ಶ್ರೀ ಕ್ಷೇತ್ರ ಸೂರ್ಯಪುರ ದರ್ಶನ ಮಾಡುವಂತಾಗಬೇಕು

varthajala
0

 ತಿಮ್ಮಪ್ಪನನ್ನು ನೋಡಲು ಆಂಧ್ರಕ್ಕೆ ಹೋಗ್ತಿವಿ,

ಸಾಯಿಬಾಬಾ ನೋಡಲು ಮಹಾರಾಷ್ಟ್ರಕ್ಕೆ ಹೋಗ್ತಿವಿ,

ಕಾಶಿ ವಿಶ್ವನಾಥನ ನೋಡಲು ಉತ್ತರ ಪ್ರದೇಶಕ್ಕೆ ಹೋಗ್ತಿವಿ.

ಕಂಚಿ ಕಾಮಾಕ್ಷಿ (ಪಾರ್ವತಿ) ನೋಡಲು ಚೆನೈಗೆ ಹೊಗ್ತಿವಿ...

ಹಾಗೆ ಕರ್ನಾಟಕದಲ್ಲಿರುವ  ಆಂಜನೇಯನು  ತನ್ನ ಗುರುವಾದ ಸೂರ್ಯದೇವನಿಂದ ವಿದ್ಯೆ ಕಲಿತ ಸ್ಥಳ 

ಸೂರ್ಯಪುರ.

 ಎಲ್ಲಾ ಹಿಂದೂಗಳು ಶ್ರೀ ಕ್ಷೇತ್ರ ಸೂರ್ಯಪುರ ದರ್ಶನ ಮಾಡುವಂತಾಗಬೇಕು. 

ಬಹಳಷ್ಟು ಜನಕ್ಕೆ ಪುರಾಣ ಪ್ರಸಿದ್ದ ಐತಿಹಾಸಿಕ ಪುಣ್ಯಕ್ಷೇತ್ರ ಸೂರ್ಯಪುರ ದ ಬಗ್ಗೆ ಗೊತ್ತಿಲ್ಲ. ಆಂಜನೇಯನು ವಿದ್ಯೆ ಕಲಿತ ಸ್ಥಳ, ಹಾಗೂ ದಕ್ಷಿಣಾಭಿಮುಖವಾಗಿದ್ದು ಸಂಪೂರ್ಣ ವಾಸ್ತುವಿನಿಂದ ಕೂಡಿದ್ದು   ಭಕ್ತರ ಸಕಲ  ಅಭೀಷ್ಟಗಳನ್ನು ಹೀಡೇರಿಸುತ್ತಿರುವ ಅಪಾರ ಮಹಿಮೆಯನ್ನು ಹೊಂದಿರುವ  ಶ್ರೀ ಕ್ಷೇತ್ರ

ಸೂರ್ಯಪುರ ಎಲ್ಲರಿಗೂ ತಿಳಿಯುವಂತಾಗಬೇಕು.  

ಕ್ಷೇತ್ರದ ಇತಿಹಾಸ

👍 ಸೂರ್ಯಪುರ   ಗ್ರಾಮದ ಮನೆಯೊಳಗಿನ ಒಲೆಯೊಂದರಲ್ಲಿ ಹುಣಸೆಗಿಡ ಹುಟ್ಟಿದಾಗ ಅದು ಅಪಶಕುನ ಎಂದು ಜನರು ಈ ಗ್ರಾಮವನ್ನೆ ಖಾಲಿ ಮಾಡಿ ಬೇರೆ ಪ್ರದೇಶಗಳಿಗೆ ವಲಸೆ ಹೋಗಿ ನೆಲೆಸಿದ್ದಾರೆ.

👍ಇತ್ತೀಚೆಗೆ ಅಳಿದುಳಿದ   

 ಈ ಗ್ರಾಮದ ದೇವಾಲಯಗಳನ್ನು ಸೂರ್ಯಪುರ ಆಶ್ರಮ (ಮಠ)ದ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ.ಸೂರ್ಯನಿಗೆ ಪ್ರಿಯವಾದ ವಾರ ಬಾನುವಾರ.ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಹೀಗಾಗಿ  ಬಾನುವಾರ,ಮಂಗಳವಾರ ಮತ್ತು ಶನಿವಾರ  

    ಹೆಚ್ಚಿನ ಸಂಖ್ಯೆಯಲ್ಲಿ      ಭಕ್ತರು ಸೇರುತ್ತಾರೆ. 

👍ಸೂರ್ಯಪುರ

 ಗ್ರಾಮದಲ್ಲಿ ಮುಂಚೆ ನೆಲೆಸಿದ್ದವರ  ವಂಶಸ್ಥರು ಈಗಲೂ ಕೂಡ  ಅನಾದಿಕಾಲದಿಂದಲೂ ನೆಲೆಸಿರುವ ಇಲ್ಲಿನ ಗ್ರಾಮ ದೇವತೆ ಮಾರಮ್ಮನಿಗೆ  ಮತ್ತು ಹರಿಹರೇಶ್ವರ ಹಾಗೂ ಸೂರ್ಯಾಂಜನೇಯ ಸ್ವಾಮಿಗೆ ನಡೆದುಕೊಳ್ಳುತ್ತಾರೆ.

👍ಹಿಂದೆ ಈ ಗ್ರಾಮದಲ್ಲಿ ಜನವಸತಿ ಇತ್ತು ಮತ್ತು ಕೋಟೆ ಕೊತ್ತಲುಗಳಿಂದ ಕೂಡಿತ್ತು ಈ ಗ್ರಾಮ ಎಂಬುದಕ್ಕೆ  ನಿದರ್ಶನವಾಗಿ ಇಲ್ಲಿನ  ಗುಟ್ಟೆ ಮೇಲೆ ಕುರುಹುಗಳನ್ನು ಕಾಣಬಹುದು.

👍 ಋಷಿಮುನಿಗಳು ತಪಸ್ಸುಗೈದ ಸ್ಥಳವಾಗಿದ್ದ ಸೂರ್ಯಪುರ, ವಿಜಯನಗರ ಸಾಮ್ರಾಜ್ಯದ ಪತನಾನಂತರ ತನ್ನ ಭವ್ಯತೆಯನ್ನು ಕಳೆದುಕೊಂಡಿತು.

👍ಈಗಲೂ ಕೂಡ  ಆಗಾಗ್ಗೆ ರಾತ್ರಿ ಸಮಯದಲ್ಲಿ (ಋಷಿಮುನಿಗಳ ಸಂಚಾರ) ಜ್ಯೋತಿ (ಬೆಳಕು) ಸಂಚರಿಸುತ್ತಿರುವುದನ್ನು  ನೋಡುತ್ತಿರುವುದಾಗಿ ಅರ್ಚಕರ ಕುಟುಂಬದವರು  ತಿಳಿಸುತ್ತಾರೆ.

 👍ಹರಕೆ ಮಾಡಿಕೊಂಡ ಭಕ್ತರು ಮನೆಗಳಲ್ಲಿ   ವಾಸ್ತು ದೋಷ ನಿವಾರಣೆಗೆ ಹಾಗೂ ಆರೋಗ್ಯ ,ನೆಮ್ಮದಿ, ಮತ್ತು ಸಂತಾನ ಭಾಗ್ಯಕ್ಕಾಗಿ ಶ್ರೀ  ಸೂರ್ಯಾಂಜನೇಯ ಸ್ವಾಮಿ  ಉತ್ಸವ ಮೂರ್ತಿ ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಏರ್ಪಡಿಸಿ ಸಿಹಿ ಊಟ ಹಾಕುತ್ತಾರೆ. ಜೊತೆಗೆ  ಭಕ್ತರು ತಮ್ಮ ಮನೆಗಳಲ್ಲಿ ಶ್ರೀ  ಸೂರ್ಯಾಂಜನೇಯ ಚರಿತ್ರೆ (ಮಾರುತಿ ವಿಜಯ) ಎಂಬ ಹರಿಕಥೆ ಮಾಡಿಸುತ್ತಾರೆ.

👍ಮಾನವನಿಗೆ ಹಣಕ್ಕಿಂತ ಆರೋಗ್ಯವೇ ಮುಖ್ಯ . ಆರೋಗ್ಯವೇ ಭಾಗ್ಯ ಎಂಬ ಗಾದೆ ಇದೆ. ಆದರೆ ಆರೋಗ್ಯವನ್ನು ಕೊಡುವ ಸೂರ್ಯ ದೇವಾಲಯಗಳು ಇರುವುದು ಅಪರೂಪ. ಅದರಲ್ಲಿಯೂ ಗುರು ಶಿಷ್ಯರು ಒಂದೇ ಕಡೇ ನೆಲೆಸಿರುವ ಏಕೈಕ ಕ್ಷೇತ್ರ. ಜೀವನದಲ್ಲಿ ಒಮ್ಮೆಯಾದರೂ  ಹಿಂದೂಗಳು ಇಂತಹ ಅಪರೂಪದ  ಪುಣ್ಯಕ್ಷೇತ್ರ ದರ್ಶನ ಮಾಡಬೇಕು.

👍ಆರೋಗ್ಯಕ್ಕೆ ಅಧಿಪತಿಯಾದ ರವಿ ಯನ್ನು   ಪ್ರತಿನಿತ್ಯ ಪೂಜಿಸುವುದರಿಂದ ಆರೋಗ್ಯ ಲಭಿಸುವುದರ ಜೊತೆಗೆ ಹೃದಯಾಘಾತ(Heart Attack) ಸಂಭವಿಸುವುದಿಲ್ಲ.

👍ಪ್ರತಿ ನಿತ್ಯ ಸೂರ್ಯ ನಮಸ್ಕಾರ(ಯೋಗ) ಮಾಡುವುದರಿಂದ ಆರೋಗ್ಯ ಲಭಿಸುತ್ತದೆ.

👍ಆರೋಗ್ಯದ ಸಮಸ್ಯೆಗಳು,ಕಣ್ಣು ಮತ್ತು ಹೃದಯದ ಸಮಸ್ಯೆಗಳಿದ್ದಾಗ ಪ್ರಸಿದ್ಧ ಜ್ಯೋತಿಷಿಗಳು ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡಿ ಬರುವಂತೆ ಸಲಹೆ ನೀಡುತ್ತಾರೆ. ಹಾಗೂ ಆರೋಗ್ಯದಿಂದ ಚೇತರಿಸಿಕೊಳ್ಳಲು ಸ್ವಾಮಿ ಸನ್ನಿಧಿಯಲ್ಲಿ ಹೋಮ ಹವನ ನಡೆಸುತ್ತಾರೆ.

👍ಭಗವಾನ್ ಭಾಸ್ಕರನಿಂದ ನಮ್ಮ ದೇಹಕ್ಕೆ ಬೇಕಾದ ಡಿ.ಜೀವಸತ್ವ (D.Vitamin) ಸಿಗುತ್ತದೆ.

👍 ಆದಿತ್ಯ ಹೃದಯ ಸ್ತೋತ್ರ ಪಠಿಸುವುದರಿಂದ ಕೋರ್ಟ್,ಕಛೇರಿ,ವ್ಯಾಪಾರ,ವ್ಯವಹಾರಗಳಲ್ಲಿ ಜಯ ಲಭಿಸುತ್ತದೆ. ಶ್ರೀರಾಮನು ಅಗಸ್ತ್ಯ ಮುನಿಗಳ ಸಲಹೆಯಂತೆ ಆದಿತ್ಯ ಹೃದಯ ಸ್ತೋತ್ರ ಪಠಿಸಿ ರಾವಣನನ್ನು ಜಯಿಸಿದನು ಎಂಧು ರಾಮಾಯಣದಲ್ಲಿ ಉಲ್ಲೇಖವಾಗಿದೆ 

👍ನವಗ್ರಹಗಳ ಆದಿಪತಿ ಸೂರ್ಯ. ಹಾಗೂ ಆಂಜನೇಯ ಸ್ವಾಮಿ ಇರುವ ಕಡೆ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ.ಹೀಗಾಗಿ ಸೂರ್ಯ ಮತ್ತು ಆಂಜನೇಯ ಸ್ವಾಮಿ ಒಟ್ಟಿಗೆ ಇರುವ ಏಕೈಕ ದೇವಾಲಯ *

👍ಸಾಮಾನ್ಯವಾಗಿ ಎಲ್ಲಾ ದೇವಾಲಯದ ಬಾಗಿಲುಗಳು  ಪೂರ್ವಕ್ಕೆ ಇರುತ್ತವೆ. ಆದರೆ ಆಂಜನೇಯ ಸ್ವಾಮಿ ದೇವಾಲಯದ ಬಾಗಿಲು ದಕ್ಷಿಣಕ್ಕೆ ಏಕೆ ಇರುತ್ತದೆ ಎಂದು ಎಷ್ಟೋ ಜನ ಯೋಚಿರುವುದೂ  ಇಲ್ಲ.  ಬಾಗಿಲಿಗಿಂತ ಮುಖ್ಯವಾಗಿ ಆಂಜನೇಯ ಸ್ವಾಮಿ ಎಲ್ಲಿ ದಕ್ಷಿಣ ಮುಖವಾಗಿರುತ್ತಾನೆಯೊ ಅಲ್ಲಿ ವಿಶೇಷವಾದ ಶಕ್ತಿ ಇರುತ್ತದೆ. ಹಾಗೆಯೇ ಸೂರ್ಯಪುರದಲ್ಲಿ  ಆಂಜನೇಯ ಸ್ವಾಮಿ ದಕ್ಷಿಣ ಮುಖವಾಗಿದ್ದು ಅಪಾರ ಮಹಿಮೆಯನ್ನು ಹೊಂದಿದ ಕ್ಷೇತ್ರವಾಗಿದೆ. 

👍ಶ್ರೀಕೃಷ್ಣನ ಮಗ ಸಾಂಬ ಕೃಷ್ಣನ ಸಲಹೆಯಂತೆ  ಸೂರ್ಯದೇವನನ್ನು ಪೂಜಿಸಿ ತನ್ನ ಕುಷ್ಠರೋಗವನ್ನು ಗುಣಪಡಿಸಿಕೊಂಡನು ಎಂದು ಪುರಾಣಗಳಲ್ಲಿದೆ.

👍 ಸೂರ್ಯಾಂಜನೇಯ           ಸ್ವಾಮಿ  ಉತ್ಸವ ಮೂರ್ತಿಯನ್ನು ಹೊಸ ಮನೆ ಗೃಹಪ್ರವೇಶಗಳಿಗೆ  ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿದರೆ ವಾಸ್ತುದೋಷ ನಿವಾರಣೆ ಆಗಿ ಆ ಮನೆಯಲ್ಲಿ ಸುಖ,ಶಾಂತಿ , ಮತ್ತು ನೆಮ್ಮದಿ ,ನೆಲೆಸಿರುತ್ತದೆ ಎಂಬ ನಂಬಿಕೆ ಇದೆ.

👍ಶ್ರೀ ಕ್ಷೇತ್ರ ಸೂರ್ಯಪುರದಲ್ಲಿನ ಆಚಾರ,ಪದ್ದತಿಗಳು ಮತ್ತು ಪೂಜಾವಿದಿಗಳನ್ನು ಸೂರ್ಯ ಮನೆತನದವರು ನೆರವೇರಿಸಿಕೊಂಡು ಬರುತ್ತಿದ್ದಾರೆ.

👍ಸೂರ್ಯಪುರ ಮಠ ಸೂರ್ಯಪರಂಪರೆಯ ಗ್ರಹಸ್ಥಾಶ್ರಮ* ಪದ್ಧತಿಯ ಮಠವಾಗಿದೆ.

👍ಶ್ರೀ ಕ್ಷೇತ್ರ ಸೂರ್ಯಪುರ ಸಂಪೂರ್ಣ   ವಾಸ್ತು ರೀತಿಯಿಂದ ಕೂಡಿರುವುದರಿಂದ ಭಕ್ತರ  ಸಕಲ ಕೋರಿಕೆಗಳನ್ನು ಶ್ರೀ ಸೂರ್ಯಾಂಜನೇಯ ಸ್ವಾಮಿ ನೆರವೇರಿಸುತ್ತಿದ್ದಾನೆ.     

👍ಶ್ರೀ  ಸೂರ್ಯಾಂಜನೇಯ  ಸ್ವಾಮಿಗೆ  ಭಕ್ತರು ಹರಕೆ ರೂಪದಲ್ಲಿ ಮುಡಿ (ಮಂಡೆ) ಕೊಡುತ್ತಾರೆ.

 👍ಸುಮೇರು ಪ್ರಾಂತ್ಯದ ರಾಜ ಕೇಸರಿ ಮಹಾರಾಜ ಮತ್ತು ಅಂಜನಾದೇವಿಯ ಮಗ ಆಂಜನೇಯ.

👍ಕಶ್ಯಪ ಋಷಿ ಮತ್ತು ಅದಿತಿಯ ಮಗ ಸೂರ್ಯ.

👍 ಆಂಜನೇಯನು ತನ್ನ ಗುರುವಾದ ಸೂರ್ಯದೇವನಿಗೆ ಕೊಟ್ಟ ಮಾತಿನಂತೆ ತನ್ನ ಸುಮೇರು ರಾಜ್ಯವನ್ನು ತ್ಯಜಿಸಿ ಸೂರ್ಯದೇವನ ಅಂಶದಿಂದ ಜನಿಸಿದ ಕಿಷ್ಕಿಂದಾ ರಾಜನಾದ ಸುಗ್ರೀವನ ಬಳಿಗೆ ಹೋಗುತ್ತಾನೆ.ಹೀಗೆ ತನ್ನನ್ನು ನಂಬಿದವರ  ಕಾಪಾಡುತ್ತಾ ಶಕ್ತಿ,ಭಕ್ತಿ,ಯುಕ್ತಿ ಇವುಗಳ ಸಂಕೇತವಾಗಿದ್ದಾನೆ.  

       👍ಪ್ರತಿ ವರ್ಷ ಸೂರ್ಯ

ಹುಟ್ಟಿದ ದಿನವನ್ನು ರಥಸಪ್ತಮಿ

ಎಂದು ಆಚರಿಸಲಾಗುತ್ತದೆ.  👍ಪ್ರತಿ ವರ್ಷ ಮಾಘ ಮಾಸ ಶುಕ್ಲ ಪಕ್ಷ ಸಪ್ತಮಿ ದಿನ (ರಥಸಪ್ತಮಿ)  ಸೂರ್ಯಪುರದಲ್ಲಿ ರಥೋತ್ಸವ

ಜರುಗುತ್ತದೆ   

👍 ಮಕರ ಸಂಕ್ರಾಂತಿ ಮತ್ತು ರಥಸಪ್ತಮಿ ದಿನಸೂರ್ಯಮಾಲೆ ಧರಿಸಿ ಭಕ್ತರು ಶ್ರೀ ಕ್ಷೇತ್ರ ಸೂರ್ಯಪುರಕ್ಕೆ  ಬರುತ್ತಾರೆ.*

👍 ಸುಂದರ ಪ್ರಕೃತಿಯ ನಿಸರ್ಗದ ತಾಣ  ಸೂರ್ಯಪುರ, ಧ್ಯಾನ, ಯೋಗ, ಮತ್ತು ಮನಃಶಾಂತಿಗೆ ಸೂಕ್ತವಾದ ಸ್ಥಳ.

👍ಶ್ರೀ ಕ್ಷೇತ್ರ ಸೂರ್ಯಪುರ  ಮುಖ್ಯರಸ್ತೆಯಿಂದ 1.ಕಿ.ಮೀ.ಒಳಗೆ ಇರುವುದರಿಂದ ಹಾಗೂ ಕಾಡು ಪ್ರಾಣಿಗಳು ಇರುವುದರಿಂದ ಸಂಜೆ 6 ಗಂಟೆ ಒಳಗೆ ಸ್ವಾಮಿ ದರ್ಶನ ಮಾಡುವುದು ಒಳ್ಳೆಯದು.

👍ಸೂರ್ಯಪುರಕ್ಕೆ ದೂರದ ಊರುಗಳಿಂದ ಬರುವ ಭಕ್ತರು ಮತ್ತು ಪ್ರವಾಸಿಗರು ಉಳಿದುಕೊಳ್ಳಲು ರೂಮುಗಳು ದೊರೆಯುತ್ತವೆ.

👍ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಸಮುದಾಯ ಭವನ ಲಭ್ಯವಿದೆ. 

👍ಭಕ್ತರಿಗೆ ಪ್ರತಿದಿನ  ಟ್ರಸ್ಟ್ ವತಿಯಿಂದ ದಾಸೋಹ ವ್ಯವಸ್ಥೆ ಇರುತ್ತದೆ. 

👍ಸೂರ್ಯ ಮತ್ತು ಆಂಜನೇಯ ನೆಲೆಸಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಾಲಯ ತುಂಬಾ ಅಪರೂಪವಾಗಿದ್ದು, ಸ್ವಾಮಿ ದಕ್ಷಿಣಾಭಿಮುಖವಾಗಿರುವುದು ಇಲ್ಲಿನ ಮತ್ತೊಂದು ವಿಶೇಷ.   👍ಶ್ರೀ ಕ್ಷೇತ್ರದಲ್ಲಿ ನವಗ್ರಹವನ, ನಕ್ಷತ್ರವನ, ಮತ್ತು ರಾಶಿವನ ಇದ್ದು ಭಕ್ತರು ತಮ್ಮ ರಾಶಿ,ನಕ್ಷತ್ರ, ಮತ್ತು ಗ್ರಹಗಳ ಅನುಸಾರವಾಗಿ ಪ್ರಾರ್ಥನೆ ಸಲ್ಲಿಸಬಹುದು.  

👍   ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಓಂ ಶ್ರೀ  ಸೂರ್ಯಾಂಜನೇಯ ಸ್ವಾಮಿ ನಮಃ ಎಂದು

  48 ಬಾರಿ ಬರೆದು ಸ್ವಾಮಿಯ ಮುಂದೆ ಎಳ್ಳು ಬತ್ತಿ ಹಚ್ಚಿ ಹರಕೆ ಮಾಡಿಕೊಂಡು ಅರಿಶಿಣ ಹಚ್ಚಿ ಕಾಣಿಕೆ ಇಟ್ಟು ನಂತರ ಕೋರಿಕೆ ಪತ್ರವನ್ನು ಹುಂಡಿಯಲ್ಲಿ ಹಾಕಿ ಹೋದರೆ ಖಂಡಿತವಾಗಿ ತಮ್ಮ ಕೋರಿಕೆ ನೆರವೇರುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.  

👍ಸೂರ್ಯಪುರದ ಗುಟ್ಟೆಯ  ಮೇಲಿರುವ ಗುಟ್ಟೆ ಗಣಪತಿ ದರ್ಶನ ಮೊದಲು ಮಾಡಿ ನಂತರ ಸೂರ್ಯಾಂಜನೇಯ  ಸ್ವಾಮಿ ದರ್ಶನ ಮಾಡುವುದು ಇಲ್ಲಿನ ಸಂಪ್ರದಾಯ. 

👍 ಶ್ರೀ ಸೂರ್ಯಾಂಜನೇಯ ಸ್ವಾಮಿ ಮತ್ತು ಸೂರ್ಯಪುರ ರಂಗನಾಥ ಸ್ವಾಮಿ ದರ್ಶನದ ನಂತರ ಸನಿಹದಲ್ಲೇ ಇರುವ ಆದಿಹಳ್ಳಿ ಚೌಡೇಶ್ವರಿ ದೇವಾಲಯಕ್ಕೆ ತೆರಳಿ ಹೂ ಪ್ರಸಾದ ಕೇಳುತ್ತಾರೆ.

👍 ಟ್ರೆಕ್ಕಿಂಗ್ ಗೆ ಹೋಗಬಯಸುವ ಚಾರಣ ಪ್ರಿಯರು ಸನಿಹದಲ್ಲೇ ಇರುವ  ಮಹಾಲಕ್ಷ್ಮಿ ಬೆಟ್ಟ ಇಲ್ಲಿಗೆ ಹೋಗಬಹುದು.

👍 ಆರೋಗ್ಯ,ಆಯುಸ್ಸು ಐಶ್ವರ್ಯ, ಸಂತಾನ ಬಾಗ್ಯ, ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ, ಅಪಾರ ಮಹಿಮೆಯನ್ನು ಹೊಂದಿರುವ ತುಂಬಾ ಶಕ್ತಿಶಾಲಿಯಾದ ಶ್ರೀ ಸೂರ್ಯಾಂಜನೇಯ ಸ್ವಾಮಿ ನೆಲೆಸಿರುವ ಸೂರ್ಯಪುರ ಒಂದು ಪುಣ್ಯ ಕ್ಷೇತ್ರವಾಗಿದೆ.

ಸೂರ್ಯಪುರ ಇಲ್ಲಿಗೆ ಭೇಟಿ ಕೊಡುವ ಭಕ್ತರು ಗೂಗಲ್ ಮ್ಯಾಪ್ ನಲ್ಲಿ ಈ ರೀತಿ ಸರ್ಚ್ ಮಾಡಿ ನೋಡಬಹುದು.

Suryanjaneya temple ಸೂರ್ಯಾಂಜನೇಯ ದೇವಸ್ಥಾನ 

Suryapura mutt ಸೂರ್ಯಪುರ ಮಠ

ಶ್ರೀ ಕ್ಷೇತ್ರ ಸೂರ್ಯಪುರ  ತುಮಕೂರು ಇಲ್ಲಿಂದ 24.ಕಿ.ಮೀ. ಮತ್ತು ಬೆಂಗಳೂರು ಇಲ್ಲಿಂದ 60.ಕಿ.ಮೀ. ದೂರದಲ್ಲಿ ಇದೆ.

ಹೆಚ್ಚಿನ ವಿವರಗಳಿಗೆ ಸೂರ್ಯಪುರ ಆಶ್ರಮದ ಮೊಬೈಲ್ ಸಂಖ್ಯೆ 9448270327 ಮತ್ತು 9008335288. ಸಂಪರ್ಕಿಸಬಹುದು.

Tags

Post a Comment

0Comments

Post a Comment (0)