ಮಹರ್ಷಿ ವಾಲ್ಮೀಕಿಯವರು ಭರತ ಖಂಡದ ಅಸ್ಮಿತೆ - ದರೂರು ಶಾಂತನಗೌಡ

varthajala
0

ಬಳ್ಳಾರಿ ಅ 20. ನಗರದ ಪ್ರತಿಷ್ಠಿತ ವೀ.ವಿ.ಸಂಘದ ವೀರಶೈವ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೀ.ವಿ.ಸಂಘದ ಸಹಕಾರ್ಯದರ್ಶಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ  ದರೂರು ಶಾಂತನಗೌಡರು, ಮಹರ್ಷಿ ವಾಲ್ಮೀಕಿಯವರು ಮತ್ತು ಅªರು ರಚಿಸಿದ ಮಹಾಕಾವ್ಯ ಶ್ರೀಮದ್ ರಾಮಾಯಣ ಜಗತ್ತಿನ ಅತ್ಯಂತ ಶ್ರೇಷ್ಠವಾದ ಮಹಾಕಾವ್ಯವಾಗಿದ್ದು ಸಾವಿರಾರು ವರ್ಷಗಳ ನ0ತರವೂ ಜನಮಾನಸದಲ್ಲಿ ಹಚ್ಚಹಸಿರಾಗಿ ಉಳಿದಿದೆ. 



ಇದು ಅಖಂಡ ಭಾರತದ ಜನತೆಯ ಅಸ್ಮ್ಮಿತೆ ಯಾಗಿದ್ದು ಇಂದಿಗೂ ದಾರಿದೀಪವಾಗಿ ಬೆಳಗುವ ಏಕೈಕ ಮಹಾಕಾವ್ಯವಾಗಿದೆ. ಇಂತಹ ಸರ್ವಶ್ರೇಷ್ಠ ಮಹರ್ಷಿ ವಾಲ್ಮೀಕಿಯವರ ಭೋಧನೆಗಳನ್ನು ಅಳವಡಿಸಿಕೊಂಡು ಸಂಸ್ಕಾರಯುತ ಜೀವನ ನಡೆಸುವುದು ಸಾದ್ಯ ಎಂದರು.ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರಾಣಿಶಾಸ್ರö್ತ ವಿಭಾಗದ ಮುಖ್ಯಸ್ಥ ಡಾ.ಜಿ.ಮನೋಹರ ರವರು ಮಹರ್ಷಿ ವಾಲ್ಮೀಕಿ ಯವರ ಜೀವನದ ಎರಡು ಪಮುಖ ಘಟ್ಟಗಳಾದ ದರೋಡೆಕೋರನಾದ ರತ್ನಾಕರ ಮಹರ್ಷಿಯಾಗಿದ್ದು ಮತ್ತು ಮಹಾಕಾವ್ಯವಾದ ಶ್ರೀಮದ್ ರಾಮಾಯಣ ರಚನೆಯಾದ ಸಂಧರ್ಭವವನ್ನು ಮತ್ತು ಅದರ ಶ್ರೇಷ್ಠತೆಯನ್ನು ವಿವರಿಸಿದರು. ಹಿರಿಯ ಪ್ರಾಧ್ಯಾಪಕರಾದ ಪ್ರೊ.ಡಬ್ಲೂö್ಯ.ಶರಣಪ್ಪ, ಡಾ.ಡಿ.ನಾಗೇಶ ಶಾಸ್ರಿö್ತ, ಪ್ರೊ.ಪಿ.ಸುರೇಶ್ , ಪ್ರೊ.ಎಸ್.ರೇವಣಸಿದ್ದಪ್ಪ ಹಾಗೂ ಇತರೆ ಉಪನ್ಯಾಸಕ ವೃಂದದವರು ಮತ್ತು ಭೋದಕೇತರ ಸಿಬ್ಬಂದಿ ಭಾಗವಹಿಸಿದ್ದರು.


Tags

Post a Comment

0Comments

Post a Comment (0)