BELLARY : S.K.MODI NATIONAL SCHOOL ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್, ವೀ.ವಿ.ಸಂಘದ ಕಿಂಡರ್‌ಗಾರ್ಟನ್ ಶಾಲೆಯ ಉದ್ಘಾಟನೆ

varthajala
0

ಬಳ್ಳಾರಿ :. ವೀರಶೈವ ವಿದ್ಯಾವರ್ಧಕ ಸಂಘ, ಬಳ್ಳಾರಿ ಈ ಸಂಘದ ವತಿಯಿಂದ ವೀರಶೈವ ಕಾಲೇಜಿನ ಆವರಣದಲ್ಲಿ  ವೀ.ವಿ.ಸಂಘದ ಕಿಂಡರ್‌ಗಾರ್ಟನ್ ಪೂರ್ವ ಪ್ರಾಥಮಿಕ ಶಾಲೆ ಮತ್ತು ಅರುಣೋದಯ ಕಿರಿಯ ಪ್ರಾಥಮಿಕ ಶಾಲೆಯನ್ನು 2014-15 ನೇ ಸಾಲಿನಲ್ಲಿ ಎಲ್.ಕೆ.ಜಿ ಯಿಂದ 05 ನೇ ತರಗತಿಗಳ ವರೆಗೆ ಪ್ರಾರಂಭಿಸಲಾಗಿತ್ತು. ಬಳ್ಳಾರಿ ನಗರದ ಎಸ್.ಕೆ.ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ  ಎಸ್.ಕೆ.ಮೋದಿ ಇವರು ವಿದ್ಯಾರ್ಥಿಗಳ ಗುಣಮಟ್ಟದ ವಿದ್ಯಾರ್ಜನೆಗಾಗಿ ಕನಸುಕಂಡಿದ್ದು, ಇದನ್ನು ನನಸಾಗಿ ಪರಿವರ್ತಿಸಲು ವೀರಶೈವ ವಿದ್ಯಾವರ್ಧಕ ಸಂಘವನ್ನು ಸಂಪರ್ಕಿಸಿದ್ದರು. ಇವರ ಉದ್ದೇಶದಂತೆ ಶಾಲೆಯನ್ನು ಕಿಂಡರ್ ಗಾರ್ಟನ್ ನಿಂದ 10 ನೇ ತರಗತಿಯವರೆಗೆ ಪ್ರಾರಂಭಿಸಲು ಸದರಿ ತರಗತಿಗಳಿಗೆ ನೂತನ ವಿದ್ಯಾಶಾಲಾ ಕಟ್ಟಡವನ್ನು ನಿರ್ಮಿಸಲು ಅವಶ್ಯ ಅನುದಾನವನ್ನು ನೀಡಲು ಅಂದು ದಾರಾಳತನ ತೋರಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗುರುಸಿದ್ದಸ್ವಾಮಿ ತಿಳಿಸಿದರು.

ದಿನಾಂಕ 01.04.2017 ರಲ್ಲಿ  ಎಸ್.ಕೆ. ಮೋದಿಯವರು ಶಾಲಾ ಕಟ್ಟಡವನ್ನು ನೂತನವಾಗಿ ನಿರ್ಮಿಸಲು ಧನಸಹಾಯ ನೀಡಲು ಮುಂದಾದ ವಿಷಯವನ್ನು ಅಲ್ಲಂ ಬಸವರಾಜ ಅಧ್ಯಕ್ಷರು, ಇವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆಯಾಗಿ ಎಸ್.ಕೆ.ಮೋದಿ ಇವರಿಂದ ಕಟ್ಟಡ ನಿರ್ಮಿಸಲು ಅವಶ್ಯ ಅನುದಾನ ನೀಡಲು ಬಯಸಿದ್ದನ್ನು ಸಭೆ ಸರ್ವಾನುಮತದಿಂದ ತೀರ್ಮಾನಿಸಿತ್ತು. ದಿನಾಂಕ 09.04.2017 ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈಗಾಗಲೇ ಸಂಘದ ವತಿಯಿಂದ ಪ್ರಾರಂಭವಾದ ಕಿಂಡರ್ ಗಾರ್ಟನ್ ಪೂರ್ವ ಪ್ರಾಥಮಿಕ ಶಾಲೆ ಮತ್ತು ಅರುಣೋದಯ ಕಿರಿಯ ಪ್ರಾಥಮಿಕ ಶಾಲೆಯ ಹೆಸರನ್ನು "ವೀ.ವಿ.ಸಂಘದ ಎಸ್.ಕೆ.ಮೋದಿ ಇಂಟರ್ ನ್ಯಾಷನಲ್ ಶಾಲೆ" ಎಂದು ಬದಲಾವಣೆ ಮಾಡಲು ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಅನುಮೋದಿಸಿದೆ.

ದಿನಾಂಕ : 01.04.2017 ರ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ, ಎಸ್.ಕೆ.ಮೋದಿ ಇಂಟರ್‌ನ್ಯಾಷನಲ್ ಸ್ಕೂಲ್ ವಿಷಯವಾಗಿ ದಿನಾಂಕ : 10.04.2017 ರಂದು ತಿಳುವಳಿಕೆ ಒಪ್ಪಂದ ಶ್ರೀ ಎಸ್.ಕೆ.ಮೋದಿ ಮತ್ತು ಸಂಘದ ನಡುವೆ ಮಾಡಿಕೊಳ್ಳಲಾಯಿತು. ದಿನಾಂಕ : 29.04.2017 ರಂದು ಶಾಲಾ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿತ್ತು. ಅಂದೇ ಕಟ್ಟಡದ ಕಾಮಗಾರಿ ಪ್ರಾರಂಭವಾಗಿದೆ. ದಿನಾಂಕ : 28.09.2017 ರಲ್ಲಿ ಅಧ್ಯಕ್ಷರು, ವೀರಶೈವ ವಿದ್ಯಾವರ್ಧಕ ಸಂಘ ಮತ್ತು ದಾನಿಗಳಾದ ಎಸ್.ಕೆ.ಮಂಜು ಮೋದಿ ಇವರೊಂದಿಗೆ ಕರಾರು ಒಪ್ಪಂದವಾಗಿದ್ದು, ಕರಾರಿನಂತೆ ಶಾಲೆಯ ಆಡಳಿತ ಮಂಡಳಿಯಲ್ಲಿ (Governing Council) ಇಬ್ಬರ ದಾನಿಗಳ ಹೆಸರನ್ನು ಗೌರವ್ವಾನಿತ ಸದಸ್ಯರುಗಳನ್ನಾಗಿ ಜೀವಿತ ಅವಧಿಗೆ  ಸೇರ್ಪಡಿಸಲು ಅವಕಾಶ ಕಲ್ಪಿಸಲಾಗಿದೆ. ಇವರ ನಂತರದಲ್ಲಿ ಅವರ ಉತ್ತರಾಧಿಕಾರಿಗಳನ್ನು ಸದಸ್ಯರುಗಳನ್ನಾಗಿ ಸೇರ್ಪಡಿಸಲು ಅವಕಾಶಕಲ್ಪಿಸಿದೆ.ನೂತನ ಕಟ್ಟಡ ಕಾಮಗಾರಿ ಎಪ್ರಿಲ್ 2019 ರ ಅಂತ್ಯಕ್ಕೆ ಮುಗಿದಿರುತ್ತದೆ. ಕಟ್ಟಡಕ್ಕೆ  2 ಅಂತಸ್ತುಗಳು ಪ್ರೆöÊಮಾರಿ ಬ್ಲಾಕ್ ಮತ್ತು 2 ಅಂತಸ್ತುಗಳು ಹೈಯರ್ ಪ್ರೆöÊಮಾರಿ ಮತ್ತು ಹೈಸ್ಕೂಲ್ ಬ್ಲಾಕ್‌ಗಳಾಗಿ ನಿರ್ಮಾಣವಾಗಿವೆ. ಸದರಿ ಕಟ್ಟಡಗಳಲ್ಲಿ ಒಟ್ಟು 79 ಕೊಠಡಿಗಳನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಿಗೆ ವಿಶಾಲವಾದ ತರಗತಿ ಕೊಠಡಿಗಳು ಶಿಕ್ಷಕರ ಕೊಠಡಿ ಮತ್ತು ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿದೆ.ಸAಘದ ವತಿಯಿಂದ ವಿದ್ಯಾರ್ಥಿಗಳ ಸಾರಿಗೆ ವ್ಯವಸ್ಥೆಗಾಗಿ, ಸದರಿ ಶಾಲೆಗೆ ಹೊಸದಾಗಿ 02 ಬಸ್ಸ್ಗಳು ಮತ್ತು 03 ಮಿನಿ ಬಸ್ಸ್ಗಳನ್ನು ಒದಗಿಸಲಾಗಿದೆ.ಎಸ್.ಕೆ.ಸಮೂಹ ಸಂಸ್ಥೆ ಎಸ್.ಕೆ.ಮೋದಿ ಶಾಲೆಯ ನಿರ್ಮಾಣಕ್ಕಾಗಿ ಸುಮಾರು ರೂ. 15 ಕೋಟಿಗಳು ವ್ಯಯ್ಯವಾಗಿರುತ್ತದೆ ಎಂದು ದಾನಿಗಳು ಇತ್ತೀಚಿನ ಭೇಟಿ ಸಮಯದಲ್ಲಿ ತಿಳಿಸಿರುತ್ತಾರೆ. ಇದಲ್ಲದೇ ಸಂಘದ ವತಿಯಿಂದ ಮೂಲಭೂತ ಸೌಕರ್ಯಗಳಿಗಾಗಿ ಹಾಗೂ ಟಾಟಾ ಕ್ಲಾಸ್ ಎಡ್ಜ್ ಒದಗಿಸುವ ಸಲುವಾಗಿ ರೂ.2,31,33,689/- ಗಳನ್ನು ವ್ಯಯಿಸಲಾಗಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರಶಿಕ್ಷಣಾಧಿಕಾರಿಗಳು, ಕುರುಗೋಡು ಇವರು ಕಿಂಡರ್ ಗಾರ್ಟನ್ ಪೂರ್ವ ಪ್ರಾಥಮಿಕ ಶಾಲೆಯನ್ನು 2014-15 ನೇ ಸಾಲಿಗೆ ಪ್ರಾರಂಭಿಸಲು ದಿನಾಂಕ : 20.05.2014 ರಂದು ಅನುಮತಿ ನೀಡಿದ್ದರು. ಇಲಾಖೆಯಿಂದ ವೀ.ವಿ.ಸಂಘ ಅರುಣೋದಯ ಪೂರ್ವ ಪ್ರಾಥಮಿಕ ಶಾಲೆಯ ಹೆಸರನ್ನು ಎಸ್.ಕೆ.ಮೋದಿ ಇಂಟರ್ ನ್ಯಾಷನಲ್ ಸ್ಕೂಲ್ ಎಂದು ಬದಲಾವಣೆ ಮಾಡಿಕೊಳ್ಳಲು ಅನುಮತಿ ಪಡೆಯಲಾಗಿದೆ. ಉಪನಿರ್ದೇಶಕರ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಳ್ಳಾರಿ ಇವರು 2015-16 ನೇ ಸಾಲಿನಿಂದ 1 ರಿಂದ 5 ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುತ್ತಾರೆ. 2016-17 ರಿಂದ 05 ವರ್ಷಗಳವರೆಗೆ ಸದರಿ ತರಗತಿಗಳಿಗೆ ಮಾನ್ಯತೆ ನವೀಕರಿಸಿರುತ್ತಾರೆ.ಉಪ ನಿರ್ದೇಶಕರು, ಬಳ್ಳಾರಿ ಇವರು 2020-21 ನೇ ಸಾಲಿನಲ್ಲಿ 6 ರಿಂದ 8 ನೇ ತರಗತಿ ಪ್ರಾರಂಭಿಸಲು ಅನುಮತಿ ನೀಡಿರುತ್ತಾರೆ. 

ಎಸ್.ಕೆ. ಮೋದಿ ಇಂಟರ್ ನ್ಯಾಷನಲ್ ಸ್ಕೂಲ್ ಎಂದು ಇರುವುದನ್ನು ಎಸ್.ಕೆ.ಮೋದಿ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಎಂದು ಬದಲಾಯಿಸಿಕೊಳ್ಳಲು ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರರ್ಗಿ ಇವರು ದಿನಾಂಕ : 01.04.2019 ರಲ್ಲಿ ಅನುಮತಿ ನೀಡಿರುತ್ತಾರೆ. ಪ್ರಸ್ತುತ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್, ಬಳ್ಳಾರಿ ಇಲ್ಲಿ ಕಿಂಡರ್ ಗಾರ್ಟನ್ ನಿಂದ 07 ನೇ ಕ್ಲಾಸ್ ತರಗತಿಗಳು ನಡೆಯುತ್ತಿವೆ. ಸದರಿ ಶಾಲೆಯಲ್ಲಿ ಬೋಧಕ 33 ಮತ್ತು ಬೋಧಕೇತರ 18 ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಕಿಂಡರ್ ಗಾರ್ಟನ್ ನಿಂದ 5 ನೇ ತರಗತಿಯವರೆಗೆ ಆನ್‌ಲೈನ್ ತರಗತಿಗಳನ್ನು ಕಳೆದ 02 ವರ್ಷಗಳಿಂದ ನಡೆಸಲಾಗುತ್ತಿದೆ. ಸೆಪ್ಟಂಬರ್ 2021 ರಿಂದ 6 ನೇ ತರಗತಿಯಿಂದ 7 ನೇ ತರಗತಿಯವರೆಗೆ ಭೌತಿಕ ತರಗತಿಗಳು ನಡೆಯುತ್ತಿವೆ.ಸದರಿ ಶಾಲೆಗೆ CBSE, ತರಗತಿಗಳನ್ನು ಪ್ರಾರಂಭಿಸುವ ವಿಷಯದಲ್ಲಿ ಅಗತ್ಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ, ನಿರಾಕ್ಷೇಪಣಾ ಪತ್ರ ನೀಡಲು ಕೋರಿದೆ ಎಂದರು.

ಎಸ್.ಕೆ.ಮೋದಿ ನೇಷನಲ್ ಸ್ಕೂಲ್ ಅಂಡ್ ಎಸ್.ಕೆ.ಮೋದಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು , ನೂತನ ಕಟ್ಟಡ ಉದ್ಘಾಟನಾ  ಸಮಾರಂಭವನ್ನು ಅಕ್ಟೋಬರ್ 3 ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ. ಮತ್ತು ವೀ.ವಿ.ಸಂಘದ ಕಿಂಡರ್ ಗಾರ್ಟನ್ ಶಾಲೆಯನ್ನು ನೂತನ ಕಟ್ಟಡ ವರ್ಚುಯಲ್ ಉದ್ಘಾಟನೆಯನ್ನು  ಸಚಿವ ಕಾರಜೋಳ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಚಿವರು ಬರುವ ಕಾರಣ ಬಿಗಿ ಬಂದೋಬಸ್ತಿನ ಸಲುವಾಗಿ ಜಿಲ್ಲಾಧಿಕಾರಿ,ವರಿಷ್ಠಾಧಿಕಾರಿಗಳಿಂದ ಪರಿಶೀಲನೆ ನಡೆಯಿತು. ಈಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷ ಅಲ್ಲಂ ಚನ್ನಪ್ಪ,ಖಜಾಂಚಿ ಗೋನಾಳು ರಾಜಶೇಖರ್ ಗೌಡ,ಕಾರ್ಯಧರ್ಶಿ ಬಿ.ವಿ.ಬಸವರಾಜ್, ದರೂರ್ ಶಾಂತನಗೌಡ ಮತ್ತಿತರರು ಉಪಸ್ಥಿತರಿದ್ದರು.


Tags

Post a Comment

0Comments

Post a Comment (0)