ಜಿ.ನಾರಾಯಣಕುಮಾರ್ ಸಂಸ್ಮರಣೆ ಮತ್ತು ಜಿ.ನಾ.ಕು.ಪ್ರಶಸ್ತಿ ಸಮಾರಂಭ

varthajala
0

 ಮಾಜಿ ವಿಧಾನಸಭಾ ಸದಸ್ಯರು ,ಕನ್ನಡ ಸೇನಾನಿ ಜಿ.ನಾರಾಯಣಕುಮಾರ್ ಸಂಸ್ಮರಣೆ ಮತ್ತು ಜಿ.ನಾ.ಕು.ಪ್ರಶಸ್ತಿ ಸಮಾರಂಭ

ಕರ್ನಾಟಕ ಚಿತ್ರಕಲಾ ಪರಿಷತ್ ಅವರಣದಲ್ಲಿ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ ಮಾಜಿ ವಿಧಾನಸಭಾ ಸದಸ್ಯರು ,ಕನ್ನಡ ಸೇನಾನಿ ಜಿ.ನಾರಾಯಣಕುಮಾರ್ ಸಂಸ್ಮರಣೆ ಮತ್ತು ಜಿ.ನಾ.ಕು.ಪ್ರಶಸ್ತಿ ಸಮಾರಂಭವನ್ನು ದೀಪಾ ಬೆಳಗಿಸಿ ಉದ್ಘಾಟನೆಯನ್ನು  ವಸತಿ ಸಚಿವರಾದ ವಿ.ಸೋಮಣ್ಣರವರು ಮತ್ತು ಮಾಜಿ ಸಭಾಪತಿಗಳಾದ ಬಿ.ಎಲ್.ಶಂಕರ್ ಮತ್ತು ನಿವೃತ್ತ ಪೋಲೀಸ್ ಮಹಾ ನಿರ್ದೇಶಕರಾದ ಡಾ||ಶಂಕರ ಬಿದರಿ ಮತ್ತು ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪರವರು ,ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಡಾ||ಎಸ್.ರಾಜುರವರು ,ಪ್ರಸ್ ಕ್ಲಬ್ ಅಧ್ಯಕ್ಷರಾದ ಸದಾಶಿವ ಶಣೈ ,ಪತ್ರಕರ್ತರಾದ ಸಮಿವುಲ್ಲ ,ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷರಾದ ಗುರುದೇವ್ ನಾರಾಯಣಕುಮಾರ್ ಮತ್ತು ಕನ್ನಡ ಪರ ಹೋರಾಟಗಾರ ,ಸಾಹಿತಿ ಪಾಲನೇತ್ರ ದೀಪ ಬೆಳಗಿಸಿ , ಜಿ.ನಾರಾಯಣಕುಮಾರ್ ರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು . *ಜಿನಾಕು ಪ್ರಶಸ್ತಿ ಪುರಸ್ಕೃತರಾದ ಜಾನಪದ ಕಲಾವಿದರಾದ ಬಾನಂದೂರು ಕೆಂಪಯ್ಯ ಮತ್ತು ಕವಿ ಅಬ್ದುಲ್ ಬಷೀರ್ ,ಹಿರಿಯ ಪತ್ರಕರ್ತರಾದ ವೈ.ಜಿ.ಅಶೋಕ್ ಕುಮಾರ್ ,ಕನ್ನಡ ಪರ ಹೋರಾಟಗಾರರಾದ ಶಿವರಾಮೇಗೌಡರಿಗೆ ಜಿನಾಕು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.




ಇದೇ ಸಂದರ್ಭದಲ್ಲಿ ಸಚಿವ ವಿ.ಸೋಮಣ್ಣರವರು ಮಾತನಾಡಿ, ಜಿ.ನಾರಾಯಣಕುಮಾರ್ ರವರು ನಾಡು ಕಂಡ ಅಪರೂಪದ ರಾಜಕಾರಣಿ ಮತ್ತು ಕನ್ನಡ ಪರ ಹೋರಾಟಗಾರರು . ಎರಡು ಬಾರಿ ಶಾಸಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ .

ಕನ್ನಡ ಭಾಷೆಗೆ ಮತ್ತು ನಾಡಿಗೆ ಸಂಕಷ್ಟ ಬಂದಾಗ ಜಿ.ನಾರಾಯಣಕುಮಾರ್ ರವರು ಮಂಚೂಣಿಯಾಗಿ ಹೋರಾಟಕ್ಕೆ ಬರುತ್ತಿದ್ದರು. ಕನ್ನಡ ತಾಯಿ ಭುವನೇಶ್ವರಿಗೆ  ಸೇವೆಗೆ ತಮ್ಮ ಜೀವನವನ್ನು ಅರ್ಪಣೆ ಮಾಡಿಕೊಂಡರು.

ಕನ್ನಡ ಭಾಷೆ ಉಳಿಯಲು ,ಬೆಳಯಲು ಕನ್ನಡ ಪರ ಹೋರಾಟಗಾರರಿಗೆ ತಾಯಿ ಭುವನೇಶ್ವರಿ ಆಶೀರ್ವಾದ ಸಿಗಲಿ ಎಂದು ಹೇಳಿದರು.

ಜಿ.ನಾರಾಯಣಕುಮಾರ್ ರವರ ಹೆಸರಿನಲ್ಲಿ ದತ್ತಿ ಸ್ಥಾಪನೆ 5ಲಕ್ಷ ರೂಪಾಯಿ ದೇಣಿಗೆ ನೀಡುತ್ತೇನೆ ಅದರಲ್ಲಿ ಸಮಾಜದ ಅಭಿವೃದ್ದಿ ಬಳಸಿ ಎಂದು ಹೇಳಿದರು.

Tags

Post a Comment

0Comments

Post a Comment (0)