ಸೀಗೆ ಹುಣ್ಣಿಮೆಯ ಬೆಳಕು ತೊಗಲುಗೊಂಬೆ ಕಾರ್ಯಕ್ರಮ ಉದ್ಘಾಟನೆ

varthajala
0

ಬಳ್ಳಾರಿ, ಅ.21: ಪ್ರಾಚೀನ ಕಾಲದಿಂದಲೂ ಬದುಕುಳಿದ ಜಾನಪದ ಕಲೆಗಳನ್ನು ಸದಾ ನಾವುಗಳು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕೆಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಅವರು ತಿಳಿಸಿದರು. ಅವರು ಬುಧವಾರ ಸಂಜೆ ಹೊನ್ನಾಳಿ ರಸ್ತೆಯಲ್ಲಿರುವ ಶ್ರೀಶೈಲ ಭ್ರಮರಾಂಬಾ ಮಲ್ಲಿಕಾರ್ಜುನ ಶಿವದೀಕ್ಷಾ ಮಂದಿರದಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ (ರಿ) ಬಳ್ಳಾರಿ ಇವರು ಏರ್ಪಡಿಸಿದ ಸೀಗೆ ಹುಣ್ಣಿಮೆಯ ಬೆಳಕು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 

 ತೊಗಲುಗೊಂಬೆ ಎನ್ನುವ ಬಹಳ ಪ್ರಾಚೀನ ಕಾಲದ ಕಲೆಯಾಗಿದ್ದು, ಇದನ್ನು ಎಷ್ಟೇ ಕಷ್ಟ-ನಷ್ಟಗಳು ಬಂದರೂ ಹೊನ್ನೂರುಸ್ವಾಮಿ ಅವರು ಮುಂದುವರೆಸಿಕೊAಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯ ಎಂದು, ಅಂತಹ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ಸದಾ ನಾವು ಮಾಡಬೇಕೆಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಹರಗಿನಡೋಣಿ ಶ್ರೀ ಶ್ರೀ ಶ್ರೀ ಷ.ಬ್ರ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ಸಿನಿಮಾ ಕಾಲಕ್ಕಿಂತಲೂ ಮುಂಚೆಯೇ ತೊಗಲುಗೊಂಬೆ ನಡೆಯುತ್ತಿತ್ತು, ತೊಗಲುಗೊಂಬೆ ಮೂಲಕವೇ ಸಿನಿಮಾ ಪ್ರಪಂಚ ಬಯಲಿಗೆ ಬಂತು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಮಿಯಾಕ್ ಟ್ರಸ್ಟ್ನ ಅಧ್ಯಕ್ಷರಾದ ಬಿಸರಹಳ್ಳಿ ಬಸವರಾಜ್ ಅವರು, ಟಿ.ವಿ.  ಮಾಧ್ಯಮಗಳಿರುವ ಈ ಕಾಲದಲ್ಲೂ ಸಹ ಇಂತಹ ಪ್ರಾಚೀನ ಕಲೆಗಳ ಪರಿಚಯವಾಗುತ್ತಿರುವುದು ತುಂಬಾ ಸಂತೋಷದಾಯಕ, ಮಕ್ಕಳಿಗೆ ಪ್ರಾಚೀನ ಕಾಲದ ಕಲೆಗಳು ಬಗ್ಗೆ ಹಾಗೂ ಗ್ರಂಥಗಳ ಬಗ್ಗೆ ಅರಿವು ಮೂಡಿಸಿ, ಅವುಗಳ ಮಾರ್ಗದಲ್ಲಿ ನಡೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದರು. ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷರಾದ ಕೆ.ಹೊನ್ನೂರಸ್ವಾಮಿ ಅವರು ಮಾತನಾಡಿ, ಇಂದಿನ ಕಾಲದಲ್ಲಿಯೂ ಕೂಡಾ ಪ್ರಾಚೀನ ಕಲೆಗಳಾದ ತೊಗಲುಗೊಂಬೆ ಪ್ರದರ್ಶನಕ್ಕೆ ಜನರು ಮೊರೆ ಹೋಗುತ್ತಿರುವುದು ಸಂತೋಷದಾಯಕ ವಿಷಯವಾಗಿದೆ ಎಂದರು.  ಈ ಸಂದರ್ಭದಲ್ಲಿ ಹಿಂದೂಸ್ತಾನಿ ಗಾಯಕರಾದ ಎನ್.ರಾಘವೇಂದ್ರ ಗುಡದೂರು ಅವರು ವಚನ ಗಾಯನ ಮಾಡಿದರು ಪಾಂಡುರAಗಪ್ಪ ತಬಲಾ ಸಾಥ್ ನೀಡಿದರು. ನಂತರ ಬಸವ ಬೆಳೆ ತೊಗಲುಗೊಂಬೆ ರೂಪಕ ನೆರವೇರಿತು. ಎಂ.ಪುರುಷೋತ್ತಮ ನಿರೂಪಿಸಿದರೆ, ಪ್ರಭು ವಂದಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರಕಲಾ ಮೊಹಮ್ಮದ್ ರಫಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಶೈಲ ಭ್ರಮರಾಂಬಾ ಮಲ್ಲಿಕಾರ್ಜುನ ಶಿವದೀಕ್ಷಾ ಮಂದಿರದ ಕೆ.ರಾಜಶೇಖರಗೌಡ, ಮಧುಸೂಧನ್, ಲಕ್ಷಿö್ಮದೇವಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.


Tags

Post a Comment

0Comments

Post a Comment (0)