ಮಾಹಿತಿ ಕಣಜ ತಂತ್ರಾಂಶ

varthajala
0
ಮಾಹಿತಿ ಕಣಜ ಪೋರ್ಟಲ್ ಸಾರ್ವಜನಿಕ ಮಾಹಿತಿ ವ್ಯವಸ್ಥೆಯಾಗಿದ್ದು, ಮಾಹಿತಿ ಹಕ್ಕು ಕಾಯ್ದೆ 2005ರ ಸೆಕ್ಷನ್  4 (2) ರಡಿಯಲ್ಲಿ ನಾಗರಿಕರಿಗೆ ನಿರ್ದಿಷ್ಟವಾದ ಮಾಹಿತಿಯನ್ನು ಒದಗಿಸುವ ಏಕಗವಾಕ್ಷಿ ಮತ್ತು ಏಕೀಕೃತ ಪೋರ್ಟಲ್ ಆಗಿದೆ. ಎಂದು ಅಪರ ಮುಖ್ಯ ಕಾರ್ಯದರ್ಶಿ (ಇ-ಆಡಳಿತ) ರಾಜೀವ್ ಚಾವ್ಲಾ ಅವರು ತಿಳಿಸಿದರು.

ಇಂದು ಬಹುಮಹಡಿ ಕಟ್ಟಡದ ಇ-ಆಡಳಿತ ಕೇಂದ್ರದ ಸಮ್ಮೇಳಣ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾಹಿತಿಯನ್ನು ನೀಡಿದ ಅವರು, ಈ ಪೋರ್ಟಲ್‍ನ್ನು ಬಳಸಲು ನಾಗರಿಕರು ಯಾವುದೇ ಬಳಕೆದಾರ ಹೆಸರು ಅಥವಾ ಪಾಸ್‍ವರ್ಡ್ ಬಳಸಬೇಕಾಗಿರುವುದಿಲ್ಲ ಹಾಗೂ ಮಾಹಿತಿ ಕಣಜ ಪೋರ್ಟಲ್ ಮೂಲಕ ವ್ಯಾಪಕ ಶ್ರೇಣಿಯ ಮಾಹಿತಿಗಳನ್ನು ಪಡಯಬಹುದಾಗಿರುತ್ತದೆ. ಮಾಹಿತಿ ಕಣಜ ತಂತ್ರಾಂಶವನ್ನು ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವೂ ಸ್ವಯಂಪ್ರೇರಿತವಾಗಿ ಸಾರ್ವಜನಿಕರಿಗೆ ಆದಷ್ಟೂ ಹೆಚ್ಚು ಮಾಹಿತಿಗಳನ್ನು ನಿಯಮಿತವಾಗಿ ಅಂತರಜಾಲ ಸೇರಿದಂತೆ ವಿವಿಧ ಸಂವಹನದ ವಿಧಾನಗಳನ್ನು ಅನುಸರಿಸಿ ನೀಡಲು ನಿರಂತರವಾಗಿ ಯತ್ನಿಸಬೇಕು. ಇದರಿಂದಾಗಿ ಸಾರ್ವಜನಿಕರು ಕನಿಷ್ಠ ಪ್ರಮಾಣದಲ್ಲಿ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಪೋರ್ಟಲ್‍ನಲ್ಲಿ ಅಟಲ್ ಜನಸ್ನೇಹಿ ಕೇಂದ್ರಗಳ ಮಾಹಿತಿ, ಪಡಿತರ ಮಾರಾಟಗಾರರ ಸಂಪರ್ಕ ವಿವರಗಳು, ಎನ್‍ಎಫ್‍ಎಸ್‍ಎ ಅಡಿಯಲ್ಲಿ ಇರುವ ಫಲಾನುಭವಿಗಳು ಪಟ್ಟಿ, ಪಿಂಚಣಿ ಫಲಾನುಭವಿಗಳ ವಿವರಗಳು, ವಿದ್ಯಾರ್ಥಿವೇತನದ ವಿವರಗಳು, ಸಾಲ ಮನ್ನಾ ಯೋಜನೆಗಳು, ಪರಿಹಾರ ಯೋಜನೆ, ಪಂಚಾಯತ್‍ನ ಜನಪ್ರತಿನಿಧಿಗಳ ಮಾಹಿತಿ, ಪಂಚಾಯತ್ / ವಾರ್ಡ್ ಕೆಳಗೆ ಕೈಗೊಂಡ ಕಾಂಗಾರಿಗಳು, ಸರ್ಕಾರ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿವರಗಳು ಹೀಗೆ ಹಲವು ಮಾಹಿತಿಗಳನ್ನು ಒಳಗೊಂಡಿದ್ದು, ಯಾವುದೇ ಮಾಹಿತಿ ಬೇಕಾದರೂ ಈ ಮಾಹಿತಿ ಕಣಜ ಪೋರ್ಟಲ್‍ನ ಲಭ್ಯವಾಗುವುದು.
ಮಾಹಿತಿ ಕಣಜ ಪೋರ್ಟಲ್‍ನಿಂದ ನಾಗರಿಕರಿಗೆ ಉಪಯುಕ್ತವಾಗುವ ಪ್ರಮುಖ ಅಂಶಗಳು:
ನಾಗರಿಕರು ಮಾಹಿತಿಯನ್ನು ಅವರ ಬೆರಳಿನಂಚಿನಲ್ಲೇ ಮಾಹಿತಿಯನ್ನು ಪಡೆಯಬಹುದು, ಯಾವುದೇ ಆರ್.ಟಿ.ಇ ಪ್ರಶ್ನೆಯನ್ನು ಭರ್ತಿ ಮಾಡದೆ ನಾಗರಿಕರು ಮಾಹಿತಿಯನ್ನು ಪಡೆಯಬಹುದು. ಬಳಕೆದಾರರಿಗೆ ಯಾವುದೇ ಲಾಗ್‍ಇನ್ ಐಡಿ ಅಥವಾ ಪಾಸ್‍ವರ್ಡ್ ಬಳಸಬೇಕಾಗಿರುವುದಿಲ್ಲ. ಇಲ್ಲಿಯವರೆಗೆ ಮಾಹಿತಿ ಕಣಜ ಪೋರ್ಟಲ್‍ನಲ್ಲಿ 50 ಇಲಾಖೆಗಳು ಅನ್‍ಬೋರ್ಡ್ ಆಗಿದ್ದು, ಈಗಾಗಲೇ 167 ಸೇವೆಗಳನ್ನು ನಾಗರಿಕರಿಗೆ ಲಭ್ಯಗೊಳಿಸಲಾಗಿದೆ. ಅನ್‍ಬೋರ್ಡ್ ಆದ ಇಲಾಖೆಗಳ ಹಾಗೂ ಸೇವೆಗಳ ಪಟ್ಟಿಯನ್ನು ಈ ಕಡತದೊಂದಿಗೆ ತಮ್ಮ ಮಾಹಿತಿಗಾಗಿ ಲಗತ್ತಿಸಲಾಗಿದೆ.
ಮಾಹಿತಿ ಕಣಜ ಪೋರ್ಟಲ್ ಬಳಕೆದಾರರಿಗೆ, ಆರೋಗ್ಯಕರ ಮತ್ತು ಮಾಹಿತಿಪೂರ್ಣ ಪ್ರಜಾಪ್ರಭುತ್ವವನ್ನು ನಿರ್ಮಿಸಲು ಆಹ್ವಾನಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ಸಹಾಯವಾಣಿಯ ದೂರವಾಣಿ ಸಂಖ್ಯೆ: 080-22258338, ಹಾಗೂ ಇ-ಮೇಲ್ mk.helpline@karnataka.gov.in      ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
Tags

Post a Comment

0Comments

Post a Comment (0)