ಸಾಮಾಜಿಕ ಐಕ್ಯವನ್ನುತರುವ ದೇವಿಯರ ಹಬ್ಬ ನವರಾತ್ರಿ

varthajala
0
ಡಾ:ರಾಜಶ್ರೀ. ಕೆ.ನಾಯ್ಕ.ಉಪನ್ಯಾಸಕಿ, 
ಜಿ. ಚನ್ನಪ್ಪ ಪದವಿಪೂರ್ವ ಮಹಾವಿದ್ಯಾಲಯ, 
ಆನಗೋಡು.ದಾವಣಗೆರೆ-ಜಿಲ್ಲೆ.

ಮೊಬೈಲ್ ಸಂಖ್ಯೆ : 9449483034  

ನವರಾತ್ರಿ, ಮಹಾನವಮಿ, ಹೆಸರುಗಳಿಂದ ಆಚರಿಸಲ್ಪಡುವ ಈ ಹಬ್ಬಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಆಯಾಮಗಳನ್ನು ಹೊಂದಿದೆ. ಸಾಮಾಜಿಕ ಐಕ್ಯವನ್ನುತರುವ ಒ0ದು ಮಹಾ ಹಬ್ಬವಾಗಿದೆ. ಈ ಹಬ್ಬಕ್ಕೆ ವಿಶೇಷವಾದಐತಿಹಾಸಿಕ ಪರಂಪರೆ, ಚಾರಿತ್ರಿಕ ಆಧಾರ, ಪೌರಾಣಿಕ ಹಿನ್ನೆಲೆ ಹಾಗೂ ತನ್ನದೇಆದ ಮಹತ್ವಗಳಿವೆ.ಸರ್ವಮತ ಪಂಥಗಳ ಬಂಧು-ಬಾ0ಧವರು ಒ0ದಾಗಿಆಚರಿಸುವ ಶಕ್ತಿ ಆರಾಧನೆಯ ಹಬ್ಬ. ಉತ್ತರಭಾರತದಲ್ಲಿದುರ್ಗಾಪೂಜೆ ವಿಶೇಷವೆನಿಸಿದರೆ ದಕ್ಷಿಣಭಾರತದಲ್ಲಿಚಾಮುಂಡಿಯಆರಾಧನೆ ವಿಶಿಷ್ಟವಾದುದು. ಕರ್ನಾಟಕದಲ್ಲಿ ನಾಡಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ವಿಜಯನಗರದಅರಸರು ಹಂಪಿಯ ಮಹಾನವಮಿ ದಿಬ್ಬದಲ್ಲಿ ಅಂದಿನ ಕಾಲಘಟ್ಟದಲ್ಲಿ ವಿಜೃಂಭಣೆಯಿAದ ನವರಾತ್ರಿಉತ್ಸವ ನಡೆಸುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಪತನಾನಂತರ ಪ್ರವರ್ಧಮಾನಕ್ಕೆ ಬಂದ ಮೈಸೂರುಒಡೆಯರ ಮನೆತನದವರುದಸರಾಉತ್ಸವಕ್ಕೆ ಸಾಂಸ್ಕೃತಿಕಆಯಾಮವನ್ನೇ ನೀಡಿದರು. ಈ ಪರಂಪರೆಯನ್ನು ಇಂದಿನವರೆಗೂಅವ್ಯಾಹತವಾಗಿ ಸಾಗಿಸಿಕೊಂಡು ಬಂದಕೀರ್ತಿ ಮೈಸೂರಿನಒಡೆಯರಿಗೆ ಸಲ್ಲುತ್ತದೆ.ಮೈಸೂರಿನ ಮಹಾರಾಜರಕಾಲದಲ್ಲಿ ಮಹಾರಾಜರ ಮೆರವಣಿಗೆ ಜಗತ್ಪçಸಿದ್ಧವಾಗಿತ್ತು.ಕ್ರಿ.ಶ. 1610 ರಲ್ಲಿರಾಜಒಡೆಯರ್‌ಅವರಿಂದಆರAಭಿಸಲಾದಜAಬೂಸವಾರಿ ಇಂದಿಗೂ ದಸರೆಯ ಪ್ರಮುಖಆಕರ್ಷಣೆಯಾಗಿ ನವರಾತ್ರಿಯ ವಿಶೇಷತೆಯಾಗಿ ಗಮನ ಸೆಳೆಯುತ್ತದೆ.ಈಗ ಅದು ಸರಕಾರದಿಂದ ನಡೆಸುವ ಭುವನೇಶ್ವರಿಯ ಮೆರವಣಿಗೆಯಾಗಿದೆ.ಜಂಬೂಸವಾರಿ, ದೀಪಾಲಂಕಾರ, ಲಲಿತ ಕಲೆಗಳ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ 10 ದಿನಗಳಕಾಲ ನಡೆಯುವದಸರಾ ಮಹೋತ್ಸವದೇಶ ವಿದೇಶಗಳ ಜನರನ್ನುಆಕರ್ಷಿಸುತ್ತದೆ.


ಹಳೇ ಮೈಸೂರ ಭಾಗದಲ್ಲಿ ಮನೆ ಮನೆಗಳಲ್ಲಿ ಗೊಂಬೆ ಕೂಡಿಸಿ ಜನರನ್ನು ಆಮಂತ್ರಿಸಿ ಹಾಡು ಹೇಳುತ್ತಾರೆ. ಕರ್ನಾಟಕದಉತ್ತರಭಾಗದಲ್ಲಿಇದನ್ನು ನಾಡಹಬ್ಬವನ್ನಾಗಿಆಚರಿಸುತ್ತಾರೆ.ಈ ಸಂದರ್ಭದಲ್ಲಿಒAಬತ್ತು ದಿನಗಳವರೆಗೂ ವಿದ್ವಾಂಸರ ಉಪನ್ಯಾಸಗಳನ್ನು ಏರ್ಪಡಿಸಿ ಸಾಹಿತ್ಯದ ಹಬ್ಬವನ್ನಾಗಿ ಮಾಡುತ್ತಾರೆ.

ದೇವಿ ಉಪಾಸನೆಗೆ ನವರಾತ್ರಿಅತ್ಯಂತ ಮಹತ್ವದ ಪರ್ವ. ಇದು ಶಕ್ತಿ ಆರಾಧನೆಯ ಹಬ್ಬ. ಜಗನ್ಮಾತೆಯುಚಂಡಿಯಾಗಿ, ಚಾಮುಂಡಿಯಾಗಿ ಮಹಾಲಕ್ಷಿö್ಮಯಾಗಿ ಭಾರತಿಯಾಗಿ ಹೀಗೆ ಇನ್ನೂ ಬೇರೆ ಬೇರೆ ಅವತಾರಗಳಲ್ಲಿ ಅನೇಕ ದೈತ್ಯರ ಸಂಹಾರವನ್ನು ಮಾಡಿದ ಕಥೆಯುಳ್ಳ ದೇವಿ ಮಹಾತ್ಮೆ ಪುರಾಣವನ್ನು ಅಥವಾ ಸಪ್ತಶತಿಯನ್ನು ದೇವಾಲಯಗಳಲ್ಲಿ, ಮನೆ ಮನೆಗಳಲ್ಲಿ ಪಾರಾಯಣ ಮಾಡುತ್ತಾರೆ.ಆಸ್ತಿಕರು ಈ ಅವಧಿಯಲ್ಲಿ ದೇವಿ ಮಹಾತ್ಮೆಯನ್ನು ಪಾರಾಯಣ ಮಾಡಿ ವಿಜಯದಶಮಿಯಂದು ಸಂಪನ್ನಗೊಳಿಸುತ್ತಾರೆ. ದೇವಿ ಮಹಾತ್ಮೆಎಂಬುದು ಲೋಕೋತ್ತರವಾದಚರಿತ್ರೆ. ಇದಕ್ಕೆದುರ್ಗಾಸಪ್ತಶತಿ ಎಂಬ ಹೆಸರೂಇದೆ.ಮಾರ್ಕಂಡೇಯ ಪುರಾಣದ 13 ಅಧ್ಯಾಯಗಳಲ್ಲಿ 700 ಶ್ಲೋಕಗಳನ್ನೊಳಗೊಂಡ ಜಗನ್ಮಾತೆಯಾದದೇವಿಯಅದ್ಭುತಕಥೆ ಹಾಗೂ ವರ್ಣನೆಗಳು ಎಲ್ಲರನ್ನೂ ರೋಮಾಂಚನಗೊಳಿಸುವAಥದ್ದು.ಅದರಲ್ಲಿ ಮಾರ್ಕಂಡೇಯ ಮುನಿ ತನ್ನ ಶಿಷ್ಯ ಕ್ರೌಷ್ಟುಕಿಗೆದೇವಿ ಮಹಾತ್ಮೆಯನ್ನು ವಿವರಿಸಿರುತ್ತಾರೆ.ಇದರಲ್ಲಿ ಮೂರು ಮನೋಜ್ಞವಾದ ಚರಿತ್ರೆಗಳಿವೆ. ಇದುತ್ರಿಗುಣಾತ್ಮಕವಾದತಮೋ, ರಜೋ, ಸತ್ವಗುಣಗಳನ್ನು ಪ್ರತಿನಿಧಿಸುವಂಥದ್ದು, ಪ್ರಥಮಚರಿತ್ರೆ ಮಹಾಕಾಳಿಗೆ ಸಂಬAಧಿಸಿದ್ದು, ದ್ವಿತೀಯಚರಿತ್ರೆ ಮಹಾಲಕ್ಷಿö್ಮಗೆ ಸಂಬAಧಪಟ್ಟದ್ದು.ತೃತೀಯಾಧ್ಯಾಯ ಮಹಾಸರಸ್ವತಿಗೆ ವಿನಯೋಗಿತವಾಗಿದೆ. ಅವುಗಳಲ್ಲಿ ಕೆಲವು ಕಥೆಗಳೆಂದರೆ ಮಧು-ಕೈಟಭರ ವಧೆ, ಮಹಿಷಾಸುರವಧೆ, ಚಂಡ-ಮುAಡ ಹಾಗೂ ಶುಂಭ-ನಿಶುAಭರ ವಧೆ.ಹೀಗೆ ದುಷ್ಟ ಶಕ್ತಿಯನ್ನು ಸಂಹರಿಸುವ ಮಹಾಸರಸ್ವತಿಯ ಶಕ್ತಿಯನ್ನು ವರ್ಣಿಸಲಾಗುತ್ತದೆ.

ಮಧು-ಕೈಟಭರ ವಧೆ:

ಕಲ್ಪಾಂತರದಲ್ಲಿ ಬ್ರಹ್ಮಾಂಡವೆಲ್ಲವೂ ಜಲಮಯವಾಗಿತ್ತು.ಆಗ ಭಗವಂತನಾದ ನಾರಾಯಣನು ಆದಿಶೇಷನ ಮೇಲೆ ಮಲಗಿದ್ದಾಗ ಮಹಾವಿಷ್ಣುವಿನ ಕರ್ಣದಿಂದ ಮಧು-ಕೈಟಭರೆಂಬ ಅಸುರರು ಹುಟ್ಟುತ್ತಾರೆ.ಅವರು ಸೃಷ್ಟಿಕರ್ತನಾದ ಬ್ರಹ್ಮನನ್ನೇಕೊಲ್ಲಲು ಮುಂದಾಗುತ್ತಾರೆ.ಆಗ ಬ್ರಹ್ಮನು ತಾಮಸೀಗುಣ ಪ್ರಧಾನಳಾದ ಯೋಗನಿದ್ರಾದೇವಿಯನ್ನು ಪ್ರಾರ್ಥಿಸಿ ಆಕೆಯ ಮೂಲಕ ವಿಷ್ಣುವನ್ನು ಎಚ್ಚರಗೊಳಿಸುತ್ತಾನೆ. ಎಚ್ಚರಗೊಂಡ ಮಹಾವಿಷ್ಣುವು ಉದ್ಧಟರಾದ ಮಧು-ಕೈಟಭರನ್ನು ಸಂಹಾರ ಮಾಡುತ್ತಾನೆ. ವಿಷ್ಣುವಿನ ಮೂಲಕ ಈ ಅಸುರರ ನಾಶಕ್ಕೆ ಕಾರಣಳಾದ ಈ ದೇವಿಗೆ ಮಧುಕೈಟಭನಾಶಿನಿ ಎಂಬ ಹೆಸರು ಬರುತ್ತದೆ.ಇದುದೇವಿ ಮಹಾತ್ಮೆಯಲ್ಲಿ ಬರುವ ಪ್ರಥಮಚರಿತ್ರೆ ಮಹಾಕಾಳಿಗೆ ಸಂಬAಧಿಸಿದ್ದು.

ಮಹಿಷಾಸುರ ವಧೆ :

ಮಹಿಷಾಸುರಒಬ್ಬದೊಡ್ಡದೈತ್ಯ.ಅವನ ಉಪಟಳದಿಂದ ಮೂರು ಲೋಕಗಳು ತತ್ತರಿಸಿದವು.ದೇವತೆಗಳೂ ಸ್ಥಾನ ಭ್ರಷ್ಟçರಾದರು.ತ್ರಿಮೂರ್ತಿಗಳುಏಕಾಕಿಯಾಗಿಅವನ್ನುಎದುರಿಸದಾದರು. ಆಗ ಎಲ್ಲರೂಒಟ್ಟುಗೂಡಿಚಿಂತನೆ ನಡೆಸಿದಾಗ ಒಬ್ಬೊಬ್ಬರಿಂದಒAದೊAದು ತೇಜಸ್ಸಿನ ಅಂಶ ಹೊರಬಂದು ಮಹಾಲಕ್ಷಿö್ಮಯಅವತಾರವಾಯಿತು.ದೇವತೆಗಳು ತಮ್ಮತಮ್ಮ ಆಭರಣಗಳಿಂದ ಅಲಂಕರಿಸಿದರು.ತಮ್ಮತಮ್ಮ ಆಯುಧಗಳನ್ನು ಕೊಟ್ಟು ಬಲಪಡಿಸಿದರು.ಹೀಗೆ ಸಮಷ್ಟಿ ಶಕ್ತಿ ಪಡೆದ ಮಹಾಲಕ್ಷಿö್ಮ ಮಹಿಷನನ್ನು ಸಂಹರಿಸಿದಳು.

ಈ ಕಥೆಗಳಿಂದ ನಾವು ತಿಳಿದುಕೊಳ್ಳಬಹುದಾದತತ್ವವೆಂದರೆ ನಮ್ಮನ್ನುತೊಂದರೆಗೆ ಒಳಪಡಿಸುವ ಸಮಸ್ಯೆಗಳಾದ ಬಡತನ, ಅಜ್ಞಾನ ಮತ್ತು ನಿರುದ್ಯೋಗ ಮುಂತಾದವುಗಳೆಲ್ಲವೂ ಒಂದು ಮಹಿಷನ ರೂಪ. ಈ ಎಲ್ಲ ಸಮಸ್ಯೆಗಳ ನಿವಾರಣೆ ವ್ಯಕ್ತಿಗತ ಪ್ರಯತ್ನದಿಂದ ಸಾಧ್ಯವಾಗದು.ಅದಕ್ಕೆಎಲ್ಲರ ಸಂಕಲ್ಪಶಕ್ತಿಯಿ0ದ ಉದಯಿಸುವ ಸಂಘ ಶಕ್ತಿ ಬೇಕು ಈ ಸಂಘಶಕ್ತಿಯೇ ಮಹಾಲಕ್ಷಿö್ಮ.ಈ ಶಕ್ತಿಯಿಂದ ಹತನಾಗಬೇಕಾದದೈತ್ಯಶಕ್ತಿಯೇ ನಮ್ಮಅಜ್ಞಾನ, ಬಡತನಇತ್ಯಾದಿ.ಹೀಗೆ ನವರಾತ್ರಿಅರ್ಥಾತ್ ವಿಜಯದಶಮಿ ನಮ್ಮ ನಿತ್ಯಜೀವನದಲ್ಲಿ ನಿತ್ಯ ನಡೆಯುತ್ತಿರಬೇಕು.ದುಷ್ಟ ಶಕ್ತಿ ನಾಶವಾಗಿ ಶಿಷ್ಟ ಶಕ್ತಿ ವೃದ್ಧಿಗೊಂಡಾಗ ನಮ್ಮ ವೈಯುಕ್ತಿಕ ಬದುಕು ಮತ್ತು ಸಾಮಾಜಿಕ ಬದುಕು ಸುಖಕರವಾಗುತ್ತದೆ.ಇದೇ ಈ ವಿಜಯದಶಮಿಯ ಸಂದೇಶ.

ಈ ಹಬ್ಬವು ಅಶ್ವಿಜ ಮಾಸದ ಬಹುಳ ಪಾಡ್ಯಮಿಯಿಂದ ಪ್ರಾರಂಭವಾಗಿ ವಿಜಯದಶಮಿಯಂದು ಕೊನೆಗೊಳ್ಳುತ್ತದೆ.ಈ ಮಧ್ಯೆ ಬರುವ ಸಪ್ತಮಿ, ಅಷ್ಟಮಿ, ನವಮಿ ಹಾಗೂ ದಶಮಿಗಳಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ.

ನವರಾತ್ರಿಯ ಹಿಂದಿನ ದಿನ ಮಹಾಲಯಅಮಾವಾಸ್ಯೆ.ಅಮಾವಾಸ್ಯೆಎಂದರೆಕತ್ತಲು, ಈ ಕತ್ತಲಿನಲ್ಲೂ ಮಹಾ+ಲಯ, ಮಹಾ ವಿನಾಶ ಅಂದರೆ ಮಹಾನ ಪರಿವರ್ತನೆಆಗುವುದು.ಆ ದಿನ, ಗತಿಸಿದ ಸರ್ವ ಪಿತೃಗಳಿಗೆ ತರ್ಪಣ ಹಾಗೂ ಭಕ್ಷ, ಭೋಜನಾದಿಗಳನ್ನು ಮಾಡಿಅರ್ಪಿಸುತ್ತಾರೆ.ಆದರಿಂದ ಈ ದಿನಕ್ಕೆ ಸರ್ವಪಿತೃಅಮಾವಾಸ್ಯೆಎಂದೂಕರೆಯುತ್ತಾರೆ.ನವರಾತ್ರಿಯಲ್ಲಿ ಲಲಿತಪಂಚಮಿಕೂಡ ಬರುವುದು.

ನವರಾತ್ರಿಯಲ್ಲಿ ದೀಪಹಾಕುವ ಸಂಪ್ರದಾಯವಿರುವದು. ಹೆಣ್ಣುಮಕ್ಕಳು ಆಗ ವೆಂಕಟೇಶ ಪಾರಿಜಾತ ಹಾಡು ಹೇಳುವರು. ದುರ್ಗಾದೇವಿಯನ್ನು ಪ್ರತಿಷ್ಟಾಪಿಸಿ ಘಟ್ಟ ಸ್ಥಾಪನೆ ಮಾಡಿದುಷ್ಟ ಶಕ್ತಿಗಾಗಿ ಬೆಳಕು ಬರಲಿ ಎಂದು ಹಾರೈಸುವುದೇ ನಂದಾದೀಪದಉದ್ದೇಶ. ಈ ನಿರಂತರ ದೀಪದ ವೃತವನ್ನು ನಿಷ್ಠೆಯಿಂದ ಪಾಲಿಸುವವರು.

ಎಂಟನೆಯ ದಿನ ದುರ್ಗಾಷ್ಟಮಿ. ದುರ್ಗಾಷ್ಟಮಿಗೆ ಶಕ್ತಿಪೂಜೆ, ಮೊದಲಿನ ಎಂಟು ದಿನಗಳಲ್ಲಿ ಶಕ್ತಿ ದೇವತೆಯನ್ನು ಪ್ರತಿದಿನ ಒಂದೊAದು ವಾಹನದ ಮೇಲೆ ಕೂಡ್ರಿಸಿ ವಿಜೃಂಭಣೆಯಿ0ದ ಮೆರೆಯಿಸಲಾಗುತ್ತದೆ.ಲೋಕಕಂಟಕರಾದ ಶುಂಭ-ನಿಶು0ಭರನ್ನು ಸಂಹರಿಸಿ ದೇಶಕ್ಕೆ ಶಾಂತಿಯನ್ನು ಬೀರಿದ ಶಕ್ತಿಯನ್ನು ಪ್ರದರ್ಶಿಸಲಾಗಿದೆ. ವಾರಾಹಿ, ಬ್ರಾಹ್ಮಿ, ಕುಮಾರಿ, ಕತ್ಯಾಯಿನಿ, ಶಾರದಾ, ದುರ್ಗಿ, ಕಾಲರಾತ್ರಿ, ಮಹಾಗೌರಿ, ಲಲಿತಾತ್ರಿ, ಪುರಸುಂದರಿ ಹೀಗೆ ದಿನಕ್ಕೊಂದುರೂಪದಲ್ಲಿದೇವಿಯ ಸ್ವರೂಪವನ್ನುಆರಾಧಿಸುತ್ತಾ, ವಿಶೇಷ ಭಕ್ಷö್ಯಗಳಿಂದ ನೈವೇದ್ಯಗಳನ್ನರ್ಪಿಸುತ್ತಾ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುವುದು ನವರಾತ್ರಿಯ ಮತ್ತೊಂದು ವಿಶೇಷ.

ಅಶ್ವೀನ-ಕಾರ್ತಿಕ ಮಾಸ ನವರಾತ್ರಿಯಲ್ಲಿ ವಿದ್ಯಾದೇವಿ ಸರಸ್ವತಿಯನ್ನು ಸ್ತುತಿಸಿ ಪುಸ್ತಕ ಪೂಜೆಯನ್ನು ಮಾಡುವ ಪದ್ಧತಿಇದೆ.ಮಹಾನವಮಿಯಂದು ಸರಸ್ವತಿ ಪೂಜೆ, ಆಯುಧ ಪೂಜೆಅಥವಾಖಂಡೆ ಪೂಜೆ ಆಗಬೇಕು.ಅಂದು ನಿತ್ಯಉಪಯೋಗಿಸುವಯಂತ್ರ, ಸಲಕರಣೆ, ಆಯುಧಗಳನ್ನು ಪೂಜಿಸುವ ಪರಿಪಾಠವಿದೆ.ದೇವಿ ಜಗನ್ಮಾತೆಯು ದುರುಳರಾದ ರಾಕ್ಷಸರನ್ನುತನ್ನ ಆಯುಧಗಳಿಂದ ಸಂಹಾರ ಮಾಡಿದ ಸ್ಮರಣಾರ್ಥವಾಗಿಅಂದು ಆಯುಧಗಳಿಗೆ ವಿಶೇಷ ಪ್ರಾಶಸ್ತö್ಯವಿದೆ.

ಆಧುನಿಕ ಮನೋಧರ್ಮದಲ್ಲಿ ನವರಾತ್ರಿಯಆಚರಣೆಯನ್ನು ನಾವು ಈ ರೀತಿಯಾಗಿ ಪರಿಭಾವಿಸಬಹುದು.ಇಂದು ಪ್ರತಿಯೊಬ್ಬರಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ,  ಅಹಂಕಾರ ಮದ, ಮತ್ಸರ ಮುಂತಾದವುಗಳೇ ರಾಕ್ಷಸೀ ಗುಣಗಳಾಗಿವೆ. ಹಾಗಾಗಿ ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಮ್ಮಲ್ಲಿರುವ ಅಸುರೀಗುಣಗಳನ್ನು ಸಂಹರಿಸಿ, ವೈವಿ ಗುಣಗಳಾದ ಪವಿತ್ರತೆ, ಸುಖ, ಶಾಂತಿ, ಪ್ರೆಮ, ಆನಂದ, ದಯೆ, ಕರುಣೆ, ಸಂತೊಷ ಮುಂತಾದನ್ನು ಧಾರಣೆ ಮಾಡಬೇಕು.


Tags

Post a Comment

0Comments

Post a Comment (0)