ಬೇಕರಿ ತಂತ್ರಜ್ಞಾನ ತರಬೇತಿಗಾಗಿ ಅರ್ಜಿ ಆಹ್ವಾನ

varthajala
0
ಬೆಂಗಳೂರು, ಜುಲೈ 19 (ಕರ್ನಾಟಕ ವಾರ್ತೆ): ಕೃಷಿ ವಿಶ್ವವಿದ್ಯಾನಿಲಯದ ಬೇಕರಿ ತರಬೇತಿ ಕೇಂದ್ರದ ವತಿಯಿಂದ ಹದಿನಾಲ್ಕು ವಾರದ ಬೇಕರಿ ಟೆಕ್ನಾಲಜಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಕನಿಷ್ಟ ಎಸ್.ಎಸ್.ಎಲ್.ಸಿ. (ಹತ್ತನೇ ತರಗತಿ) ಪಾಸ್/ ಫೇಲ್ ಆಗಿರಬಹುದು  ಮತ್ತು 21 ರಿಂದ 60 ವರ್ಷದ ವಯೋಮಿತಿಯಲ್ಲಿರಬೇಕು. ನಿಗಧಿತ ಅರ್ಜಿ ಪಾರಂಗಳನ್ನು ರೂಪಾಯಿ 10-00 (ಹತ್ತು) ಸಂದಾಯಿಸಿ, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560024, ಇಲ್ಲಿ ಪಡೆದುಕೊಳ್ಳಬಹುದು.

ಅರ್ಜಿಯನ್ನು ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560 024, ಈ ವಿಳಾಸಕ್ಕೆ ಜುಲೈ 28, ಸಂಜೆ 4.00 ಗಂಟೆಯೊಳಗೆ  ಸಲ್ಲಿಸಬೇಕು.

ಹೆಚ್ಚಿನ ವಿವರಗಳಿಗೆ  ದೂರವಾಣಿ ಸಂಖ್ಯೆ:  080-23513370 ಮತ್ತು  ಇ-ಮೇಲ್ ವಿಳಾಸ : bakery.uas@gmail.com   ಹಾಗೂ ಕಛೇರಿ ವಿಳಾಸ: ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಕೃಷಿವಿಶ್ವವಿದ್ಯಾನಿಲಯ, ಹೆಬ್ಬಾಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Tags

Post a Comment

0Comments

Post a Comment (0)