We will encourage all sports in the State: R.ASHOK *ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಸಿಕ್ಕರೆ ಮತ್ತಷ್ಟು ಸಾಧನೆ ಸಾಧ್ಯ: ಸಚಿವ ಅಶೋಕ*

varthajala
0

ದಾವಣಗೆರೆಯಲ್ಲಿ ಸಿದ್ಧಗೊಂಡಿರುವ ಟೆನಿಸ್ ಕೋರ್ಟ್ ಗಳನ್ನು ಕಂದಾಯ ಸಚಿವ ಆರ್ ಅಶೋಕ್ ಪರಿಶೀಲನೆ ನಡೆಸಿದರು. ಡಿಸ್ಟ್ರಿಕ್ಟ್  ಟೆನಿಸ್ ಅಸೋಸಿಯೇಷನ್ ದಾವಣಗೆರೆ ಜಿಲ್ಲೆ ಇವರ ವತಿಯಿಂದ ಜನವರಿ 2022 ರಲ್ಲಿ ನಡೆಯಲಿರುವ  ITTF ಪಂದ್ಯಾವಳಿಯನ್ನು ಆಯೋಜಿಸುವ ಕುರಿತು ಮನವಿ ಸ್ವೀಕರಿಸಿ, ಸಚಿವರು ಮಾತನಾಡಿದರು.






"ನಮ್ಮ ದೇಶ ಎಲ್ಲಾ ಕ್ರೀಡೆಗಳಲ್ಲೂ ಸಾಧನೆ ಮಾಡಬೇಕು. ಅಂತಹ ಕ್ರೀಡಾ ಪಟುಗಳು ನಮ್ಮಲ್ಲಿ ಸಿದ್ಧರಾಗಬೇಕು. ಆ ನಿಟ್ಟಿನಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕಾಗುತ್ತದೆ. ಈ ಉದ್ದೇಶಕ್ಕೆ ಮಕ್ಕಳು, ಯುವಕರು ಹಾಗೂ ವಿಶೇಷ ಚೇತನರಿಗೆ ಟೆನಿಸ್ ನಲ್ಲಿ ವಿಶೇಷ ಅಭಿರುಚಿ ಮತ್ತು ಪರಿಣಿತಿ ಬೆಳೆಸಬೇಕು ಹಾಗೂ ಆಟಗಾರರಿಗೆ ಅನುಕೂಲ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಟೆನಿಸ್ ಕೋರ್ಟ್ ಗಳನ್ನ ಸಿದ್ಧಪಡಿಸಲಾಗಿದೆ", ಎಂದು ಹೇಳಿದರು.

ರಾಷ್ಟ್ರಮಟ್ಟದ ಟೆನಿಸ್ ಪಂದ್ಯದಲ್ಲಿ ದಾವಣಗೆರೆ ಜಿಲ್ಲೆಯ ಒಬ್ಬ ಆಟಗಾರ ರಾಜ್ಯವನ್ನು ಪ್ರತಿನಿಧಿಸಿದ್ದರು. ಅವರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿತ್ತು. ಅಂತಹ ಪ್ರತಿಭೆಗಳು ಇನ್ನಷ್ಟು ತಯಾರು ಮಾಡುವ ನಿಟ್ಟಿನಲ್ಲಿ ಇಲ್ಲಿಯೇ ಟೆನಿಸ್ ಕೋರ್ಟ್ ಸಿದ್ಧಪಡಿಸಲಾಗಿದೆ. ಇನ್ನಷ್ಟು ಅಗತ್ಯ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ", ಎಂದರು.

ರೇಷ್ಮೆ, ಯುವಜನ ಮತ್ತು ಕ್ರೀಡಾ ಸಚಿವ ಶ್ರೀ ನಾರಾಯಣ ಗೌಡ ಮತ್ತು ಕೆ ಎಸ್ ಎಲ್ ಟಿ ಎ ಸಂಸ್ಥೆಯ ಪದಾಧಿಕಾರಿಗಳು ಸಹ ಉಪಸ್ಥಿತರಿದ್ದರು.

ದಾವಣಗೆರೆ ತಾಲ್ಲೂಕು ಕಛೇರಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ಮಾಡಿ ಅಧಿಕಾರಿಗಳೊಂದಿಗೆ ಕುಂದುಕೊರತೆಗಳ ಬಗ್ಗೆ ಸಭೆ ನಡೆಸಿ, ತಾಲ್ಲೂಕು ಕಛೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ದೇಶನ ನೀಡಲಾಯಿತು.

Revenue Minister Mr R Ashoka inspected the Davanagere tennis court on Sunday which will be hosting the ITTF tournament in 2022. During the inspection, Mr Ashoka said, "Our aim is to promote lawn tennis in tier two cities as well. We should not just stick to one sport and instead encourage people to take up various sports. We should also keep in mind that the sport facilities should be accessible for differently abled players as well. I have told the Deputy Commissioner to provide all the necessary support. 
 
Mr Ashoka who was in Davanagere to take part in the party's state executive meet also visited the Davanagere taluk office and directed the taluk officials to shift the office to the new location.

Post a Comment

0Comments

Post a Comment (0)