ಶಿಕ್ಷಕ, ಉಪನ್ಯಾಸಕರ ನೇಮಕಾತಿ ಬಗ್ಗೆ ಸಚಿವ ಬಿ.ಸಿ.ನಾಗೇಶ್ ಅವರಿಂದ ಮಾಹಿತಿ

varthajala
0

ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ & ಪದವಿಪೂರ್ವ ಕಾಲೇಜುಗಳಲ್ಲಿ ಮಂಜೂರಾದ ಹುದ್ದೆ, ಖಾಲಿ ಇರುವ ಹುದ್ದೆ, ಖಾಲಿ ಇರುವ ಹುದ್ದೆಗಳ ಭರ್ತಿ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸಚಿವರು ಉತ್ತರ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಉತ್ತರ ನೀಡಿದ್ದು, ಅಧಿವೇಶನದಲ್ಲಿ ಶಿಕ್ಷಣ ಸಚಿವರು ಈ ಕುರಿತು ಲಿಖಿತ ಉತ್ತರ ನೀಡಿದ್ದಾರೆ.

ಕೆ. ಟಿ. ಶ್ರೀಕಂಠೇಗೌಡರು ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಮಂಜೂರಾದ ಒಟ್ಟು ಶಿಕ್ಷಕರು, ಉಪನ್ಯಾಸಕರ ಹುದ್ದೆಗಳು ಎಷ್ಟು?. ಇದರಲ್ಲಿ ಭರ್ತಿಯಾದ ಹುದ್ದೆಗಳು ಎಷ್ಟು, ಖಾಲಿ ಇರುವ ಹುದ್ದೆಗಳು ಎಷ್ಟು? ಎಂದು ಕೇಳಿದ್ದರು.

ಈಗ ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ? ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗಳಿಗೆ ಸಚಿವರು ಉತ್ತರ ಕೊಟ್ಟಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಒಟ್ಟು ೩೫೦೩ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ನಿರ್ದೇಶಕರಿಂದ ಪ್ರಸ್ತಾವನೆ ಪಡೆದು ಪರಿಶೀಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಮಂಜೂರಾದ, ಖಾಲಿ ಇರುವ ಒಟ್ಟು ಶಿಕ್ಷಕರು, ಉಪನ್ಯಾಸಕರ ಹುದ್ದೆಗಳ ವಿವರಗಳು. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಂಜೂರಾದ ಒಟ್ಟು ವೃಂದ ಬಲ ೧,೮೮,೫೪೦. ಶಾಲೆಗಳಲ್ಲಿನ ಕಾರ್ಯನಿರತ ಹುದ್ದೆಗಳ ಸಂಖ್ಯೆ ೧,೬೨,೭೨೭ ಹಾಗೂ ಖಾಲಿ ಇರುವ ಹುದ್ದೆಗಳ ಸಂಖ್ಯೆ ೨೫,೮೧೩. ಸರ್ಕಾರಿ ಪ್ರೌಢ ಶಾಲೆಗಳಿಗೆ ಮಂಜೂರಾದ ಒಟ್ಟು ವೃಂದ ಬಲ ೫೨,೬೩೦. ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯನಿರತ ಹುದ್ದೆಗಳು ೩೬,೪೫೩. ಖಾಲಿ ಇರುವ ಹುದ್ದೆಗಳು ೧೫,೯೦೭. ಇನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಮಂಜೂರಾದ ಒಟ್ಟು ವೃಂದಬಲ ೧೨,೮೫೭. ಕಾಲೇಜಗಳಲ್ಲಿ ಕಾರ್ಯನಿರತ ಹುದ್ದೆಗಳು ೯,೩೫೪. ಖಾಲಿ ಇರುವ ಹುದ್ದೆಗಳು ೩,೫೦೩. ಖಾಲಿ ಹುದ್ದೆಗಳ ಭರ್ತಿ; ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ೨೫,೮೧೩ ಹುದ್ದೆಗಳಲ್ಲಿ ಪ್ರಸ್ತುತ ಸಾಲಿನಲ್ಲಿ ೫ ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವ ಸಂಬ0ಧ ಪರಿಶೀಲನೆಯಲ್ಲಿದೆ. ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಒಟ್ಟು ೫,೫೦೦ ಹುದ್ದೆಗಳನ್ನು ಭರ್ತಿ ಮಾಡುವ ಸಂಬAಧ ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ. 



ಇನ್ನು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಒಟ್ಟು ೩೫೦೩ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ನಿರ್ದೇಶಕರಿಂದ ಪ್ರಸ್ತಾವನೆ ಪಡೆದು ಪರಿಶೀಲನೆ ನಡೆಸಲಾಗುತ್ತದೆ. ವೇತನ ತಾರತಮ್ಯ ನಿವಾರಣೆಗೆ ಸಭೆ; ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗೆ ಮತ್ತು ಪ್ರೌಢ ಶಾಲಾ ಹಂತದಿ0ದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ಹೊಂದಿದವರಿಗೆ ಕಾಲಮಿತಿ ವೇತನ ನೀಡಲು ಹಲವಾರು ತೊಡಕುಗಳಿವೆ. 

"ವೇತನ ತಾರತಮ್ಯ ನಿವಾರಣೆಗೆ ಇರುವ ತೊಡಕುಗಳನ್ನು ಪರಿಹರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಆಯೋಜಿಸಲಾಗುತ್ತದೆ" ಎಂದು ಸಚಿವರು ಹೇಳಿದ್ದಾರೆ. 

ವಿಧಾನ ಪರಿಷತ್ತಿನಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದಾಗ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, "ಬಡ್ತಿ ಪಡೆದಿರುವರಿಗೆ ಸಹಜವಾಗಿಯೇ ವೇತನ ಮತ್ತು ಭತ್ಯೆಗಳು ಹೆಚ್ಚಾಗಬೇಕು. ಶಿಕ್ಷಕರು ಮತ್ತು ಉಪನ್ಯಾಸಕರ ವಿಚಾರದಲ್ಲಿ ಇದು ತದ್ವಿರುದ್ಧ. ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಬಡ್ತಿ ಪಡೆದಿರುವವರಿಗೆ ವೇತನ ನಿಗದಿ ಮಾಡಲು ಇರುವ ನಿಯಮಗಳೇ ಅವೈಜ್ಞಾನಿಕ" ಎಂದು ಹೇಳಿದರು.

www.shikshanaratna.com

Tags

Post a Comment

0Comments

Post a Comment (0)