ಕರ್ನಾಟಕದ ಚರಿತ್ರೆಯಲ್ಲಿ ತಮ್ಮ ಸುದ್ದಿ ವಾಹಿನಿಯು ಉತ್ತಮವಾದ ಸಾಮಾಜಿಕ ನಿರ್ವಹಣೆ ಮಾಡುತ್ತಾ ಮತ್ತು ನೈಜ ಸುದ್ದಿಗಳನ್ನು ನೇರವಾಗಿ, ದಿಟ್ಟವಾಗಿಬಿತ್ತರಿಸುತ್ತಾ ಬಡವರ, ನೊಂದ ಜನರ ಕಣ್ಣೀರನ್ನು ಒರೆಸುತ್ತಾ ಅನೇಕಾನೇಕ ಜನರ ಜೀವನಗಳಿ ಗೆ ದಾರಿದೀಪವಾಗುತ್ತಾ, ತಾವು ಮಾಡುತ್ತಿರುವ ಕಾರ್ಯಗಳು ತುಂಬಾ ಹೆಮ್ಮೆಯ ಸಂತೋಷದ ವಿಷಯ.
ತಮಗೆ ವಿಶೇಷವಾಗಿ ಈ ಪತ್ರ ಬರೆಯಲು ಕಾರಣ
ಕಳೆದ 14 ವರ್ಷಗಳಿಂದ ಯಾವ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಗೆಹರಿಸದ ಸಮಸ್ಯೆ
ತಮ್ಮ ಮುಂದೆ ತರುತ್ತಿದ್ದೇನೆ. ಇದನ್ನು ತಾವು ಬಗೆಹರಿಸುತ್ತೀರೆಂದು ಆಚಲವಾದ ಆಶಾಭಾವ ಹೊಂದಿದ್ದೇನೆ.
ತಮಗೆ ಈ ಪತ್ರ ಬರೆಯಲು ಕಾರಣ “ ಅನುದಾನಿತ
ಪ್ರೌಢ ಶಾಲೆಗಳಲ್ಲಿ ಅಭದ್ರತೆಯಲ್ಲಿರುವ ವೃತ್ತಿ ಶಿಕ್ಷಕರು” (ಚಿತ್ರಕಲೆ, ಸಂಗೀತ, ಹೋಲಿಗೆ,
ತೋಟಗಾರಿಕೆ). ಸದರಿ ಶಿಕ್ಷಕರಿಗೆ ಜನ ಬಲವಿಲ್ಲ. ಹಣ ಬಲವಿಲ್ಲ, ಅದೃಷ್ಟವಂತೂ ಇಲ್ಲವೇ ಇಲ್ಲ.
ಸದರಿ ಶಿಕ್ಷಕರು ಕಳೆದ 18-20 ವರ್ಷಗಳಿಂದ ನಿರಂತವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇನ್ನೂ
ವೇತಾನುದಾನಕ್ಕೆಒಳಪಟ್ಟಿರುವುದಿಲ್ಲ. ಇವರಿಗೆ ಅಡ್ಡಿಯಾಗಿರುವ ಶಿಕ್ಷಣ ಇಲಾಖೆಯ ಆದೇಶ
02.02.2000.ತಾವು ಈ ಹಿಂದೆ ತಮ್ಮ ಸರ್ಕಾರದ ಆಡಳಿತ ಅವಧಿಯಲ್ಲಿ 02.02 2000
ಆದೇಶವನ್ನುರದ್ದುಪಡಿಸಿ ಹೊಸ ಆದೇಶವನ್ನುಸಂಐಡಿ 166 ಎಸ್.ಎಲ್.ಬಿ 200 .ದಿನಾಂಕ 16.06.2007
ರಲ್ಲಿಮಾಡಿರುತ್ತೀರಿ. ಆದರೆ ಈ ಆದೇಶಕ್ಕೆ ಆರ್ಥಿಕ ಇಲಾಖೆ ಅನುಮತಿ ನೀಡಿರುವದಿಲ್ಲ. ಹಾಗಾಗಿ
ಸದರಿ ಶಿಕ್ಷಕರ ಜೀವನ ತುಂಬಾ ಅತಂತ್ರವಾಗಿದೆ ಕಳೆದ 21 ವರ್ಷದಲ್ಲಿ ಯಾರೂ ಬಗೆಹರಿಸದ ಸಮಸ್ಯೆ ಈಗ
ನಾನು ತಮ್ಮ ಮುಂದೆ ತರುತ್ತಿದ್ದೇನೆ. ಕಾರಣ ಇಷ್ಟ ಈ ಬಡ ನೋಂದ ಶಿಕ್ಷಕರ ಜೀವನ, ಜೀವನ
ನಿರ್ವಹಣೆಯನ್ನು ನಾನು ಕಣ್ಣಾರೆ ಕಂಡಿರುತ್ತೇನೆ ತುಂಬಾ ತುಂಬಾಕಷ್ಟಕರವಾಗಿದೆ. ಬೇರೆ ಕಡೆ ಕೆಲಸ
ಮಾಡಲು ವಯಸ್ಸು ಇರುವುದಿಲ್ಲ. ಹಾಗಾಗಿ ನಾನು ತಮ್ಮಲ್ಲಿಕಳಕಳಿಯಿಂದ ಬಡ ನೊಂದ ಶಿಕ್ಷಕರ ಪರವಾಗಿ
ವಿನಂತಿಸಿಕೊಳ್ಳುತ್ತಿದ್ದೇನೆ.
ಸದರಿ ಶಿಕ್ಷಕರ ಕಡತ ಸಂಖ್ಯೆ ED 201 SES 2011 ಆಗಿರುತ್ತದೆ. ಸದರಿ ಕಡತ ಪ್ರಸ್ತುತ
11-11-2020 ರಂದು ಇಲಾಖೆಯುಮುಕ್ತಾಯಗೊಳಿಸಿರುತ್ತದೆ. ಈ ಕಡತವನ್ನು ತರಿಸಿಕೊಂಡು ಮನಃ
ಪರಿಶೀಲಿಸಿ ಈ ಕಡತದಲ್ಲಿರುವ ಕೇವಲ 93 ಜನ ನೊಂದ ಬಡ ಶಿಕ್ಷಕ ಮತ್ತು ಶಿಕ್ಷಕರ ಕುಟುಂಬಗಳಿವೆ. ಈ
ಕುಟುಂಬಗಳಿಗೆ ತಾವು ದಾರಿ ದೀಪವಾಗುತ್ತೀರೆಂದುನಂಬಿದ್ದೇನೆ.ಸದರಿ ವಿಷಯದ ಪರವಾಗಿ ತಾವು ನಮಗೆ
ತಮ್ಮನ್ನು ಭೇಟಿ ಮಾಡಲು ಅವಕಾಶ ಕೊಟ್ಟರೆ ತಮ್ಮನ್ನು ಭೇಟಿ ಮಾಡಿ ಸದರಿ ಕಡತದ ಬಗ್ಗೆ ಕೂಲಂಕುಷವಾಗಿ
ವಿವರಿಸುತ್ತೇವೆ. ತಮ್ಮ ಉತ್ತರಕ್ಕಾಗಿಕಾಯುತ್ತಿರುತ್ತೇನೆ.