ಬಳ್ಳಾರಿ ಅ 05.ಬಳ್ಳಾರಿ ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ (ಅಃ ಖSಇಖಿI) ಆವರಣದಲ್ಲಿ 30 ದಿನಗಳ ಮೋಟರ್ ರಿವೈಂಡಿAಗ್ ಮತ್ತು ಪಂಪ್ ಸೇಟ್ ಸರ್ವಿಸ್ ತರಬೇತಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸೋಮಶೇಖರ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆ ಬಳ್ಳಾರಿ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಭಿರಾರ್ಥಿಗಳನ್ನು ಉದ್ದೇಶಿಸಿ ಈಗಿನ ಕಾಲದಲ್ಲಿ ಅವಕಾಶ ಸಿಗುವದು ತುಂಬಾ ವಿರಳ ಸಿಕ್ಕ ಅವಕಾಶವನ್ನು ಆಸಕ್ತಿಯಿಂದ ಕಲಿತುಕೊಂಡು. ಸ್ವ-ಉದ್ಯೋಗವನ್ನು ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸಬೇಕೆಂದು ಮಾರ್ಗದರ್ಶನ ಮಾಡಿದರು.
ಶರಣ ಬಸವ ರೆಡ್ಡಿ ಡಿ, ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬಳ್ಳಾರಿ, ಇವರು ನಮ್ಮ ತರಬೇತಿ ಸಂಸ್ಥೆಯಲ್ಲಿ ಇಲ್ಲಿ ಕೌಶಲ್ಯ ತರಬೇತಿ ಜೊತೆಗೆ ನೀಡಿದ ವ್ಯಕ್ತಿತ್ವ ವಿಕಸನ, ಆತ್ಮ ವಿಶ್ವಾಸ, ಸಂವಹನ ಕೌಶಲ್ಯಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ಆಗಬೇಕೆಂದು ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಸಿ.ಕೆ ನಾಗರಾಜ ಉಪನಿರ್ದೇಶಕರು, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆ ಬಳ್ಳಾರಿ. ನಾಗರಾಜ ಸಂಪನ್ಮೂಲ ವ್ಯಕ್ತಿಗಳು ಜಡೇಪ್ಪ, ಮಹಮ್ಮದ ನಿಸಾರ, ಉಪನ್ಯಸಕರು. ಶ್ರೀಮತಿ ಸಿದ್ದಲಿಂಗಮ್ಮ, ಸಂತೋಷ ಕುಮಾರ, ಕಿರಣ ಕುಮಾರ ಭಾಗವಹಿಸಿದ್ದರು. ಬಳ್ಳಾರಿ ಜಿಲ್ಲೆಯ 28 ಜನ ಶಿಭಿರಾರ್ಥಿ ಭಾಗವಹಿಸಿದ್ದರು.