INDIAN MILITARY COLLEGE : ಕರ್ನಾಟಕ ರಾಜ್ಯದ ಬಾಲಕಿಯರ ಅರ್ಹತಾ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

varthajala
0

 ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ :

ಕರ್ನಾಟಕ ರಾಜ್ಯದ ಬಾಲಕಿಯರ ಅರ್ಹತಾ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ,ಅ.18, (ಕರ್ನಾಟಕ ವಾರ್ತೆ):  ಜುಲೈ 2022 ನೇ ಸಾಲಿನ ಅಧಿವೇಶನಕ್ಕಾಗಿ ಬೆಂಗಳೂರು ಕೇಂದ್ರದಲ್ಲಿ ನಡೆಯಲಿರುವ ಡೆಹರಾಡೂನ್ ನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ನಲ್ಲಿ 8 ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕಿಯರ ಅರ್ಹತಾ ಪ್ರವೇಶ ಪರೀಕ್ಷೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪರೀಕ್ಷೆಯು ಇದೇ ಡಿಸೆಂಬರ್ 18  ರಂದು ನಡೆಯಲಿದ್ದು,  ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ದಿನಾಂಕ 01-07-2022ರಂತೆ 11.5 ವರ್ಷದಿಂದ 13 ವರ್ಷದೊಳಗಿರುವ ( ಅಂದರೆ ದಿನಾಂಕ 02-07-2009 ರಿಂದ 01-01-2011 ರೊಳಗೆ ಜನಿಸಿರುವ ) ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ. 

ಪ್ರಾಸ್ಪೆಕ್ಟಸ್ ,ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರು ಪುಸ್ತಕವನ್ನು ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು , ಗರಹಿ ಕ್ಯಾಂಟ್ , ಡೆಹ್ರಾಡೂನ್ , ಉತ್ತರಾಖಂಡ್ -248003 ಮೂಲಕ  ಅಥವಾ ಸಾಮಾನ್ಯ ಅಭ್ಯರ್ಥಿಗಳು ರೂ. 600 /-  ಮತ್ತು ಎಸ್ಸಿ -ಎಸ್ಟಿ ಅಭ್ಯರ್ಥಿಗಳು ರೂ. 555 /-  ಗಳನ್ನು   ಆನ್‍ಲೈನ್  ಮೂಲಕ ಪಾವತಿಸಿ ಸ್ಪೀಡ್ ಪೋಸ್ಟ್ ಮೂಲಕ ಪಡೆಯಬಹುದಾಗಿದೆ. ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ದ್ವಿಪ್ರತಿಯಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ದಿನಾಂಕ 15-11-2021 ರೊಳಗಾಗಿ ನಿರ್ದೇಶಕರು , ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ , ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ಭವನ್ , ನಂ .58 ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ರಸ್ತೆ, ಬೆಂಗಳೂರು - 25  ಇವರಿಗೆ ಸಲ್ಲಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


Tags

Post a Comment

0Comments

Post a Comment (0)