ಬೆಂಗಳೂರು, ಸೆಪ್ಟೆಂಬರ್ 17, (ಕರ್ನಾಟಕ ವಾರ್ತೆ) :
ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರವು, ಶೈಕ್ಷಣಿಕ ವರ್ಷ 2021-22 ರ, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಇಟಾಲಿಯನ್, ಜಪಾನೀಸ್, ಕೊರಿಯನ್, ಚೀನೀ, ಭಾಷೆಗಳಲ್ಲಿ ಸರ್ಟಿಫಿಕೇಟ್ -1 / ಸರ್ಟಿಫಿಕೇಟ್ -2 (4 ತಿಂಗಳ ಶಿಕ್ಷಣ) ಡಿಪ್ಲೊಮಾ, ಹೈಯರ್ ಡಿಪ್ಲೊಮಾ ಮತ್ತು ಅಡ್ವಾನ್ಸ್ ಡಿಪ್ಲೊಮಾ (8 ತಿಂಗಳ ಶಿಕ್ಷಣ) ಕೋರ್ಸುಗಳಿಗೆ ನೋಂದಾಯಿಸಲು ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತದೆ. ನೋಂದಣಿಗೆ ಕೊನೆಯ ದಿನಾಂಕ 25 ನೇ ಸೆಪ್ಟೆಂಬರ್ 2021. ದಂಡದೊಂದಿಗೆ ನೋಂದಣಿಗೆ ಕೊನೆಯ ದಿನಾಂಕ 28 ಸೆಪ್ಟೆಂಬರ್ 2021. ಮೇಲೆ ತಿಳಿಸಿದ ಭಾಷಾ ಕೋರ್ಸ್ಗಳಿಗೆ ನೋಂದಾಯಿಸಲು ಇಚ್ಛಿಸುವ ವಿದ್ಯಾರ್ಥಿಗಳು www.bcu.ac.in ನಲ್ಲಿ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದು
ದಾಖಲಾತಿ ಅರ್ಹತೆ ಸರ್ಟಿಫಿಕೇಟ್ -1 : 12ನೇ ತರಗತಿ/ ದ್ವಿತೀಯ ಪಿ.ಯು.ಸಿ ತೇರ್ಗಡೆಯಾಗಿರಬೆಕು. ಇತರ ಹಂತಗಳಿಗೆ ಅರ್ಹತೆ: ಕೋರ್ಸ್ ನ ಹಿಂದಿನ ಮಟ್ಟದಲ್ಲಿ ತೇರ್ಗಡೆಯಾಗಿರಬೆಕು.
ಹೆಚ್ಚಿನ ಮಾಹಿತಿಗಾಗಿ ಕಛೇರಿ ವಿಳಾಸ: ಪ್ಯಾಲೇಸ್ ರಸ್ತೆ, ಪ್ರಸನ್ನ ಕುಮಾರ ಬ್ಲಾಕ್, ಸೆಂಟ್ರಲ್ ಕಾಲೇಜ್ ಮೈಸೂರು ಬ್ಯಾಂಕ್ ವೃತ್ತದ ಸಮೀಪ, ಬೆಂಗಳೂರು ನಗg ವಿಶ್ವವಿದ್ಯಾಲಯ, ಬೆಂಗಳೂರು ದೂರವಾಣಿ ಸಂ. 080-22961280 /9353251761 ಸಂಪರ್ಕಿಸುವುದು.