದಿಂದ ಪೂರಾ ದೆಹಲಿಯು ಕಲುಷಿತಗೊಂಡಿರುವ ಕಾರಣ ದೆಹಲಿ ಸರಕಾರವು ನವೆಂಬರ್ 17ರವರೆಗು ಶಾಲಾ, ಕಾಲೇಜು, ಇನ್ನಿತರೆ ಕೈಗಾರಿಕೆಗಳಿಗೆ, ಐಟಿ/ಬಿಟಿ ಕಚೇರಿಗಳಿಗೆ, ಸರಕಾರಿ ಕಚೇರಿಗಳಿಗೆ ವರ್ಕ್ ಫ್ರಮ್ ಹೋಂ ಆದೇಶವನ್ನು ಜಾರಿಮಾಡಲಾಗಿದೆ. ಕರೋನದಂತಹ ಮಹಾಮಾರಿಯಿಂದ ಈಗಷ್ಟೇತಾನೇ ದೇಶವು ಹಾಗೂ ದೇಶದ ರಾಜಧಾನಿ ಸುಧಾರಿಸಿಕೊಳ್ಳುತಿತ್ತು, ಇಂತಹ ಸಮಯದಲ್ಲಿ ವಾಯುಮಾಲಿನ್ಯ ಎಂಬ ಭೂತ ಇಡೀ ದೆಹಲಿಯನ್ನು ಆಕ್ರಮಿಸಿ ಇಡೀ ರಾಜಧಾನಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವಾಯುಮಾಲಿನ್ಯ ಹೆಚ್ಚಾದ ಕಾರಣ ದೆಹಲಿ ಸರಕಾರವು ವರ್ಕ್ ಫ್ರಮ್ ಹೋಂ ಆದೇಶವನ್ನು ಇಂದಿನಿಂದ ಜಾರಿಮಾಡಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ದೆಹಲಿ ಸರಕಾರವು ಕಟ್ಟಾಜ್ಞೆ ಹೊರಡಿಸಿದೆ.
ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಮಾಲಿನ್ಯಕ್ಕೆ ವಾಹನ ಮಾಲಿನ್ಯದ ಕೊಡುಗೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ನಿರ್ಮಾಣ ಚಟುವಟಿಕೆಗಳ ನಿಷೇಧವು ಧೂಳಿನ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶಾಲೆಗಳನ್ನು ಮುಚ್ಚಲಾಗಿದ್ದರೂ, ವರ್ಚುವಲ್ ತರಗತಿಗಳು ಮುಂದುವರಿಯುತ್ತದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ಹೆಚ್ಚಿನ ಕಲಿಕೆಯ ನಷ್ಟವನ್ನು ಅನುಭವಿಸುವುದಿಲ್ಲ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳನ್ನು ದೀರ್ಘಕಾಲದವರೆಗೆ ಮುಚ್ಚಲಾಗಿದ್ದು, ವಿದ್ಯಾರ್ಥಿಗಳು ಈಗಾಗಲೇ ಕಲಿಕೆಯ ನಷ್ಟವನ್ನು ಅನುಭವಿಸಿದ್ದಾರೆ.
ಶನಿವಾರ ಸಂಜೆ ದೆಹಲಿ ಸಚಿವಾಲಯದಲ್ಲಿ ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ನಂತರ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವುದಿಲ್ಲ. ಆದರೆ ಸಂಕ್ಷಿಪ್ತ ಲಾಕ್‌ಡೌನ್ ಪರಿಗಣನೆಯಲ್ಲಿದೆ ಮತ್ತು ಸರ್ಕಾರವು ಅದರ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಿದ್ದಾರೆ.
ದೆಹಲಿ ಸರ್ಕಾರವು ರಾಜಧಾನಿಗೆ ಬೀಗ ಹಾಕುವ ಕುರಿತು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತದೆ ಮತ್ತು ಅದನ್ನು ಸುಪ್ರೀಂ ಕೋರ್ಟ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಿದೆ. ಇದು ತೀವ್ರವಾದ ಹೆಜ್ಜೆಯಾಗಿರುವುದರಿಂದ, ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರ ಸೇರಿದಂತೆ ಸಂಬAಧಿಸಿದ ಎಲ್ಲಾ ಸಂಸ್ಥೆಗಳೊAದಿಗೆ ಸಮಾಲೋಚಿಸಲಾಗುವುದು ಎಂದು ದೆಹಲಿ ಸಿಎಂ ತಿಳಿಸಿದ್ದಾರೆ.
ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿರುವ ರಾಜಧಾನಿಯಲ್ಲಿ ಅಗತ್ಯವಿದ್ದಲ್ಲಿ ಎರಡು ದಿನಗಳ ಲಾಕ್‌ಡೌನ್ ಹೇರಲು ಕೇಂದ್ರ ಮತ್ತು ದೆಹಲಿ ಸರ್ಕಾರ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಾರ್ತಾ ಜಾಲ