*ಕ್ಷಮೆ ಇರಲಿ*.
ಇವತ್ತು 'ಕ್ಷಮಾದಿನ'ವಂತೆ. ಕೇಳಲು ಎಷ್ಟು ಸೊಗಸಾಗಿದೆ. ನನಗೂ ಗೊತ್ತಿರಲಿಲ್ಲ. ಇಲ್ಲಿಯವರೆಗೂ ಆಚರಿಸಿದ ಎಲ್ಲಾ ದಿನಗಳಿಗಿಂತಲೂ ಇದು ನಿಜಕ್ಕೂ ಅರ್ಥಪೂರ್ಣ ದಿನ ಅನಿಸುತ್ತೆ. ಎಷ್ಟೋ ಸಂಬಂಧಗಳನ್ನ ನಮ್ಮ ಅಹಂಕಾರದಿಂದಲೇ ಕಳೆದುಕೊಳ್ಳುತ್ತೇವೆ. ಆಧುನಿಕ ಜೀವನಶೈಲಿ, ಧಾವಂತದ ಬದುಕಿನ ಮಧ್ಯೆ, ನಮ್ಮ ಬದುಕಿನ ಬಹುಮುಖ್ಯ ಸಂಬಂಧಗಳನ್ನ ಕಡೆಗಾಣಿಸುತ್ತಿದ್ದೇವೆ. ಮಾಡಿದ ತಪ್ಪಿಗೆ ಕ್ಷಮೆ ಕೇಳುವ ಮೂಲಕ ಸಂಬಂಧಗಳನ್ನ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳೋಣ.
ದೊಡ್ಡವರು ಹೇಳಿದ ಮಾತು.
ಧೈರ್ಯವಂತ ಮಾತ್ರ ಕ್ಷಮೆ ಕೇಳುತ್ತಾನೆ, ಹೃದಯವಂತನಿಗೆ ಮಾತ್ರವೇ ಕ್ಷಮಿಸುವ ಗುಣವಿರುತ್ತೆ..
*ತಿಳಿದು,ತಿಳಿಯದೇ ನಾನು ತಪ್ಪು ಮಾಡಿದ್ದರೆ ನನ್ನನ್ನು ಕ್ಷಮಿಸಿ*