ಬೆಂಗಳೂರು, ಸೆಪ್ಟೆಂಬರ್ 22 (ಕರ್ನಾಟಕ ವಾರ್ತೆ): ಕೃಷಿ ವಿಶ್ವವಿದ್ಯಾಲಯವು 2021-22ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿಗಳಿಗೆ ಕೃಷಿಕರ ಕೋಟಾದಡಿಯಲ್ಲಿ (50%) ಪ್ರವೇಶಾತಿ ಸಂಬಂಧ ಅಭ್ಯರ್ಥಿಗಳು ಸಲ್ಲಿಸುವ ದಾಖಲಾತಿಗಳನ್ನು ಆನ್‍ಲೈನ್ ಪರಿಶೀಲನೆ ಕೈಗೊಳ್ಳಲಾಗುವುದು.
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸುವಾಗ ಯಾವ ಕೇಂದ್ರದಲ್ಲಿ ದಾಖಲಾತಿ ಪರಿಶೀಲನೆಗೆ ಆಯ್ಕೆ ಮಾಡಲಾಗಿರುತ್ತದೆಯೋ ಅದೇ ಕೇಂದ್ರಗಳಲ್ಲಿ ಸಂಬಂಧಿತ ವಿಶ್ವವಿದ್ಯಾನಿಲಯಗಳಿಂದ ನಿಯೋಜಿಸಿದ ಸಮಿತಿ ದಾಖಲಾತಿಗಳನ್ನು ಸೆಪ್ಟೆಂಬರ್ 22, 2021 (ಮಧ್ಯಾಹ್ನ 2.00 ಗಂಟೆಯ ನಂತರ) ರಿಂದ ಸೆಪ್ಟೆಂಬರ್ 28, 2021 ರ (ಮಧ್ಯರಾತ್ರಿ 12.00 ಗಂಟೆ) ವರೆಗೆ ಪರಿಶೀಲನೆ ಮಾಡಲಾಗುವುದು.
ಅಭ್ಯರ್ಥಿಗಳು ಅನ್‍ಲೈನ್ ಪರಿಶೀಲನೆಗೆ ಸಲ್ಲಿಸಬೇಕಾದ ರೂ.200/- ಸಾಮಾನ್ಯ ಮತ್ತು ಇತರೆ ರೂ. 100/- ಪ.ಜಾ/ಪ.ಪ/ ಪ್ರವರ್ಗ-1 ಶುಲ್ಕವನ್ನು ಕೃಷಿ ವಿಶ್ವವಿದ್ಯಾನಿಲಯಗಳ ಅಧಿಕೃತ ಜಾಲತಾಣದಲ್ಲಿ ನೀಡಿರುವ ಆನ್‍ಲೈನ್ ಸೌಲಭ್ಯ ಮೂಲಕ ತುಂಬಬಹುದಾಗಿದೆ. ಶುಲ್ಕ ತುಂಬಿದ ನಂತರವೇ ಶುಲ್ಕ ರಸೀತಿ ಹಾಗೂ ದಾಖಲಾತಿಗಳನ್ನು ಸಲ್ಲಿಸಿದ ಮಾಹಿತಿಯನ್ನು ಅಭ್ಯರ್ಥಿಗಳು ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯ.
ಹೆಚ್ಚಿನ ಮಾಹಿತಿಗಾಗಿ ಮತ್ತು ದಾಖಲಾತಿಗಳ ಅಪ್‍ಲೋಡ್‍ಗೆ ಅಧಿಕೃತ ವಿಳಾಸ: 1.www.uasbanglore.edu.in 2.www.uasd.edu.in 3.www.uhsbagalkot.edu.in 4.www.uahs.in 5.www.uasraichur.edu.in 6.www.kvafsu.edu.in 7.kea.kar.nic.in ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ADVERTISEMENT