Aam Aadmi Karnataka- ಚಿಂತನ-ಮಂಥನ: ಶಾಲಾ ಶುಲ್ಕಕ್ಕೆ ಸಂಬಂಧಿಸಿ ಸರ್ಕಾರದ ನೆರವಿಗೆ ಪೋಷಕರ ಆಗ್ರಹ

varthajala
0

ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸರ್ಕಾರ ಸಹಾಯ ಮಾಡಬೇಕೆಂದು ಆಮ್‌ ಆದ್ಮಿ ಪಾರ್ಟಿ ಆಯೋಜಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಆಗ್ರಹಿಸಿದರು. ಕಳೆದ ಒಂದೂವರೆ ವರ್ಷಗಳಲ್ಲಿ ಲಾಕ್‌ಡೌನ್‌ನಿಂದಾಗಿ ಆದಾಯ ಹಾಗೂ ಉಳಿತಾಯವನ್ನು ಕಳೆದುಕೊಂಡು ಪೋಷಕರು ಸಂಕಷ್ಟದಲ್ಲಿದ್ದಾರೆ. ಈಗ ಸರ್ಕಾರವು ಅವರಿಗೆ ಸಹಾಯ ಮಾಡದಿದ್ದರೆ ಅನೇಕರಿಗೆ ತಮ್ಮ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡರು.



“ಪತಿ ಹಾಗೂ ತಂದೆಯನ್ನು ಕಳೆದುಕೊಂಡಿರುವ ನಾನು ಇಬ್ಬರು ಮಕ್ಕಳನ್ನು ಓದಿಸಲು ಹಲವು ಮನೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಲಾಕ್‌ಡೌನ್‌ನಿಂದಾಗಿ ನನಗೆ ಒಂದೂವರೆ ವರ್ಷ ಉದ್ಯೋಗವಿರಲಿಲ್ಲ. ನಾನು ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹೇಗೆ ಸಾಧ್ಯ?” ಎಂದು ಪೋಷಕರಾದ ಪವಿತ್ರ ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಆರ್.ರಮೇಶ್‌ ಕುಮಾರ್‌, “ಪೋಷಕರಿಗೆ ನೆರವಾಗಲು ಸರ್ಕಾರ ಏನನ್ನಾದರೂ ಮಾಡಲೇ ಬೇಕು. ದೀರ್ಘಾವಧಿಯಲ್ಲಿ, ಸರ್ಕಾರಿ ಶಾಲೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು” ಎಂದು ಹೇಳಿದರು.

“ಕಾನೂನಿನ ಪ್ರಕಾರ ಗುಣಮಟ್ಟದ ಹಾಗೂ ಉಚಿತ ಶಿಕ್ಷಣ ಪಡೆಯುವ ಹಕ್ಕನ್ನು ಮಕ್ಕಳು ಹೊಂದಿದ್ದಾರೆ. ಆದರೆ ಬಿಜೆಪಿ ಸರ್ಕಾರವು ಈ ಸಂಕಷ್ಟದ ಸಮಯದಲ್ಲಿ ಪೋಷಕರಿಗೆ ನೆರವಾಗಲು ನಿರ್ಲಕ್ಷ್ಯ ತೋರುತ್ತಿದೆ. ಅವರ ಬೇಡಿಕೆಗಳನ್ನು ಕೇಳಿ ನೆರವಾಗಲು ಸರ್ಕಾರ ಮುಂದಾಗಬೇಕು” ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದರು.

ಬೆಂಗಳೂರು ನಗರದ ಎಎಪಿ ಅಧ್ಯಕ್ಷರಾದ ಮೋಹನ್‌ ದಾಸರಿ ಮಾತನಾಡಿ, “ಇಲ್ಲಿ ಕೇಳಿಬಂದ ಪೋಷಕರ ಬೇಡಿಕೆಗಳನ್ನು ನಾವು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ರವರಿಗೆ ತಲುಪಿಸುತ್ತೇವೆ. ಹಾಗೂ ಶಾಲಾ ಶುಲ್ಕಕ್ಕೆ ಸಂಬಂಧಿಸಿ ಪೋಷಕರಿಗೆ ನೆರವಾಗುವಂತಹ ವಿಸ್ತೃತ ಯೋಜನೆಯನ್ನು ಶೀಘ್ರದಲ್ಲೇ ರೂಪಿಸಬೇಕು ಹಾಗೂ ಪರಿಣಾಮಕಾರಿಯಾದ ಶಾಲಾ ನಿರ್ವಹಣಾ ಸಮಿತಿಗಳನ್ನು ರಚಿಸಬೇಕೆಂದು ಆಗ್ರಹಿಸುತ್ತೇವೆ. ದೆಹಲಿಯ ಎಎಪಿ ಸರ್ಕಾರವು ಅಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲೇ ಇಲ್ಲೂ ಕೂಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸುತ್ತೇವೆ” ಎಂದು ತಿಳಿಸಿದರು.

ಪೋಷಕರ ಸಂಘಟನೆಗಳು, ಸಮನ್ವಯ ಸಮಿತಿ ಹಾಗೂ ವಾಯ್ಸ್‌ ಆಫ್‌ ಪೇರೆಂಟ್ಸ್‌ ಸಂಘಟನೆಗಳು ಸರ್ಕಾರವು ನೆರವು ನೀಡದಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದವು. ತಮಗೆ ಬೆಂಬಲವಾಗಿರುವ ಎಎಪಿಯನ್ನು ಪೋಷಕರು ಶ್ಲಾಘಿಸಿದರು.

Advertisement



ರಮೇಶ್ ಕುಮಾರ್ ರವರ ಭಾಷಣದ  ಅಂಶಗಳು 

ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಲಾಗಿದೆ. ಉದ್ದೇಶ ಪೂರ್ವಕವಾಗಿ ಖಾಸಗಿ ಶಾಲೆಗಳನ್ನು ಬೆಳೆಸಲಾಗಿದೆ. ಈ‌ಸಂದರ್ಭದಲ್ಲಿ ಪೋಷಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ತಮ್ಮಂತೆ ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಾವಾದ‌ ಇರುತ್ತದೆ. ಈ ಕನಸಿನೊಂದಿಗೆ ಖಾಸಗಿ ಶಾಲೆಗಳಿಗೆ ತಮ್ಮ‌ ಮಕ್ಕಳನ್ನು‌‌ಸೇರಿಸುತ್ತಾರೆ.‌ ಹೀಗೆ ಫೀಸು ಹೆಚ್ಚಾದಾಗ ಈ‌ ರೀತಿ‌ ಕೆಲವರು ಸಂಘಟಿತರಾಗುತ್ತಾರೆ.

ದೆಹಲಿಯ ಶಾಲೆಗಳು ಈ ಮಟ್ಟಕ್ಕೆ ಬೆಳೆಯಲು‌ ಮನುಷ್ಯನ ಇಚ್ಛಾಶಕ್ತಿ ಕಾರಣ. ಅಲ್ಲಿನ ಸರ್ಕಾರ ಖಾಸಗಿ ಸಂಸ್ಥೆಗಳನ್ನು ಹೊಂದಿರುವವರನ್ನು‌ ತಮ್ಮೊಂದಿಗೆ ಸೇರಿಸಿಕೊಂಡಿಲ್ಲ. ಆ ಶಕ್ತಿ ಕರ್ನಾಟಕದ ರಾಜಕಾರಣಕ್ಕೆ ಇಲ್ಲ. ನಮಗೆ ಸರ್ಕಾರಿ, ಖಾಸಗಿ ಎಲ್ಲಾ ಸಂಸ್ಥೆಗಳು ಬೇಕು ಎನ್ನುತ್ತಿದ್ದೇವೆ.  ದೆಹಲಿಯಲ್ಲಿ ಖಾಸಗಿ ಶಾಲೆಗಳಿಂದ ತಮ್ಮ ಮಕ್ಕಳನ್ನು ತೆಗೆದು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸಲು ನಮ್ಮ ರಾಜ್ಯದಲ್ಲಿ‌ಹಣವಿಲ್ಲವೆಂದಲ್ಲ. ಇಚ್ಛಾಶಕ್ತಿ ಬೇಕು.

ದೇಶವನ್ನು, ಜನರನ್ನು ಪ್ರೀತಿಸುವ ನಾವು ಯಾವುದೇ ಒಳ್ಳೆಯ ಬೆಳವಣಿಗೆಗಳನ್ನು ಬೆಂಬಲಿಸಬೇಕು. ಆಗ ಒಳ್ಳೆಯ ಜನಪ್ರತಿನಿಧಿಗಳಾಗಲು‌ ಸಾಧ್ಯ. 

ನಾನು‌ಈ ಕಾರ್ಯಕ್ರಮದಲ್ಲಿ‌ ಭಾಗವಹಿಸಿದ್ದನ್ನು  ಹುಚ್ಚು ಎಂದು ಮೂದಲಿಸುವವರು ಇದ್ದಾರೆ. ಇಳ್ಳೆಯ ಉದ್ದೇಶ ಇರುವ ಈ ಹುಚ್ಚಿನಲ್ಲಿಯೇ ಇರಲು ನಾನು ಇಷ್ಟಪಡುತ್ತೇನೆ. ನಾನು ನಿಮ್ಮೊಂದಿಗೆ ಈ‌ ಸಂದರ್ಭದಲ್ಲಿ ‌ಇದ್ದೇನೆ ಎನ್ನುವ ಬರವಸೆ ನೀಡಲು ಬಂದಿದ್ದೇನೆ. ಈ ಹೋರಾಟವನ್ನು‌ ಬೆಳೆಸಿ‌ ಒಂದು ಹೊಸರೂಪ‌‌ ನೀಡೋಣ. ನಮ್ಮ ನಾಯಕರ ಅಲಕ್ಷ್ಯ ಮನೋಭಾವದಿಂದ ನಮ್ಮ ನೋವುಗಳನ್ನು ಕೇಳಲು ಅವರು ತಯಾರಿಲ್ಲ. ನಾವು ಅವರನ್ನು‌ ಮನುಷ್ಯರನ್ನಾಗಿ ಮಾಡಬೇಕಿದೆ. 

ನಿಷ್ಕ್ರಿಯಗೊಂಡಿದ್ದ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ ಶಾಸನಕ್ಕೆ‌ ಮರುಜೀವ ನೀಡಲು ನಾನು ಹೊರಟಾಗ ಎಲ್ಲಾ ಪಕ್ಷಗಳೂ‌ ವಿರೋಧ‌ಮಾಡಿದವು. ನನ್ನ ಸ್ಥಿತಿ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡ ಅಭಿಮನ್ಯುವಿನಂತಾಗಿತ್ತು. ಹೈಕೋರ್ಟ್ ಗೆ ಸಾರ್ವಜನಿಕ ‌ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಯಿತು. ನಮ್ಮ ಅಹವಾಲು ಇದ್ದದ್ದು ಆ‌ ಶಾಸನದಲ್ಲಿ ಇದ್ದಂತೆ ಸಾವನ್ನಪ್ಪಿದ ರೋಗಿಯ ಮನೆಯವರಿಗೆ ಹಣದ ಅಗತ್ಯ ಇದ್ದಲ್ಲಿ‌ಹಣ ನೀಡಬೇಕು ಎಂಬುದು. ಮುಖ್ಯ ನ್ಯಾಯಾಧೀಶರು ತಕ್ಷಣ ಆದೇಶ ನೀಡಿದರು. ನಮಗೆ ಇನ್ನೊಬ್ಬರ ಸಾವಿನ ಬಗ್ಗೆ ಕರುಣೆಯೇ ಇಲ್ಲದಂತಾಗಿದೆ.

ಇದೇ ರೀತಿ ಎಲ್ಲಾ ಪಕ್ಷಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ನಾಯಕರು ಇದ್ದಾರೆ. ಹೀಗಾಗಿ ಇವರು ಪೋಷಕರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಇದಕ್ಕೆ ವ್ಯಾಪಕ ಚಳುವಳಿಯ ಅಗತ್ಯವಿದೆ. ನಾವು ಕೇಳಬೇಕಾಗಿರುವುದು ಇಷ್ಟೇ, ದೆಹಲಿಯ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಆಗಿದ್ದು ನಮ್ಮಲ್ಲಿ ಯಾಕೆ ಸಾಧ್ಯವಿಲ್ಲ? ನಮ್ಮ ನಾಯಕರಲ್ಲಿ ಇಷ್ಟನ್ನೇ ಕೇಳಬೇಕಿದೆ.




ನನಗೆ ದೇಶ, ಜನ ಮುಖ್ಯ, ಹಾಗಾಗಿ ಒಳ್ಳೆಯದನ್ನು ಬೆಂಬಲಿಸುತ್ತಿದ್ದೇನೆ.

ನಮ್ಮ ರಾಜ್ಯದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಬೇಕು. ಫೀಸ್ ಹೆಚ್ಚಳವನ್ನು ಪ್ರಶ್ನಿಸಬೇಕು. ಇದಕ್ಕಾಗಿ ನಿರಾಶರಾಗದೆ‌ ಹೋರಾಡಬೇಕು.

ಆಮ್ ಆದ್ಮಿ ಪಾರ್ಟಿಯ ಸಂಗಾತಿಗಳ ಬಗ್ಗೆ ನನಗೆ ಹೆಮ್ಮೆ  ಇದೆ. ಕಮಿಷನ್ ಗಾಗಿ ಟೊಪ್ಪಿ ಹಾಕಿಕೊಂಡು ಪಾರ್ಟಿಯನ್ನು ‌ಸೇರಿಲ್ಲ. ನೀವು ಭಾರತೀಯ ಇತಿಹಾಸದಲ್ಲಿ ‌ಹೊಸ ಅಧ್ಯಾಯ ಬರೆಯಲು ಹೊರಟಿದ್ದೀರಿ. ನಾನು ಇಲ್ಲಿಗೆ ಬಂದಿರುವುದು ಆಮ್ ಆದ್ಮಿಯ ಜೊತೆಗೆ ಇರುಲು. ಪಾರ್ಟಿ ಯಾವುದೇ ಆದರೂ ಆಮ್ ಆದ್ಮಿಯ ಸೇವೆ ಮಾಡಬೇಕು.


ADVERTISEMENT

Contact- 9844919455


Tags

Post a Comment

0Comments

Post a Comment (0)