ಬೆಂಗಳೂರು, ಆಗಸ್ಟ್ 27 (ಕರ್ನಾಟಕ ವಾರ್ತೆ): ಬೆಂಗಳೂರಿನ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2021-22 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸುಗಳಿಗೆ ಆಗಸ್ಟ್ 12 ರಿಂದ ನೇರವಾಗಿ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವವರು ಎಸ್.ಎಸ್.ಎಲ್.ಸಿ ಯಲ್ಲಿ ಕನಿಷ್ಠ ಶೇ.35% ಅಂಕ ಪಡೆದು ತೇರ್ಗಡೆ ಹೊಂದಿರಬೇಕು.
ಅಭ್ಯರ್ಥಿಗಳಿಗೆ ಲಭ್ಯವಿರುವ ಕೋರ್ಸುಗಳು Computer Science Engineering, Civil Engineering, Electronics & Communication Engineering, Mechanical Engineering ಆಗಿದ್ದು, ಸಾಮಾನ್ಯ ಹಾಗೂ 2ಬಿ ವರ್ಗದವರಿಗೆ ಪ್ರವೇಶ ಶುಲ್ಕ ರೂ.4270/-, ಎಸ್.ಸಿ/ಎಸ್.ಟಿ (ಆದಾಯ 2.5 ಲಕ್ಷದವರೆಗೆ) ರೂ.430/- ಎಸ್.ಸಿ/ಎಸ್.ಟಿ (ಆದಾಯ 2.5- 10 ಲಕ್ಷದವರೆಗೆ) ರೂ. 2535, ಪ್ರವರ್ಗ-1 (ಆದಾಯ 2.5 ಲಕ್ಷದವರೆಗೆ) ರೂ.960/-, 2ಎ/3ಎ/3ಬಿ (ಆದಾಯ 1 ಲಕ್ಷದವರೆಗೆ ) ರೂ.960/- SNQ (ಎಲ್ಲಾ ವರ್ಗದವರಿಗೆ ರೂ. 8 ಲಕ್ಷದವರೆಗೆ) ರೂ. 1330/- ನಿಗಧಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಡಾ. ಮೋಖಾ ಶೇಕು ಅವರ ಮೊಬೈಲ್ ಸಂಖ್ಯೆ: 9663876868 ಇವರನ್ನು ಸಂಪರ್ಕಿಸಬಹುದಾಗಿದೆ.