ಚಹರೆಗಳೆಂದರೆ ಗಾಯಗಳೂ ಹೌದು’ ಪುಸ್ತಕ ಬಿಡುಗಡೆ

varthajala
0

ಸಮುದಾಯಗಳ ಅಧ್ಯಯನವನ್ನು ಯಾವ ಕ್ರಮದಲ್ಲಿ ನೋಡಬೇಕು, ಅದರ ಹಿನ್ನೆಲೆಯೇನು, ಚರಿತ್ರೆಯೇನು, ಸಾಂಸ್ಕೃತಿಕ ಮಹತ್ವವೇನು, ಅದರ ಅನನ್ಯತೆಯೇನು, ಅದನ್ನು ಉಳಿಸಬೇಕಿರುವ ಬಗೆಯೇನು ಎಂಬುದನ್ನು ಸಾಧ್ಯಂತವಾಗಿ ವಿವರಿಸುವ ಕುರಿತು ಮಹತ್ವ ಪುಸ್ತಕವೊಂದು ಕನ್ನಡ ಲೋಕಕ್ಕೆ ಲಭಿಸಿದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ ಚಿ ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಿಸಿರುವಹಂಪಿ ವಿಶ್ವವಿದ್ಯಾಲಯದ ಪ್ರೊ.ಎಸ್ ಪ್ರಭಾಕರ ಅವರ “ಚಹರೆಗಳೆಂದರೆ ಗಾಯಗಳೂ ಹೌದು” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರುಬುಡಕಟ್ಟುಗಳ ಕುರಿತು ಸಮಗ್ರ ವಿಚಾರಗಳು ಮತ್ತು ಪರಿಪೂರ್ಣ ದೃಷ್ಟಿಕೋನಕ್ಕಾಗಿ  ಪುಸ್ತಕ ಓದಬೇಕುಇದರಿಂದ ಸಾಮಾಜಿಕ ಅಧ್ಯಯನಕ್ಕೆ ಹೊಸ ದಾರಿ ಸಿಗುತ್ತದೆ ಎಂದರು.

ನಮ್ಮ ಗ್ರಾಮೀಣ ಜನಪದ ಸಂಸ್ಕೃತಿ ಮತ್ತು ಅರಣ್ಯ ಬುಡಕಟ್ಟು ಸಂಸ್ಕೃತಿಗಿಂತ ಅಲೆಮಾರಿ ಸಂಸ್ಕೃತಿ ಭಿನ್ನವಾದ ಸಂಸ್ಕ್ರತಿಯಾಗಿದೆಅದು ನಿರಂತರ ಪಯಣದ ಜೊತೆ ಅಪಾರವಾದ ಜ್ಞಾನಭಂಡಾರ ತುಂಬಿಕೊಂಡ ಸಮುದಾಯಭಾಷೆ ಮತ್ತು ಸಂಸ್ಕತಿಯ ನಡುವಿನ ಕೊಂಡಿಯಾಗಿ ಅದು ಕೆಲಸ ಮಾಡುತ್ತಿದೆನಮ್ಮ ದೇಸಿಯ ಚಿಂತನೆ ಪಟ್ಟಭದ್ರ ಚಿಂತನೆಗೆ ಅಂಟಿಕೊಳ್ಳುವ ಕಾಲದಲ್ಲಿ ಸಂಸ್ಕೃತಿ ಅಂದರೆ ಹೀಗಿದೆ ಎಂಬುದನ್ನು ಅದೇ ಸಮುದಾಯದ ಒಳಗಿನಿಂದ ಬಂದ ಪ್ರಭಾಕರ್ರವರು ಹೃದಯದಿಂದ ಉಕ್ಕುವ ಸಾಹಿತ್ಯದ ರೀತಿ ಬರೆದಿದ್ದಾರೆವೈಚಾರಿಕತೆ ಮತ್ತು ಪ್ರತಿಭೆಯನ್ನು ಬಸಿದು ಕಥನ ಕಟ್ಟಿದ್ದುಇಂದಿನ ವಿಷಮ ರಾಜಕೀಯ ಪರಿಸ್ಥಿತಿಯಲ್ಲಿ  ಬರಹಗಳು ಅಗತ್ಯ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಪ್ರೊಪ್ರಶಾಂತ್ ನಾಯಕ್ ಪುಸ್ತಕದ ಬಗ್ಗೆ ಮಾತನಾಡಿ " ಪುಸ್ತಕವು ಕಥನದ ದಾಟಿಯಲ್ಲಿದೆಆದರೆ ವರ್ಣನೆ ಅಲ್ಲವ್ಯಾಖ್ಯಾನವೂ ಅಲ್ಲಇದು ಕೇವಲ ವಿಮರ್ಶೆ ಅಲ್ಲ ಆದರೆ ಎಚ್ಚರಪ್ರಜ್ಞೆಯನ್ನು ಒಳಗೊಂಡಿದೆಕಾವ್ಯ ಅಲ್ಲಕಥನ ಅಲ್ಲಎಲ್ಲವೂ ಹೌದುಎಲ್ಲಾ ಲಕ್ಷಣಗಳನ್ನು ಒಳಗೊಂಡಿರುವ ವಿಶಿಷ್ಟ ಕೃತಿಎಂದರು.

ಪುಸ್ತಕದ ಶೀರ್ಷಿಕೆ ಬಹಳ ಅರ್ಥಗರ್ಭಿತವಾಗಿದೆಚಹರೆ ಎಂದರೆ ಗುರುತಿಸುವಿಕೆಅಸ್ತಿತ್ವರೂಪುರೇಷೆಸ್ವರೂಪ ಇತ್ಯಾದಿ ಅರ್ಥಗಳು ಬರುತ್ತವೆಆದರೆ ಪ್ರಭಾಕರ್ರವರು ಅದಕ್ಕೆ ಗಾಯಗಳೂ ಹೌದು ಎಂಬ ಹೊಸ ಅರ್ಥವನ್ನು ನೀಡಿದ್ದಾರೆಅಂತರಂಗದ ದನಿ ಇದುಅಂದರೆ ಜನಸಮುದಾಯಗಳ ಸಹಜವಾದ ಬದುಕು ಹತ್ತಿಕ್ಕಲ್ಪಟ್ಟಿದೆಹಾಗಾದರೆ  ಗಾಯ ಮಾಡಿದವರು ಯಾರುನಾವುಅಂದರೆ 'ನಾಗರಿಕಆಧುನಿಕ ಎಂದು ಕರೆಸಿಕೊಳ್ಳುವವರ ಅದಕ್ಕೆ ಕಾರಣ ಎನ್ನುವ ಎಚ್ಚರದಿಂದಆತ್ಮಾವಲೋಕನ  ಕೃತಿಯಲ್ಲಿದೆಇಲ್ಲಿ ಅವರ ನೆಲಮೂಲದ ಪ್ರಜ್ಞೆ ಇದೆನಿಜದ ಮಣ್ಣಿನ ಮಕ್ಕಳು ಅವರು ಎಂಬ ದೃಡೀಕರಣವಿದೆಇದು ಗಾಯಗಳು ಹೌದು ಎನ್ನುತ್ತಿರುವಾಗ ಅವರು ಅನುಸಂಧಾನ ಮಾಡುತ್ತಿದ್ದಾರೆ ಎಂದರು.

ಸಮುದಾಯದ  ಗಾಯಗಳಿಗೆ ಔಷಧೋಪಚಾರ ಮಾಡಲು ಯಾರೂ ಮುಂದಾಗಿಲ್ಲ. ಅದರ ಪ್ರಯತ್ನವೇ  ಅಧ್ಯಯನ ಪುಸ್ತಕವಾಗಿದೆ. ಇದೊಂದು ಕೇವಲ ಪುಸ್ತಕವಲ್ಲ. ಪುಸ್ತಕ ಬೇರೆ, ಕಲಾಕೃತಿ ಬೇರೆಸಂಸ್ಕ್ರತಿ ಕಥನ ಕೃತಿಯೊಂದು ಕಲಾಕೃತಿಯಾಗುವ ಪರಿ ಲೇಖಕನ ಬದ್ಧತೆಯ ಮೇಲೆ ನಿಂತಿರುತ್ತದೆ. ಅದನ್ನು .ಎಸ್ ಪ್ರಭಾಕರ್ ಇಲ್ಲಿ ನಿರೂಪಿಸಿದ್ದಾರೆ ಎಂದರು.

ಸಬಾಲ್ಟ್ರನ್ ಸ್ಟಡಿಸಂಸ್ಕ್ರತಿಯ ಅಧ್ಯಯನ ಕೇವಲ ಘೋಷಣೆಗಳಾಗಿರುವ ಸಂದರ್ಭದಲ್ಲಿ ನಮ್ಮ ವಿಶ್ವ ವಿದ್ಯಾಲಯಗಳ ಸಮುದಾಯ ಅಧ್ಯಯನ ವಿಧಾನದಲ್ಲಿಯೇ ಸಮಸ್ಯೆಯಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆಆದರೆ .ಎಸ್ ಪ್ರಭಾಕರ್ರವರ ಶ್ರಮ ಮತ್ತು ಬದ್ಧತೆಯಿಂದ  ಪುಸ್ತಕವು ಸಮುದಾಯ ಕಥನಗಳು ಸಾರ್ಥಕತೆಯಾಗುವುದನ್ನು ನಿರೂಪಿಸಿವೆಇಲ್ಲಿ ಸಮುದಾಯಗಳ ಕುರಿತು ನೆಹರುಅಂಬೇಡ್ಕರ್ಮಹಾಶ್ವೇತಾದೇವಿಯವರ ಚಿಂತನೆಗಳಿವೆ ಎಂದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರಾದ (ಮೌಲ್ಯಮಾಪನಪ್ರೊಜಿರಮೇಶ್ ಮತ್ತು ಜೇನುಕುರುಬರ ಸೋಮಣ್ಣ ಮಾತನಾಡಿದರುಗೌರಿ ಮೀಡಿಯಾ ಟ್ರಸ್ಟ್ ಅಧ್ಯಕ್ಷರಾದ ಡಿ ಎಂ ನರಸಿಂಹಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಲೇಖಕರಾದ ಡಾ ಎಸ್ ಪ್ರಭಾಕರ್ ಉಪಸ್ಥಿತರಿದ್ದರುಇದೇ ಸಂದರ್ಭದಲ್ಲಿ ಜೇನುಕುರುಬರ ಸೋಮಣ್ಣನವರಿಗೆ ಸನ್ಮಾನ ಮಾಡಲಾಯಿತು.


Tags

Post a Comment

0Comments

Post a Comment (0)