ಬೆಂಗಳೂರು, ಸೆಪ್ಟೆಂಬರ್ 17, (ಕರ್ನಾಟಕ ವಾರ್ತೆ):
ಕೇಂದ್ರ ಸರ್ಕಾರ ವತಿಯಿಂದ 2021-22ನೇ ಸಾಲಿನಿಂದ 2025-26ನೇ ಸಾಲಿನವರೆಗೆ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯ ಮಾರ್ಗಸೂಚಿಯನ್ವಯ ಬೆಂಗಳೂರು ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಆಸಕ್ತ ವ್ಯಕ್ತಿಗಳು, ರೈತ ಉತ್ಪಾದಕ ಸಂಸ್ಥೆಗಳು, Joint liabilities groups, ಸ್ವ-ಸಹಾಯ ಸಂಘಗಳು, section (8) ರಡಿ ನೋಂದಾಯಿತ ಕಂಪನಿಗಳಿಂದ ಉದ್ಯಮಶೀಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನಾಂಕವಾಗಿದೆ. ವೆಬ್‍ಸೈಟ್ ವಿಳಾಸ: www.nlm.udyamimitra.in ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.
ಗ್ರಾಮೀಣ ಕೋಳಿ ಸಾಕಾಣಿಕೆ ವಿಧಾನದಲ್ಲಿ 1000 ಕಡಿಮೆ ವೆಚ್ಚದ ಕೋಳಿ ತಳಿಗಳ ಮಾತೃ ಕೋಳಿಗಳ ಫಾರಂ ಸ್ಥಾಪನೆ, ಹ್ಯಾಚರಿ, ಮಾತೃ ಕೋಳಿಗಳ ವ್ಮರಿಗಳ ಬ್ರೂಡಿಂಗ್ ಮತ್ತು ಸಾಕಾಣಿಕಾ ಘಟಕ ಸ್ಥಾಪನೆ, 500 ಹೆಣ್ಣು, 25 ಗಂಡು ಕುರಿ / ಮೇಕೆ ತಳಿ ಸಂವರ್ಧನಾ ಘಟಕವನ್ನು ಸ್ಥಾಪಿಸಿ ಕುರಿ / ಮೇಕೆ ಮರಿಗಳ ಉತ್ಪಾದನೆ, 100 ಹೆಣ್ಣು, 10 ಗಂಡು ಹಂದಿಗಳ ತಳಿ ಸಂವರ್ಧನಾ ಘಟಕ ಆರಂಭಿಸಿ ಹಂದಿ ಮರಿಗಳ ಉತ್ಪಾದನೆ ಮತ್ತು ಕೊಬ್ಬಿಸುವಿಕೆ, ಮೇವು ಬಿಲ್ಲೆ / ರಸ ಮೇವು ಘಟಕ ಹಾಗೂ ಟಿ.ಎಂ.ಆರ್. ಘಟಕಗಳನ್ನು ಸ್ಥಾಪಿಸಲು ಉದ್ಯಮಶೀಲರನ್ನು ಪ್ರೋತ್ಸಾಹಿಸಿ ಪಶು ಆಹಾರ ಮತ್ತು ಮೇವಿನ ಉತ್ಪಾದನೆಯನ್ನು ಉತ್ತೇಜಿಸುವುದು.
ಆಸಕ್ತ ಅಭ್ಯರ್ಥಿಗಳನ್ನು ಪರಿಶೀಲಿಸಿ, ಮೌಲ್ಯಮಾಪನ ಮಾಡಿ ಅರ್ಹತೆಗೆ ಅನುಗುಣವಾಗಿ ಅಹ್ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಲಾಗುವುದು. ಅನುದಾನದ ಲಭ್ಯತೆಗೆ ಅನುಗುಣವಾಗಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿಯಲ್ಲಿ ಸಹಾಯ ಧನ ನೀಡಲಾಗುವುದು.
ಪ್ರತಿ ಯೋಜನೆಗೆ ಉಲ್ಲೇಖಿಸಿರುವ ಸಬ್ಸಿಡಿಯ ಸೀಲಿಂಗ್‍ವರೆಗೆ ಶೇಕಡ 50% ಬಂಡವಾಳ ಸಹಾಯಧನ SIDBI ಯಿಂದ ಎರಡು ಸಮಾನ ಕಂತುಗಳಲ್ಲಿ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲಾ ಉಪ ನಿರ್ದೇಶಕರು / ಸಹಾಯಕ ನಿರ್ದೇಶಕರು ತಾಲ್ಲೂಕು ಮಟ್ಟ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹೆಬ್ಬಾಳ, ಬೆಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.