ಭಾರತದ ಅತಿದೊಡ್ಡ ವರ್ಚುವಲ್ ಶಿಕ್ಷಣ ಮೇಳ-2021 ಜು. 23 ರಿಂದ ಆ. 7 ರವರೆಗೆ

varthajala
0

 ಎಇಸಿಸಿ ಗ್ಲೋಬಲ್ ಸಂಸ್ಥೆ ಆಯೋಜಿಸಿರುವ

ಭಾರತದ ಅತಿದೊಡ್ಡ ವರ್ಚುವಲ್ ಶಿಕ್ಷಣ ಮೇಳ-2021

ಬೆಂಗಳೂರು: ಎಇಸಿಸಿ ಗ್ಲೋಬಲ್ ಸಂಸ್ಥೆ ಆಯೋಜಿಸಿರುವ ಭಾರತದ ಅತಿದೊಡ್ಡ ವರ್ಚುವಲ್ ಶಿಕ್ಷಣ ಮೇಳ-2021  ಜುಲೈ 23 ರಿಂದ ಆಗಸ್ಟ್ 7 ರವರೆಗೆ ಪ್ರತಿ ದಿನ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನಡೆಯುತ್ತಿದ್ದು ಮೇಳದಲ್ಲಿ ವಿಶ್ವದ 200ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು  ಭಾಗವಹಿಸಿ, ವಿಶ್ವವಿದ್ಯಾನಿಯಲಯದ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿ ಆಯಾ ವಿಶ್ವಾವಿದ್ಯಾನಿಲಯಗಳ ಬಗ್ಗೆ ಮತ್ತು ಅವರು ಅಧ್ಯಯನ ಮಾಡಲು ಬಯಸುವ ಕೋರ್ಸ್ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.

ಭೋಧನಾ ಶುಲ್ಕದ ಮೇಲೆ ಸಂಸ್ಥೆಗಳು ವಿವಿಧ ವಿದ್ಯಾರ್ಥಿ ವೇತನ, ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದರ ಜೊತೆ ವಿಧ್ಯಾರ್ಥಿವೇತನವನ್ನು ಪಡೆಯಬಹುದು,  ಆನ್‍ಸ್ಪಾಟ್ ಪ್ರೊಫೈಲ್ ಮೌಲ್ಯಮಾಪನಕ್ಕಾಗಿ ವಿದ್ಯಾರ್ಥಿಗಳು ತಮ್ಮ ಶೈಕ್ಷಾಣಿಕ ಹಾಗೂ ವೃತ್ತಿಪರ (ಕೆಲಸದ ಅನುಭವ ಪತ್ರ) ದಾಖಲೆಗಳನ್ನು ತರುವುದು,  ಮೇಳದ ದಿನ ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಶುಲ್ಕದಲ್ಲಿ ರಿಯಾಯಿತಿ ಪಡೆಯಬಹುದು ಎಂದು ಎಇಸಿಸಿ ಗ್ಲೋಬಲ್ ಸಂಸ್ಥೆಯ ಕರ್ನಾಟಕ-ಕೇರಳ ರಾಜ್ಯ ಮುಖ್ಯಸ್ಥರಾದ ಜೋಯಲ್ ನೊರೋನ ಅವರು ತಿಳಿಸಿದ್ದಾರೆ.


ಎಇಸಿಸಿ ಗ್ಲೋಬಲ್ ಅಹಮದಬಾದ್, ಬೆಂಗಳೂರು, ಚಂಡಿಘಡ, ಚೆನೈ, ಗುರುಗ್ರಾಮ, ಹೈದರಾಬಾದ್, ಜಲಂಧರ್, ಕೊಚ್ಚಿ, ಲೂಧಿಯಾನ, ನವದೆಹಲಿ, ಸೂರತ್, ವಡ್ಡೋದರ, ವಿಜಯವಾಡ ಮತ್ತು ವಿಶಾಖ ಪಟ್ಟಣಂ ನಗರಗಳಲ್ಲಿನ ವಿದ್ಯಾರ್ಥಿಗಳು ಕೂಡ ಈ ಮೇಳಕ್ಕೆ ಆನ್‍ಲೈನ್ ಮೂಲಕ ಲಾಗಿನ್ ಮಾಡಿ ಮೇಳದಲ್ಲಿ ಭಾಗವಹಿಸುವ ಮೂಲಕ ಮತ್ತಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಈ ಮೇಳದಲ್ಲಿ ಆಸ್ಟ್ರೇಲಿಯ, ಯುನೈಟೆಡ್ ಕಿಂಗ್‍ಡಮ್, ಯುಎಸ್‍ಎ, ಮತ್ತು ಕೆನಡಾದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಪ್ರತಿನಿಧಿಗಳು ವಿವಿಧ ಡೊಮೈನ್‍ಗಳಲ್ಲಿ ವ್ಯಾಪಕ ಶ್ರೇಣಿಯ ನವನವೀನ ಹಾಗೂ ಉತ್ತಮ ಸಂಶೋಧನೆಯ ಪದವಿ, ಸ್ನಾತಕೋತ್ತರ, ಹಾಗೂ ಉನ್ನತ ಪದವಿ, ಕೋರ್ಸ್‍ಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಹೇಳಿದ್ದಾರೆ.  

ಎಇಸಿಸಿ ಗ್ಲೋಬಲ್ ಸೇವೆಗಳು

ಎಇಸಿಸಿ ಗ್ಲೋಬಲ್ ಸಂಸ್ಥೆ ಯಿಂದ ಅನುಭವಿ ಸಲಹೆಗಾರರಿಂದ ಸಮಗ್ರ ಚೌಕಟ್ಟಿನಲ್ಲಿ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆಳವಾದ ಹಾಗೂ ಸೂಕ್ತ ಸಮಾಲೋಚನೆ ನಡೆಸುವುದು, ವಿದ್ಯಾರ್ಥಿಗಳ ಶೈಕ್ಷಣಿಕ ಕೋರ್ಸ್‍ಗಳ ಆಯ್ಕೆಗೆ ಸಂಬಂಧಿಸಿದ ವೃತ್ತಿ ಮಾರ್ಗವನ್ನು ಆಯ್ಕೆಮಾಡಿಕೊಳ್ಳುವುದು,  ಮಾರ್ಗದರ್ಶನ ಕೊಡುವುದು, ವಿಶ್ವವಿದ್ಯಾಲಯ ಕೋರ್ಸ್‍ಗಳ ಆಯ್ಕೆ, ವಸತಿ, ಪ್ರಯಾಣ, ಹಣಕಾಸು, ವಿದೇಶಿ ವಿನಿಮಯ ಮತ್ತು ವೀಸಾ ಕುರಿತಂತೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.    

ಉದ್ಯಮದ ಅನುಭವಿಗಳು 2008ರಲ್ಲಿ ಸ್ಥಾಪಿಸಿದ ಎಇಸಿಸಿ ಗ್ಲೋಬಲ್ ಸಂಸ್ಥೆಗಳು ಎಜುಕೇಷನ್ ಕನ್ಸಲ್ಟೆನ್ಸಿಗಳಾಗಿದ್ದು, ಅಂತರಾಷ್ಟ್ರಿಯ ಮಟ್ಟದಲ್ಲಿ ತನ್ನದೆ ಆದ  ವ್ಯಾಪ್ತಿಯನ್ನು ವಿಸ್ತರಿಸಿದೆ.   ಪ್ರಸ್ತುತ 12 ದೇಶಗಳು ಮತ್ತು 35 ನಗರಗಳಲ್ಲಿ ವ್ಯಾಪಿಸಿರುವ ಜಾಗತಿಕ ಹೆಗ್ಗುರತನ್ನು ಹೊಂದಿರುವ ನಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಅರ್ಹತೆಗಳು ಮತ್ತು ಸಾಮಥ್ರ್ಯದ ಆಧಾರದ ಮೇಲೆ ಮಾರ್ಗದರ್ಶನ ನೀಡಲು ಪಕ್ಷಪಾತವಿಲ್ಲದ ಮತ್ತು ನೈತಿಕ ಸಮಾಲೋಚನೆ ನೀಡುವಲ್ಲಿ ಹೆಮ್ಮೆಪಡುತ್ತದೆ ಎಂದು ತಿಳಿಸಿದ್ದಾರೆ.  

ಎಇಸಿಸಿ ಗ್ಲೋಬಲ್ ಮೆಲ್ಬೋರ್ನ್ ನಗರದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು,  21 ವಿವಿಧ ಭಾಷೆಗಳನ್ನು ಮಾತನಾಡುವ 300ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿದೆ, ಹಾಗೂ 40ಕ್ಕೂ ಹೆಚ್ಚು ವಿವಿಧ ರಾಷ್ಟ್ರೀಯತೆಯ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಿದೆ. ವಿಶ್ವದಾದ್ಯಂತ 700ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಹಾಗೂ ಸಂಸ್ಥೆಗಳೊಂದಿಗೆ ಪಾಲುಗಾರಿಕೆ ಹೊಂದಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags

Post a Comment

0Comments

Post a Comment (0)