KORATAGERE : TUMKUR : ವಿದ್ಯಾರ್ಥಿಗಳ ಭವಿಷ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು

varthajala
0

ಕೊರಟಗೆರೆ ; ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಪ್ರತಿ ಮಕ್ಕಳಲ್ಲಿ ಅಕ್ಷರದ ಅರಿವನ್ನು ಸದಾ ಮೂಡಿಸುತ್ತಾ ಅವರನ್ನು ದೇಶದ ಉತ್ತಮ ಪ್ರಜೆಗಳಾಗಿ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕ ಸಮುದಾಯದ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ತಿಳಿಸಿದರು.

ಅವರು ತಾಲೂಕಿನ ಕೊಡ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೋಂದಿದ ಮುಖ್ಯಶಿಕ್ಷಕ ಜೆ.ಚಿ.ಲಕ್ಷಿಕಾಂತ್ ಅವರಿಗೆ ಶಾಲಾ ಶಿಕ್ಷಕರ ಏರ್ಪಡಿಸಿದ್ದ ಬಿಳ್ಕೋಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕಲಿಕೆಗಾಗಿ ಶ್ರಮವಹಿಸಿ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಶಿಕ್ಷಕರನ್ನು ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಮರೆಯುವುದಿಲ್ಲ ಎಂದ ಅವರು ಶಿಕ್ಷಕ ವೃತ್ತಿಗೆ ಹೆಚ್ಚಿನ ಗೌರವ ಇದ್ದು ಹೊಟ್ಟೆಪಾಡಿಗಾಗಿ ಶಿಕ್ಷಕ ವೃತ್ತಿ ಆಯ್ದುಕೊಳ್ಳಬಾರದು, 

ಯಾವ ಶಿಕ್ಷಕರು ಮಕ್ಕಳ ಪ್ರಗತಿಗಾಗಿ ಶ್ರಮಿಸಿದ್ದಾರೋ ಅಂತಹ ಶಿಕ್ಷಕರು ಮತ್ತು ಅವರ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿರುವುದು ನಾವು ಕಾಣಬಹುದು, 33 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದ ಲಕ್ಷಿö್ಮಕಾಂತ ರವರ ಮುಂದಿನ ನಿವೃತ್ತಿ ಜೀವನ ಸುಖಮಯವಾಗಿರಲ್ಲಿ ಎಂದರು.

ಸನ್ಮಾನ ಸ್ವೀಕರಿ ಮಾತನಾಡಿದ ನಿವೃತ್ತ ಮುಖ್ಯಶಿಕ್ಷಕರ ಜೆ.ಜಿ.ಲಕ್ಷಿö್ಮÃಕಾಂತ್ ನನ್ನ ಶಿಕ್ಷಕ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸಲು ಸಹಕರಿಸಿದ ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಹಾಗೂ ಸಹೋದ್ಯೋಗಿ ಶಿಕ್ಷಕರುಗಳಿಗೆ ಧನ್ಯವಾದಸಲ್ಲಿಸಿ ವಿದ್ಯಾರ್ಥಿಗಳು ಶಿಕ್ಷಣ ಕೇವಲ ಉದ್ಯೋಗ ಸೃಷ್ಠಿಗೆ ಮಾತ್ರ ಶಿಕ್ಷಣ ಪಡೆಯದೆ ಮನಷ್ಯನ ವ್ಯಕ್ತಿತ್ವ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಪಡೆಯಬೇಕು, ಹಾಗೂ ಉತ್ತಮ ವಿದ್ಯಾಭ್ಯಾಸ ಪಡೆಯುವುದರೊಂದಿಗೆ ತಾವು ವಿದ್ಯಾಭ್ಯಾಸ ಮಾಡಿದ ಶಾಲೆಗೂ ಹಾಗೂ ತಂದೆ ತಾಯಿಗಳಿಗೂ ಊರಿಗೂ ಕೀರ್ತಿ ತರುವಂತಾಗಬೇಕು ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಬಿಆರ್‌ಸಿ ಸುರೇಂದ್ರನಾಥ್, ಟಿಪಿಓ ಸದಾಶಿವಪ್ಪ, ಎಸ್.ಡಿ,ಎಂ.ಸಿ ಅಧ್ಯಕ್ಷ ರಾಜಮ್ಮ, ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಶಾಲಾ ಶಿಕ್ಷಕರುಗಳಾದ ಶಿವಕುಮಾರ್, ನಟರಾಜು, ಯಶವಂತಕುಮಾರ್, ವಿಜಯ್‌ಕುಮಾರ್, ತೇಜಸ್ವಿನಿ, ಸೌಮ್ಯ, ಸವಿತಾ, ದೇವರಜು, ಸುದರ್ಶನಬಾಬು, ಹತಾಉಲ್ಲಾ ಸೇರಿದಂತೆ ಇನ್ನಿತರರು ತಾಲೂಕು ಮುಖ್ಯೋಪಾದ್ಯಾಯರ ಸಂಘ, ಸಹ ಶಿಕ್ಷಕರ ಸಂಘದ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಿಕ್ಷಕರು ಹಾಜರಿದ್ದರು.


Tags

Post a Comment

0Comments

Post a Comment (0)