ಬೆಂಗಳೂರು, ಸೆಪ್ಟೆಂಬರ್ 29, (ಕರ್ನಾಟಕ ವಾರ್ತೆ): ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಪ್ರತಿ ವರ್ಷ ಅಖಿಲ ಭಾರತ ಮಟ್ಟದಲ್ಲಿ “ಕೃಷಿ ವಿಜ್ಞಾನಗಳು”, “ತೋಟಗಾರಿಕೆ”, “ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ” ಹಾಗೂ “ಪಶು ವೈದ್ಯಕೀಯ” ನಾಲ್ಕು ವಿಭಾಗಗಳಲ್ಲಿ ಕಿರಿಯ ಸಂಶೋಧನಾ ಫೆಲೋಷಿಪ್ (ಜೆಆರ್‍ಎಫ್)ಗೆ ಪರೀಕ್ಷೆಗಳನ್ನು ನಡೆಸುತ್ತದೆ. 2020-21ನೇ ಸಾಲಿನಲ್ಲಿ ರಾಷ್ಟ್ರದ 60 ಕೃಷಿ ವಿಶ್ವವಿದ್ಯಾನಿಲಯಗಳು, ಮೂರು ಕೇಂದ್ರೀಯ ಮತ್ತು ನಾಲ್ಕು ಡೀಮ್ಡ್ ಕೃಷಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ 38 ವಿದ್ಯಾರ್ಥಿಗಳು “ಕೃಷಿ ವಿಜ್ಞಾನಗಳು” ವಿಭಾಗ ಮತ್ತು 10 ವಿದ್ಯಾರ್ಥಿಗಳು “ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ” ವಿಭಾಗದಲ್ಲಿ ತೇರ್ಗಡೆ ಹೊಂದಿರುತ್ತಾರೆ.
“ಕೃಷಿ ವಿಜ್ಞಾನಗಳು” ವಿಭಾಗ ಮತ್ತು “ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ” ವಿಭಾಗದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಪ್ರಥಮ ಸ್ಥಾನಗಳಿಸುರುತ್ತದೆ. ನವದೆಹಲಿಯಲ್ಲಿ ಜರುಗಿದ ಪ್ರಶಸ್ತಿ ಪ್ರಧಾನ ಸಮಾರಂದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಕುಲಪತಿಗಳಾದ ಡಾ|| ಎಸ್. ರಾಜೇಂದ್ರಪ್ರಸಾದ್ ರವರು ಡಾ|| ತ್ರೀಲೋಚನ ಮೋಹಪಾತ್ರ, ಕಾರ್ಯದರ್ಶಿಗಳು (ಡೇರ್) ಮತ್ತು ಮಹಾ ನಿರ್ದೇಶಕರು, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ರವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.