ಬಳ್ಳಾರಿ : ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಾರ್ಯಕ್ಕೂ ತಂತ್ರಜ್ಞಾನವನ್ನೇ ಅವಲಂಬಿಸಿರುವುದರಿAದ ತಂತ್ರಜ್ಞಾನ ಸಮಾಜ ಕೇಂದ್ರಿತವಾಗಿ ರೂಪುಗೊಳ್ಳುತ್ತಿದೆ. ತಂತ್ರಜ್ಞಾನದಿAದ ಶಿಕ್ಷಣ, ಮಾಹಿತಿ, ಮನರಂಜನೆ ಎಲ್ಲವನ್ನು ವೈಯಕ್ತಿಕ ನೆಲೆಯಲ್ಲಿ ಪಡೆದುಕೊಳ್ಳುವ ಪ್ರಮಾಣ ಹೆಚ್ಚುತ್ತಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಶಿ ಅಭಿಪ್ರಾಯಪಟ್ಟರು.ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ನಿರ್ಮಾಣಗೊಂಡಿರುವ ಅಂತರ್ಜಾಲ ಶೋಧ ಕೇಂದ್ರವನ್ನು ಪ್ರೊ. ಗೋಪಾಲಕೃಷ್ಣ ಜೋಶಿ ಉದ್ಘಾಟಿಸಿದರು. ನಂತರ ಮಂಟಪ ಸಭಾಂಗಣದಲ್ಲಿ ಗಣಕ ಕೇಂದ್ರ ಹಾಗೂ ಅಭೇರಾಜ ಬಲ್ಡೋಟ ಜೈನ ಅಧ್ಯಯನ ಪೀಠದ ವತಿಯಿಂದ ಏರ್ಪಡಿಸಿದ್ದ ಅಂತರ್ಜಾಲ ಶೋಧ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಹೊಸದನ್ನು ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಹಳತು ಮತ್ತು ಹೊಸತರ ನಡುವಿನ ಸಂಘರ್ಷ ನಿರಂತರ ಮತ್ತು ಅನಿವರ‍್ಯ. ಇಂದಿನ ಸಂದರ್ಭದಲ್ಲಿ ಕಲಿಕೆಗೆ ಪೂರಕವಾಗಿ ಅಂತರ್ಜಾಲವನ್ನು ಸದುಪಯೋಗ ಪಡಿಸಿಕೊಳ್ಳುವುದು ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಡಾ.ಸ.ಚಿ.ರಮೇಶ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ಬದಲಾದ ಕಾಲ ಮಾನದಲ್ಲಿ ನಾವು ಬದಲಾಗಬೇಕು, ಇಲ್ಲವಾದರೆ ನಾವು ಆಧುನಿಕ ಜಗತ್ತಿನಲ್ಲಿ ಹಿಂದುಳಿದು ಬಿಡುತ್ತೇವೆ. ಅಂತರ್ಜಾಲದ ಬಳಕೆ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣ, ಮಾಹಿತಿ, ಬ್ಯಾಂಕಿAಗ್ ಸಂಶೋಧನೆ ಸೇರಿದಂತೆ ಎಲ್ಲದಕ್ಕೂ ಅಂತರ್ಜಾಲವನ್ನೇ ಅವಲಂಬಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಒಂದು ಪ್ರತ್ಯೇಕವಾದ ಸುಸಜ್ಜಿತವಾದ ಅಂತರ್ಜಾಲ ಶೋಧ ಕೇಂದ್ರವನ್ನು ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳ ಉಪಯೋಗಕ್ಕಾಗಿ ನಿರ್ಮಿಸಿದೆ ಎಂದು ತಿಳಿಸಿದರು.ಹೊಸಪೇಟೆಯ ಎಂ.ಎಸ್.ಪಿ.ಎಲ್. ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ಪ್ರಭುದೇವಪ್ಪ ಮಾತನಾಡುತ್ತ ತಂತ್ರಜ್ಞಾನ ನಮ್ಮ ಜೀವನಕ್ಕೆ ಅನಿವರ‍್ಯ ಹೌದು. ತಂತ್ರಜ್ಞಾನದ ಜೊತೆಯೇ ನಾವು ಬದುಕಬೇಕಾಗಿರುವುದರಿಂದ ಅದನ್ನು ನಮ್ಮ ಅನುಕೂಲಕ್ಕೆ ಬಳಸಬೇಕೆ ಹೊರತು ಅದರ ಬಳಕೆಯೇ ಚಟವಾಗಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಕುಲಸಚಿವ ಡಾ.ಸುಬ್ಬಣ್ಣ ರೈ ಸ್ವಾಗತಿಸಿದರು. ಅಭೆರಾಜ್ ಬಲ್ದೊಟಾ ಜೈನ್ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಲ್.ಶ್ರೀನಿವಾಸ್ ನಿರೂಪಿಸಿದರು. ಅಧ್ಯಯನಾಂಗದ ನಿರ್ದೇಶಕರಾದ ಡಾ.ಮಹಾದೇವಯ್ಯ ಪಿ. ವಂದಿಸಿದರು. ಕಾರ್ಯಕ್ರಮಕ್ಕೆ ಸಹಯೋಗ ನೀಡಿದ್ದ ಗಣಕ ಕೇಂದ್ರದ ಮುಖ್ಯಸ್ಥರು ಹಾಗೂ ಸಹಾಯಕ ನಿರ್ದೇಶಕರಾದ ಶ್ರೀ ಎಸ್.ಕೆ.ವಿಜಯೇಂದ್ರ ಮತ್ತು ಸಿಸ್ಟಂ ಅನಾಲಿಸ್ಟ್ ಶ್ರೀಮತಿ ಶಕುಂತಲ ಚೌಡನಾಯ್ಕ ಅವರು, ವಿವಿಧ ನಿಕಾಯದ ಡೀನರು, ವಿವಿಧ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.