ಬೆಂಗಳೂರು, ಸೆ. 05: 6-9-2021 ರ ಸೋಮವಾರದಿಂದ 6ರಿಂದ 8ನೇ ತರಗತಿಗಳೂ (6th to 8th standard schools) ಪ್ರಾರಂಭವಾಗುತ್ತಿವೆ. ಈಗಾಗಲೇ 9 ಹಾಗು ಮೇಲ್ಪಟ್ಟ ತರಗತಿಗಳು ನಡೆಯುತ್ತಿವೆ.
ಈಗಾಗಲೇ ಚಾಲನೆಯಲ್ಲಿರುವ ಶಾಲಾ ಮತ್ತು ಕಾಲೇಜು ಮಕ್ಕಳಲ್ಲಿ ಕೋವಿಡ್ನಿಂದ ಅಪಾಯಕಾರಿ ಪರಿಸ್ಥಿತಿ ಉದ್ಭವಿಸಿರುವುದು ಕಂಡುಬರದ ಹಿನ್ನೆಲೆಯಲ್ಲಿ 6-8ನೇ ತರಗತಿಯವರೆಗಿನ ಶಾಲೆಗಳನ್ನ ಪ್ರಾರಂಭಿಸಲಾಗುತ್ತಿದೆ. ರಾಜ್ಯಾದ್ಯಂತ ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ (Positivity rate less than 2%) ಇರುವ ಕಡೆ ಶಾಲೆಗಳನ್ನ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇರಳದ ಗಡಿಭಾಗದ ತಾಲೂಕುಗಳನ್ನ ಹೊರತುಪಡಿಸಿ ರಾಜ್ಯ ಉಳಿದ ಕಡೆ ನಾಳೆ ಆರು ಮೇಲ್ಪಟ್ಟು ತರಗತಿಗಳನ್ನ ಆರಂಭಿಸಲಾಗುತ್ತಿದೆ.
ಆರರಿಂದ ಎಂಟನೇ ತರಗತಿ ಶಾಲೆ ಆರಂಭಿಸಲು ಕೊರೋನಾ ಮಾರ್ಗಸೂಚಿಗಳನ್ನ ಅನುಸರಿಸಲಾಗುತ್ತದೆ. ಶಾಲೆಯ ಆವರಣ, ಕೊಠಡಿ, ಪ್ರಯೋಗಾಲಯ ಇತ್ಯಾದಿ ಜಾಗಗಳನ್ನ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡುವುದು; ಮಕ್ಕಳ ಭೌತಿಕ ತರಗತಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯಪಡಿಸುವುದು; ಪ್ರತೀ ತರಗತಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಗರಿಷ್ಠ 20 ಮಕ್ಕಳು ಇರುವ ತಂಡಗಳನ್ನ ರಚಿಸುವುದು ಇತ್ಯಾದಿ ಅಂಶಗಳನ್ನ ಶಾಲೆಗಳು ಪಾಲಿಸುವುದು ಕಡ್ಡಾಯ. ಶಾಲೆಗಳಲ್ಲಿ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತದೆ. ಬೆಂಚ್ನಲ್ಲಿ ಮಕ್ಕಳು ದೂರ ದೂರ ಕೂರುವುದು ಇತ್ಯಾದಿ ವಿಷಯಗಳನ್ನ ಹೆಚ್ಚು ಗಮನ ಕೊಡಲು ಸೂಚಿಸಲಾಗಿದೆ.