Competitive Exams

varthajala
0

 ಯುಪಿಎಸ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ


ಬೆಂಗಳೂರು, ಆಗಸ್ಟ್ 07 ( ಕರ್ನಾಟಕ ವಾರ್ತೆ ) :


ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ವಾಸವಿ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ 2022 ರಲ್ಲಿ ಯುಪಿಎಸ್‍ಸಿ ಪರೀಕ್ಷೆಗಳಲ್ಲಿ ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಪದವಿ ಮುಗಿಸಿರಬೇಕು ಅಥವಾ ಪದವಿಯ ಅಂತಿಮ ಸೆಮಿಸ್ಟರ್‍ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಸಲು ಆಗಸ್ಟ್ 12, 2021 ಕೊನೆಯ ದಿನಾಂಕವಾಗಿದೆ.

ಅರ್ಜಿಗಳ ಸ್ವೀಕೃತಿ ದಿನಾಂಕ ಮುಗಿದ ನಂತರ ಪ್ರವೇಶ ಪರೀಕ್ಷೆಗಳನ್ನು ವಾಸವಿ ಅಕಾಡೆಮಿ ವತಿಯಿಂದ ನಡೆಸಿ ಗರಿಷ್ಠ 100 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಅನುಭವಿಗಳಿಂದ ಮಾರ್ಗದರ್ಶನ ನೀಡಲಾಗಿರುತ್ತದೆ.

ಕೋಚಿಂಗ್ ಶಿಕ್ಷಣ ಮಾಧ್ಯಮ ಇಂಗ್ಲೀಷ್ ಭಾಷೆಯಲ್ಲಿರುತ್ತದೆ. ಆಸಕ್ತ ವಿದ್ಯಾರ್ಥಿಗಳು  www.vasaviacdemy.com     ಗೆ ಭೇಟಿ ನೀಡಿ ಪ್ರವೇಶ ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಭರ್ತಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8073499217 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


ಅನಿಕೇತನ ಚಂದಾದಾರ ಅಭಿಯಾನ


ಬೆಂಗಳೂರು, ಆಗಸ್ಟ್ 07 ( ಕರ್ನಾಟಕ ವಾರ್ತೆ ) :


 ಸಾಹಿತ್ಯ ಕ್ಷೇತ್ರದ ಎಲ್ಲಾ ಓದುಗ ಬಂಧುಗಳಿಗೂ ಮೌಲ್ಯಯುತವಾದ ಸಾಹಿತ್ಯ ವಿಚಾರಗಳನ್ನು ತಲುಪಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಅನಿಕೇತನ ಚಂದಾದಾರ ಅಭಿಯಾನವನ್ನು ಹಮ್ಮಿಕೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಅನಿಕೇತನವನ್ನು 1984ರಿಂದ ಕನ್ನಡದಲ್ಲಿ ಪ್ರಾರಂಭಿಸಿ, ಸಾಹಿತ್ಯಾಸಕ್ತರ ಮೆಚ್ಚುಗೆಯನ್ನು ಪಡೆದುಕೊಂಡಿರುವುದು ವಿಶೇಷ. ಯು.ಜಿ.ಸಿಯಿಂದ ಅನುಮೋದನೆ ಪಡೆದ ಕನ್ನಡದ ಕೆಲವೇ ಪತ್ರಿಕೆಗಳಲ್ಲಿ ಅನಿಕೇತನವೂ ಒಂದು ಎಂಬುದು ಸಂತಸದ ವಿಷಯವಾಗಿದೆ. ಅನುವಾದಕ್ಕೆ ಮೀಸಲಾಗಿದ್ದ ಕನ್ನಡ ಅನಿಕೇತನದ ಸ್ವರೂಪವನ್ನು ಮಾರ್ಪಡಿಸಿ ಎಲ್ಲಾ ಸಾಹಿತ್ಯಾಸಕ್ತರಿಗೂ ಅನುಕೂಲವಾಗುವಂತಹ ಲೇಖನಗಳನ್ನು ಪ್ರಕಟಿಸುತ್ತಾ ಬರುತ್ತಿದೆ. ಅನಿಕೇತನಕ್ಕೆ ಚಂದಾದಾರರಾಗ ಬಯಸುವವರು ಅಕಾಡೆಮಿಯ ವೆಬ್‍ಸೈಟ್ ವಿಳಾಸ: www.karnatakasahithyaacademy.org      ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


ನವದೆಹಲಿಯ ಕರ್ನಾಟಕ ಭವನದಲ್ಲಿ ಖಾಲಿಯಿರುವ  

ವಿವಿಧ ವೃಂದದ ಹುದ್ದೆಗಳಿಗೆ ಆಯ್ಕೆ ಪಟ್ಟಿ ಪ್ರಕಟ


ಬೆಂಗಳೂರು, ಆಗಸ್ಟ್ 07 ( ಕರ್ನಾಟಕ ವಾರ್ತೆ ) :


ನವದೆಹಲಿಯ ಕರ್ನಾಟಕ ಭವನದಲ್ಲಿ ದಿನಾಂಕ:20-02-2021ರ ಅಧಿಸೂಚನೆಯಲ್ಲಿ ನವದೆಹಲಿಯ ಕರ್ನಾಟಕ ಭವನದಲ್ಲಿ ಖಾಲಿ ಇರುವ ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳನ್ನು (ಉಳಿಕೆ ವೃಂದದ 25 ಹಾಗೂ ಹೈದ್ರಾಬಾದ್ ಕರ್ನಾಟಕ ವೃಂದದ 7 ಹುದ್ದೆ ಒಟ್ಟು 32 ಹುದ್ದೆಗಳು) ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.


ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗಾಗಿ ಹಾಗೂ ಪ್ರಾವೀಣ್ಯತೆ ಪರೀಕ್ಷೆಗಳಿಗಾಗಿ (ಅನ್ವಯಿಸುವ ಹುದ್ದೆಗಳಿಗೆ ಮಾತ್ರ) 1:5 ಅನುಪಾತದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು  www.karnatakabhavan.karnataka.gov.in   ರಲ್ಲಿ ದಿನಾಂಕ: 14-07-2021 ರಂದು ಪ್ರಕಟಿಸಲಾಗಿತ್ತು. ಜುಲೈ2021 ರ 29, 30 ರಂದು ಬೆಂಗಳೂರಿನ ಕುಮಾರಕೃಪ ಅತಥಿಗೃಹದಲ್ಲಿ ಅರ್ಹ ಅಭ್ಯರ್ಥಿಗಳಲ್ಲಿ 1:5 ರಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಹಾಗೂ ಪ್ರಾವೀಣ್ಯತೆ ಪರೀಕ್ಷೆಯನ್ನು (ಅನ್ವಯಿಸುವ ಹುದ್ದೆಗಳಿಗೆ ಮಾತ್ರ) ನಡೆಸಲಾಗಿತ್ತು.


ಆಯ್ಕೆಗೊಂಡಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಂಪೂರ್ಣ ಮಾಹಿತಿ ಹಾಗೂ ವಿವರಗಳೊಂದಿಗೆ ಸಿದ್ಧಪಡಿಸಿ  www.karnatakabhavan.karnataka.gov.in ರಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ದಿನಾಂಕ:06-08-2021 ರಂದು ಪ್ರಕಟಿಸಲಾಗಿದೆ.


ಆಯ್ಕೆಗೊಂಡಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಕಾಯುವಿಕೆ ಪಟ್ಟಿಗೆ ಸಂಬಂಧಿಸಿದಂತೆ ಬಾಧಿತರಾಗಬಹುದಾದ ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ ದಿನಾಂಕ: 17-08-2021 ರ ಸಂಜೆ 5.30 ಗಂಟೆಯೊಳಗೆ ಅಧ್ಯಕ್ಷರು ನೇರ ನೇಮಕಾತಿ ಆಯ್ಕೆ ಸಮಿತಿ ಹಾಗೂ ಉಪನಿವಾಸಿ ಆಯುಕ್ತರು (ಹೆಚ್‍ಕೆ) ಕರ್ನಾಟಕ ಭವನ (ಕಾವೇರಿ) ನಂ.10, ಕೌಟಿಲ್ಯ ಮಾರ್ಗ, ನವದೆಹಲಿ-110021 ರವರಿಗೆ ತಲುಪುವಂತೆ ಲಿಖಿತವಾಗಿ ಕಳುಹಿಸುವುದು ಅಥವಾ ಇ-ಮೇಲ್ ವಿಳಾಸ: dyrckb@gmail.com     ಗೆ ಕಳುಹಿಸುವುದು. ನಿಗಧಿತ ಸಮಯದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ


ಅಂತಿಮ ಆಯ್ಕೆಪಟ್ಟಿ ಪ್ರಕಟ


ಬೆಂಗಳೂರು, ಆಗಸ್ಟ್ 07 ( ಕರ್ನಾಟಕ ವಾರ್ತೆ ) :


ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಧಿಸೂಚಿಸಲಾದ ವಿವಿಧ ವೃಂದದ ಹುದ್ದೆಗಳ ನೇಮಕಾತಿಗಳ ಸಂಬಂಧ ಅಂತಿಮ ಆಯ್ಕೆ ಪಟ್ಟಿ ಹಾಗೂ ಕಟ್‍ಆಫ್ ಅಂಕಗಳನ್ನು ಆಗಸ್ಟ್ 6, 2021 ರಂದು ಆಯೋಗದ ವೆಬ್‍ಸೈಟ್ ವಿಳಾಸ:  http://kpsc.kar.nic.in/lists      ನಲ್ಲಿ ಪ್ರಕಟಿಸಲಾಗಿದೆ.


ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಗಣಿತ ಶಿಕ್ಷಕರು (ಉಳಿಕೆ ಮೂಲ ವೃಂದ 29+09 ಹೈ.ಕ) (ಗ್ರೂಪ್-ಸಿ) 38 ಹುದ್ದೆಗಳ ಅಂತಿಮ  ಆಯ್ಕೆ ಪಟ್ಟಿ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜುಗಳಲ್ಲಿನ ನಿಯಮಪಾಲಕರು (ಮಹಿಳೆ) (ಉಳಿಕೆ ಮೂಲ ವೃಂದ 09+03 ಹೈ.ಕ) (ಗ್ರೂಪ್-ಸಿ) 12 ಹುದ್ದೆಗಳ ಅಂತಿಮ  ಆಯ್ಕೆ ಪಟ್ಟಿ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ನಿಯಮಪಾಲಕರು (ಪುರುಷ) (ಉಳಿಕೆ ಮೂಲ ವೃಂದ 21+5 ಹೈ.ಕ) (ಗ್ರೂಪ್-ಸಿ) 26 ಹುದ್ದೆಗಳ ಅಂತಿಮ  ಆಯ್ಕೆ ಪಟ್ಟಿ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ನಿಯಮಪಾಲಕರು (ಮಹಿಳೆ) (ಉಳಿಕೆ ಮೂಲ ವೃಂದ 32+5 ಹೈ.ಕ) (ಗ್ರೂಪ್-ಸಿ) 37 ಹುದ್ದೆಗಳ ಅಂತಿಮ  ಆಯ್ಕೆ ಪಟ್ಟಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿನ ಲೆಕ್ಕಸಹಾಯಕರು (ಉಳಿಕೆ ಮೂಲ ವೃಂದ 15+3 ಹೈ.ಕ) (ಗ್ರೂಪ್-ಸಿ) 18 ಹುದ್ದೆಗಳ ಅಂತಿಮ  ಆಯ್ಕೆ ಪಟ್ಟಿಯನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ ಎಂದು  ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)