ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾಮಿಂಗ್ ಆರ್ಟ್ಸ್ ಅ. 2 ರಂದು ಸೇವಾ ಸದನದಲ್ಲಿ -ನೃತ್ಯ ಸಂಹಿತಾ

varthajala
0

ಬೆಂಗಳೂರಿನ ಪ್ರತಿಷ್ಠಿತ `ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾಮಿಂಗ್ ಆರ್ಟ್ಸ್' ಸಂಸ್ಥೆ ಅಕ್ಟೋಬರ್ 2ರ ಬೆಳಗ್ಗೆ 9ಕ್ಕೆ ಮಲ್ಲೇಶ್ವರದ ಸೇವಾ ಸದನದಲ್ಲಿ `ನೃತ್ಯ ಸಂಹಿತಾ' ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. 






ರಾಷ್ಟಿçಯ ಮತ್ತು ಅಂತಾರಾಷ್ಟಿçಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಭರತನಾಟ್ಯ ವಿದುಷಿ ಮತ್ತು ವಿದ್ವಾಂಸರ ಹಿರಿಯ ಶಿಷ್ಯೆಯರು ಈ ಕಾರ್ಯಕ್ರಮದಲ್ಲಿ ಅಮೋಘ ಕಲಾಪ್ರದರ್ಶನ ನೀಡಲಿರುವುದು ವಿಶೇಷವಾಗಿದೆ. 

ನಾಟ್ಯಾಂಜಲಿ ಸಂಸ್ಥೆಯ ನಿರ್ದೇಶಕ ಮತ್ತು ಮತ್ತು ಕರ್ನಾಟಕ ಕಲಾಶ್ರೀ ಪುರಸ್ಕೃತ ಭರತನಾಟ್ಯ ವಿದ್ವಾಂಸ ಅಶೋಕ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ. 

ನೃತ್ಯ ಪ್ರಸ್ತುತಿ: ಭರತನಾಟ್ಯ ಕಲಾವಿದರಾದ ರಂಜಿನಿ ಶ್ರೀನಿವಾಸನ್, ಕಾವ್ಯಾ ಕಾಶಿನಾಥನ್, ಬಿ.ಎನ್. ನಿಕಿತಾ, ಕೃಪಾ ರಾಮಚಂದ್ರನ್, ತೇಜಸ್ವಿನಿ-ಯಶಸ್ವಿನಿ, ಪೂಜಾ ಸಾತನೂರು, ಪೂಜಾ ಗೋಪಿ ಮತ್ತು ವರ್ಷಿಣಿ-ಚಂದನಾ ಅವರು ಭರತನಾಟ್ಯ ಪ್ರಸ್ತುತ ಪಡಿಸಲಿದ್ದಾರೆ. ಕೊನೆಯಲ್ಲಿ ನೃತ್ಯ ನೂಪುರ ತಂಡದಿ0ದ (ವಿದುಷಿಯರಾದ ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಾ ಶ್ರೀ ಅವರ ಹಿರಿಯ ಶಿಷ್ಯೆಯರು) ಅಮೋಘ ನೃತ್ಯ ಪ್ರದರ್ಶನವಿದೆ ಎಂದು ಪ್ರಣವಾಂಜಲಿ ಸಂಸ್ಥೆಯ ನೃತ್ಯ ನಿರ್ದೇಶಕರಾದ ವಿದುಷಿ ಪವಿತ್ರಾ ಪ್ರಶಾಂತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿದುಷಿ ಪವಿತ್ರಾ ಪ್ರಶಾಂತ್ 

ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾಮಿಂಗ್ ಆರ್ಟ್ಸ್

 97432 15684




Tags

Post a Comment

0Comments

Post a Comment (0)