ಪದವಿ ವಿದ್ಯಾರ್ಥಿಗಳ ಸ್ಕಾಲರ್‍ಶಿಪ್‍ಗಾಗಿ ಅರ್ಜಿ ಆಹ್ವಾನ

varthajala
0

ಬೆಂಗಳೂರು, ಸೆಪ್ಟೆಂಬರ್ 22  (ಕರ್ನಾಟಕ ವಾರ್ತೆ):  ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ (ಒ.ಊ.ಖ.ಆ), ಉನ್ನತ ಶಿಕ್ಷಣ ಇಲಾಖೆ, ಕೇಂದ್ರ ಸರ್ಕಾರ, ನವದೆಹಲಿ ಇವರ ವತಿಯಿಂದ 2021ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಯೋಜನೆವಾರು   Top 20th Percentile or 80th Percentile     ಗಿಂತ ಹೆಚ್ಚು ಅಂಕಗಳಿಸಿದ ಹಾಗೂ ತಮ್ಮ ವಿದ್ಯಾಭ್ಯಾಸವನ್ನು ಕಡ್ಡಾಯವಾಗಿ ಉನ್ನತ ಶಿಕ್ಷಣದಲ್ಲಿ ಮುಂದುವರಿಸಿರುವಂತಹ (ಕನಿಷ್ಠ 03 ವರ್ಷದ ಪದವಿ ತರಗತಿಗೆ ದಾಖಲಾಗಿರುವ) ವಿದ್ಯಾರ್ಥಿಗಳಿಂದ  Central Sector Scheme of Scholarship for College and University Students  ಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಕೇಂದ್ರ ಸರ್ಕಾರದ ವತಿಯಿಂದ ವೆಬ್‍ಸೈಟ್ ವಿಳಾಸ:  www.scholarships.gov.in £À  National e-Scholarship Portal     ನಲ್ಲಿ ಹೊಸ ತಂತ್ರಾಂಶವನ್ನು ಅಳವಡಿಸಲಾಗಿದ್ದು, ಆ ಪೋರ್ಟಲ್‍ನಲ್ಲಿಯೇ 2021 ರ ಹೊಸ ಬ್ಯಾಚ್‍ನÀ ವಿದ್ಯಾರ್ಥಿಗಳು ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ವೆಬ್‍ಸೈಟ್ ವಿಳಾಸ:  (Link for submission of application website:www.scholarship.gov.in =» New User(Register).    ಪ್ರಸ್ತುತ ಪೋರ್ಟಲ್‍ನಲ್ಲಿ ಹೊಸ ಬ್ಯಾಚ್‍ನ ಕಾರ್ಯ ಜಾರಿಯಲ್ಲಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ.
ಆಸಕ್ತ ವಿದ್ಯಾರ್ಥಿಗಳು ಆಗಾಗ ಕೇಂದ್ರ ಸರ್ಕಾರದ ವತಿಯಿಂದ ನಿಗದಿಪಡಿಸುವ ದಿನಾಂಕದೊಳಗಾಗಿ ಆನ್‍ಲೈನ್  ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.    
2021ನೇ ಸಾಲಿನಲ್ಲಿ ಎಂ.ಹೆಚ್.ಆರ್.ಡಿ. ವಿದ್ಯಾರ್ಥಿ ವೇತನಕ್ಕೆ (ಹೊಸ ಹಾಗೂ ನವೀಕರಣಗಳಿಗೆ) ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ ನೋಂದಣಿ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಿರುತ್ತದೆ. ಆದಕಾರಣ, ಆಸಕ್ತ ವಿದ್ಯಾರ್ಥಿಗಳು ಆಧಾರ್ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು (ಮೂಲ ದಾಖಲೆಗಳ ಜೊತೆಯಲ್ಲಿ) ಪರಿಶೀಲನೆಗಾಗಿ ತಾವು ಅಧ್ಯಯನ ಮಾಡುತ್ತಿರುವ ಕಾಲೇಜುಗಳ ಪ್ರಾಚಾರ್ಯರುಗಳಿಗೆ ಕೇಂದ್ರ ಸರ್ಕಾರದಿಂದ ನಿಗದಿಪಡಿಸಿರುವ ದಿನಾಂಕದೊಳಗಾಗಿ ಸಲ್ಲಿಸುವುದು.
ಪ್ರಾಚಾರ್ಯರು, ವಿದ್ಯಾರ್ಥಿ ವೇತನದ ಉದ್ದೇಶಕ್ಕಾಗಿ ಖಾತೆ ತೆರೆದಿರುವ ಬ್ಯಾಂಕ್‍ನ ವಿವರಗಳನ್ನು ಪರಿಶೀಲಿಸಿ ಖಚಿತ ಪಡಿಸಿಕೊಂಡು, ಮಾಹಿತಿಯನ್ನು ಆನ್‍ಲೈನ್ ಮೂಲಕವೇ ಕೇಂದ್ರ ಸರ್ಕಾರದ ವತಿಯಿಂದ ನಿಗದಿಪಡಿಸಿರುವ ದಿನಾಂಕ: 30/11/2021 ರೊಳಗೆ ಇಲಾಖೆಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕೇಂದ್ರ ಕಛೇರಿಯ ಎಂ.ಹೆಚ್.ಆರ್.ಡಿ. ವಿದ್ಯಾರ್ಥಿ ವೇತನದ ಶಾಖೆಯನ್ನು ಸಂಪರ್ಕಿಸಬಹುದು. ಪ್ರಸ್ತುತ   National   e-Scholarship Portal  ನಲ್ಲಿ ವಿದ್ಯಾರ್ಥಿ ವೇತನದ ನಿಮಿತ್ತ ಕಾರ್ಯ ನಡೆಯುತ್ತಿರುವ ಕಾರಣ ಹೆಚ್ಚಿನ ಮಾಹಿತಿಯು ಲಭ್ಯವಿರುವುದಿಲ್ಲ. ಪ್ರಕ್ರಿಯೆ ಚಾಲನೆಗೊಂಡ ಕೂಡಲೇ ವಿದ್ಯಾರ್ಥಿ ವೇತನದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾದಲ್ಲಿ ಇಲಾಖಾ ಅಂತರ್ಜಾಲದಲ್ಲಿ ಅಳವಡಿಸಲಾಗುವುದು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್‍ಸೈಟ್ ವಿಳಾಸ:  http://pue.kar.nic.in =» Scholarship =» MHRD Scholarship =» MHRD Scholarship 2021-    ಹೊಸ ಬ್ಯಾಚ್ ನಿಂದ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Tags

Post a Comment

0Comments

Post a Comment (0)