ಬಾಳನದಿ

varthajala
0

ತವರಿನ ಸಿರಿ ಇವಳು

ಭೂಮಿಗೆ ಬರುತ್ತಲೆ

ಅಣ್ಣನ ಪದವಿ ಹೊತ್ತು ‌ತಂದವಳು



ತೊಟ್ಟಿಲಲಿ ಜೊಲ್ಲು ಸುರಿಸಿ ಕಣ್ಣರಳಿಸಿ ತೊದಲು ನುಡಿವ  ಬೊಂಬೆಯಾಗಿಬಿಟ್ಟಳು 

ನನ್ನೆಲ್ಲಾ ಆಟಿಕೆಗಳ ನನಗೆ ಗೊತ್ತಿಲ್ಲದೆ ಮರೆಸಿಬಿಟ್ಟಳು


ಬಾಲ್ಯದಲ್ಲಿ ಜೊತೆಗೂಡಿ ಆಡಿ

ಲೆಕ್ಕವಿಲ್ಲದಷ್ಟು ಜಗಳವಾಡಿ

ಟೂ ಬಿಟ್ಟು ಮತ್ತೆ ಮಾತನಾಡಿ

ತುಂಟ ನೆಪಗಳ ಹೊತ್ತು ಕಾಡಿ

ಮನ ಮನೆಯನೆಲ್ಲಾ ತುಂಬಿ ಬಿಟ್ಟಳು , 

ಮಾಸದ ಸಂಭ್ರಮವೇ ಆಗಿಬಿಟ್ಟಳು


ಕಷ್ಟ ಸುಖದಿ ಭಾಗಿಯಾಗಿ

ಗೆಳೆಯ ನಂತೆ ಸಲಹೆ ನೀಡಿ

ಆತ್ಮ ಸ್ಥೈರ್ಯಕೆ ಸ್ಪೂರ್ತಿಯಾಗಿ

ತಾಯಿ ಯಂತೆ ಮಮತೆ ತೋರಿ ಪದಕೆ ನಿಲುಕದ ಆತ್ಮ ಬಂಧುವಾಗಿ ಬಿಟ್ಟಳು

ದೈವವಿತ್ತ ಅನುಪಮ ಬಂಧುವಾಗಿ ಬಿಟ್ಟಳು.



ಬಾಳ ಬಳ್ಳಿ ಹಬ್ಬಿ ಸಾಗಿ

ಇಲ್ಲಿ ಹುಟ್ಟಿ ಅಲ್ಲಿ ಬಾಳಿ

ಏಳು ಬೀಳು ಒಂದೆ ಮಾಡಿ

ಬಾಳ ಸೊಬಗ ಬೀರಿ ಹಾಡಿ

ಜೋಡು ಮನೆ ಜ್ಯೋತಿಯಾಗಿ

ತವರು ಮನೆಯ ಕೀರ್ತಿಯಾಗಿ ನಿಲ್ಲದೆ ಹರಿದಿಹಳು ಜೀವನದಿಯಾಗಿ

ಸಡಗರದಿ ಹರಯುತಿಹಳು

ಬಾಳ‌ನದಿಯಾಗಿ,


 ಈ ಬಾಳನದಿಗೆ ಬಾಗೀನ ನೀಡುವೆ  

ಶಿರಬಾಗಿ ಶರಣೆನೆನುತ

ರಕ್ಷಾಬಂಧನವ ಕಟ್ಟಿ

ಹರಸೆನುತ ಕರ ಕೊಡುವೆ.


ಇಂತಿ,

 ವೀರೇಶ್ ಮುತ್ತಿನಮಠ✒️ 

22/08/2021

Post a Comment

0Comments

Post a Comment (0)