SRI VIJAYADASARU : ಶ್ರೀ ವಿಜಯದಾಸರು

varthajala
0

ಶ್ರೀ ವಿಜಯದಾಸರು ಜನಿಸಿದ್ದು, ರಾಯಚೂರು ಜಿಲ್ಲೆ ಮಾನ್ವಿ ಎಂಬ ತಾಲ್ಲೂಕಿಗೆ ಸೇರಿದ ``ಚೀಕಲ ಪರಿವಿ” ಎಂಬ ಹಳ್ಳಿಯಲ್ಲಿ (ಶಾ.ಶ. 1604 ಅಂದರೆ, ಕ್ರಿ.ಶ. 1682) ದಾಸರ ತಂದೆ ತಾಯಿ, ಶ್ರೀನಿವಾಸಪ್ಪ-ಕೂಸಮ್ಮ. ಬ್ರಾಹ್ಮಣ ಮನೆತನ, ಮಾಧ್ವ ಸಂಪ್ರದಾಯಕ್ಕೆ ಸೇರಿದ ಕುಟುಂಬ ಬಡತನವೇ ಕುಟುಂಬದ ದೊಡ್ಡ ಆಸ್ತಿ. ಆದರೆ ಹರಿಭಕ್ತಿಗೆ ಇವರಲ್ಲಿ ಸುತಾರಾಂ ಬಡತನವಿರಲಿಲ್ಲ. ಬಹುಕಾಲ ಮಕ್ಕಳಿರದ ಕಾರಣ, ದಂಪತಿಗಳು, ``ತುಂಗಭದ್ರಾ” ತಡಿಯ ``ಅಶ್ವತ್ಥ ನಾರಸಿಂಹ”ನ ಸೇವೆಯನ್ನು ತುಂಬು ಭಕ್ತಿಯಿಂದ ಗೈದರು. ಶ್ರೀ ನರಸಿಂಹನ ವರಪ್ರಸಾದವೆಂಬAತೆ, ಕ್ರಿ.ಶ. 1682ರಲ್ಲಿ ಒಬ್ಬ ಮಗನನ್ನು ಪಡೆದರು. ಆತ ``ಹರಿಭಕ್ತ” ನಾಗವೆಂದಾಶಿಸಿ ಅವನಿಗೆ ``ದಾಸಪ್ಪ” ನೆಂದು ಹೆಸರಿಸಿದರು. ಈ ದಾಸಪ್ಪನೇ ಅನಂತರ ವಿಜಯದಾಸರೆಂದು ಖ್ಯಾತರಾದದ್ದು. ಶ್ರೀನಿವಾಸಪ್ಪನಿಗೆ ಅನಂತರ ಇನ್ನೂ ಇಬ್ಬರು ಗಂಡುಮಕ್ಕಳಾದರು.



ಕುಟುAಬದ ಪ್ರತಿ ನಿತ್ಯದ ಬಡತನದ ಬವಣೆ-ನೊಂದು ಬೇಯುತ್ತಿದ್ದ ದಾಸಪ್ಪನನ್ನು ಊರವರು ತಿರಸ್ಕಾರದಿಂದಲೇ ಕಾಣುತ್ತಿದ್ದರು. ``ಕೂಸೀಮಗ ದಾಸ” ನೆಂದು ಲೇವಡಿ ಮಾಡುತ್ತಿದ್ದುದೂ ಉಂಟು. ``ಸಂಜೆ ತನಕವಿದ್ದು ಸಣ್ಣ ಸೌಟಿನ ತುಂಬ ಗಂಜಿ ಕಾಣದೆ ಬಳಲಿದೆನೊ” ಎಂದು ವಿಜಯದಾಸರು ತಮ್ಮ ಕೀರ್ತನೆಯೊಂದರಲ್ಲಿ ತುಂಬ ಮಾರ್ಮಿಕವಾಗಿ ತಮ್ಮ ಬದುಕನ್ನು ಚಿತ್ರಿಸಿದ್ದಾರೆ. ಸಂಸಾರದಲ್ಲಿ ನಿರ್ವಹಿಸಿ, ಸರಿದೂಗಿಸಲು ಹೆಣಗಿದ ದಾಸಪ್ಪ, ತುಂಬ ಬೇಸರದಿಂದ, ತನ್ನ ತಂದೆ-ತಾಯಿಯನ್ನು ತೊರೆದು, ಯಾರಿಗೂ ಹೇಳದೆ ಕೇಳದೆ ಹೊರಟುಬಿಟ್ಟ. ಆಗ ದಾಸಪ್ಪನಿಗೆ ಕೇವಲ ಹದಿನಾರರ ಪ್ರಾಯವಷ್ಟೆ. ತೀರ್ಥಯಾತ್ರೆ ರ‍್ಯಟನ ನಡೆಸಿದ ದಾಸಪ್ಪನಿಗೆ ಗ್ರಹಚಾರ ಬಿಡಲಿಲ್ಲ. ಅವರಲ್ಲಿದ್ದ ತುಂಡು ಬಟ್ಟೆಗಳನ್ನು ಕಳ್ಳರು ಕೊಳ್ಳೆ ಹೊಡೆದರು. ``ಕೃಷ್ಣಾರ್ಪಣ”ವೆಂದ ದಾಸಪ್ಪ ನಡೆ ನಡೆದು, ``ಕಾಶಿಬಿಟ್ಟು ಸೇತುರಾಮೇಶನ್ನ ಹುಡುಕುತ...... ತಿರುತಿರುಗಿ ಚೀಕಲಾಪರಿಗೇ ಮರಳಿದನು”. ಮನೆಗೆ ಬಂದ ಮಗನನ್ನು ಕಂಡು ಸಂತೋಷಗೊAಡ ತಾಯಿ ತಂದೆ ಸಂಸಾರದ ಹೊಣೆಯ ನೊಗವನ್ನು ಹೆಗಲಿಗ್ಹೊರೆಸಿದರಷ್ಟೇ, ದಾಸರ ಮಡದಿಯ ಹೆಸರು ಅರಳಮ್ಮ. ಹಣಕಾಸಿನ ಮುಗ್ಗಟ್ಟು, ಬಡತನ, ಮಾನಸಿಕ ಅಶಾಂತಿ...... ವಿರಕ್ತ ಚಿತ್ತನಾಗಿದ್ದ ದಾಸಪ್ಪನಿಗೆ ಮತ್ತೆ ಕಾಶಿ ಕಡೆಗೇ ಗಮನ ಹರಿಯಿತು. ಆತ ಮನೆ ತೊರೆದು ನಡೆದ, ಕಾಶಿಗಭಿಮುಖ ಆಗಿ! ಕ್ಷೇತ್ರದರ್ಶನ, ಪವಿತ್ರ ಗಂಗಾ ಸ್ನಾನ, ಶ್ರೀ ವಿಶ್ವನಾಥನ ಪೂಜೆ, ಧ್ಯಾನ, ದಾಸಪ್ಪನ ಮನ-ತನು ಪೂತ ಆಗಿಸಿದಂತೆ, ಶ್ರೀ ವಿಶ್ವೇಶ್ವರನಾತನಿಗೆ ಒಂದು ತೆರನಾದ ಮಾನಸಿಕ ನೆಮ್ಮದಿ, ಶಾಂತಿ ನೀಡಿದಂತೆನ್ನಿಸಿತು. ದಿನ ಸರಿದವು. ಕಾಶಿಯಲ್ಲಿ ಸೇವಾನಿರತನಾಗಿದ್ದ ದಾಸಪ್ಪನಿಗೊಂದಿರುಳು ಮಹತ್ವದ ಕನಸಾಯಿತು! ಶ್ರೀ ಪುರಂದರದಾಸರು, ತನ್ನನ್ನು ನಿದ್ರೆಯಿಂದೆಚ್ಚರಿಸಿ, ಗಂಗಾ ಸಲಿಲ ದಾಟಿಸಿ, ವ್ಯಾಸ ಕಾಶಿಗೆ ಕರೆದೊಯ್ದಂತೆ.... ಅಲ್ಲಿ ಭಗವಾನ್ ವೇದವ್ಯಾಸರ ದಿವ್ಯ ದರ್ಶನವಾದಂತೆ! ಹಾಗೆಯೇ ದಾಸಪ್ಪನಿಗೆ ಮಧ್ವ ಸಂಪ್ರದಾಯ, ಶಾಸ್ತç-ತತ್ವೋಪದೇಶ ಕೂಡ ನಡೆಯಿತು! ಶ್ರೀ ಪುರಂದರದಾಸರು, ಪ್ರೀತಿಯಿಂದ, ದಾಸಪ್ಪನಿಗೆ ``ವಿಜಯವಿಠಲ” ಎಂಬ ಅಂಕಿತ ನೀಡಿ ಹರಿದಾಸನಾಗೆಂದು ಹರಸಿದರು!

ಕನಸು ತಿಳಿದು, ದಾಸಪ್ಪ ವಿಮುಖ ಆಗುವ ವೇಳೆಗೆ ಮುಂಜಾವಿನ ಮುಂಬೆಳಗು ಮೂಡಿ, ಶ್ರೀ ಕಾಶಿವಿಶ್ವನಾಥನ ದೇವಾಲಯದ ಘಂಟಾನಾದ, ಅಲೆಯಲೆಯಾಗಿ ಕೇಳಿ ಬಂದಿತು. ತನ್ನ ಗುರುವಿಂದಲೇ ಪ್ರಶಂಸಿತರಾದAಥ ಶ್ರೀಪುರಂದರದಾಸರು ತನಗೆ ನೀಡಿದ ಅಂಕಿತ-ಹರಿದಾಸ ದೀಕ್ಷೆ, ತತ್ವ-ಮಂತ್ರೋಪದೇಶ, ಗುರುಸ್ವರೂಪಿ ವೇದವ್ಯಾಸರ ದಿವ್ಯ ಸಾನ್ನಿಧ್ಯ, ಅವರು ನೀಡಿದ ಮಧ್ವಶಾಸ್ತçದುಪದೇಶ, ಮತ್ತೆ ಮತ್ತೆ ಮನನಗೈದ ದಾಸಪ್ಪ, ಕನ್ನಡ ನುಡಿಯಲ್ಲಿ ಶ್ರೀಹರಿಗುಣನಾಮ ಸಂಕೀರ್ತನೆ, ಮಧ್ವಮತ ಪ್ರಸಾರ, ವೈಷ್ಣವ ಧರ್ಮ-ಹರಿಭಕ್ತಿ ಪ್ರಸರಿಸಲು ಆದೇಶ ನೀಡಿದ್ದಾರೆ ಗುರುದ್ವಯರು! ಶಾಸ್ತç ಜ್ಞಾನ, ಕವಿತಾಶಕ್ತಿ, ಶ್ರೀಹರಿಯಲ್ಲಿ ದೃಢಭಕ್ತಿ ಗುರುಕೃಪೆಯಿಂದ ಒಡಮೂಡಿಬಂದು ಮೈಯಾಂತAತೆ ದಾಸಪ್ಪ ಅನುಭವಿಸಿದ.

ಪುರಂದರದಾಸರು, ``ವಿಜಯವಿಠಲ” ಅಂಕಿತವನ್ನು ಅನುಗ್ರಹಿಸಿದಂದಿನಿAದಲೇ ದಾಸಪ್ಪ ``ವಿಜಯದಾಸ” ರಾದದ್ದು ಎನ್ನಬೇಕು ಹಾಗೂ ``ವಿಜಯವಿಠಲ” ಅಂಕಿತದಲ್ಲಿ ಕೀರ್ತನೆ, ಸುಳಾದಿಗಳನ್ನು ರಚಿಸಲಾರಂಭಿಸಿದ್ದು, ಈ ಒಂದು ಅಲೌಕಿಕ ಘಟನೆ, ಅನುಭವ ಹಾಗೂ ಅನಂತರದ ಕೃತಿಗಳಿಂದ ನಮಗೆ ತಿಳಿಯಬರುವುದಿಷ್ಟು; ವಿಜಯದಾಸರಿಗೆ, ಚಿಕ್ಕಂದಿನಲ್ಲೂ ಸಾಕಷ್ಟು ವಿದ್ಯೆ, ಸಂಪ್ರದಾಯ, ಶಾಸ್ತç ಪರಿಚಯ ಇದ್ದವು. ಆದರೆ ಆ ತಿಳಿವು, ಅರಿವಿನ ಸೆಲೆ, ಅನುಭವೈಕ ಆದದ್ದು. ಭಕ್ತಿ-ಗುರುಕೃಪೆಯಿಂದ ಅವರ ಚೇತನ, ಪರಿಶುದ್ಧ ಆಯಿತು. ಇದೇ ಸತ್ವಶುದ್ಧಿ - ಜ್ಞಾನಕ್ಕೆ ಇಂಬಾಯಿತು. ಇದೆಲ್ಲದರಿಂದ, ವಿಜಯದಾಸರ ಕೃತಿಗಳಲ್ಲಿ ಸತ್ವ, ಸ್ವತ್ವ, ಅಪರ‍್ವ ಆದ ಒಂದು ತೇಜಸ್ಸು, ಸ್ವಾರಸ್ಯಕರ ಸರಳತೆ, ಅಷ್ಟೇ ಗಹನವೆನಿಸುವ ಶಾಸ್ತç ಜ್ಞಾನ - ನಿಷ್ಠೆ ಕಾಣಬರುತ್ತವೆ. ಇನ್ನೂ ಮುಂದುವರೆದAತೆ, ಪುರಂದರರ‍್ಯರ ಬದುಕಿನ ಅವಧಿಯಲ್ಲಿ ಸಂಘಟಿತ ಆಗಿದ್ದ ದಾಸಕೂಟ - ಹರಿದಾಸ ಸಾಹಿತ್ಯ ಎರಡನ್ನೂ ಪುನರುಜ್ಜೀವನಗೊಳಿಸಲು ವಿಜಯದಾಸರು ಕಂಕಣಬದ್ಧರಾದರು. ಇದರ ಜತೆಗೇ, ಪುರಂದರದಾಸರು ರಚಿಸಿದ 475000 ಕೃತಿಗಳ ಜತೆ ಉಳಿದಿದ್ದ 25000 (ಪಾದ ಲಕ್ಷ) ಕೃತಿಗಳನ್ನು ಪೂರ್ಣಗೊಳಿಸುವ ದಿವ್ಯಕರ‍್ಯದಲ್ಲಿ ಸನ್ನದ್ಧರಾದರೆಂದೂ ಹಿರಿಯರ ಅಭಿಮತವಿದೆ. (ಆದರೆ ವಿಜಯದಾಸರ ಕೃತಿಗಳು ಅಷ್ಟು ಪ್ರಮಾಣದಲ್ಲಿ ದೊರೆತಿಲ್ಲ). ಈ ದೃಷ್ಟಿಯಿಂದಲೂ, ವಿಜಯದಾಸರು ತುಂಬ ಹಿರಿಯರಾಗುತ್ತಾರೆ.

ಕಾಶಿಯಿಂದ ಹುಟ್ಟಿದೂರಿಗೆ ಹಿಂತಿರುಗಿದ ನಂತರ ವಿಜಯದಾಸರು, ಶ್ರೀಹರಿನಾಮ ಸಂಕೀರ್ತನೆಗಾರAಭಿಸಿದರು. ಶಾರದೆ, ವಾಗ್ದೇವಿಯಾಗಿ ಅವರ ನಾಲಗೆಯಲ್ಲಿ ಪ್ರಣವದ ಬೀಜಾಕ್ಷರವನ್ನು ಬರೆದು ಹರಸಿದಳೆಂಬAತೆ, ಕವಿತಾಶಕ್ತಿ-ಕವಿತೆಯ ಸೆಲೆ, ವಾಕ್ ಪ್ರೌಢಿಮೆ, ಮಧ್ವಶಾಸ್ತçವಿಚಾರ, ಶ್ರೀರಾಮಾಯಣ ಭಾಗವತಾದಿಗ್ರಂಥಸಾರ, ವೈಷ್ಣವಧರ್ಮಸಾರ, ಎಲ್ಲವೆಲ್ಲವೂ ಶ್ರೀಹರಿಗುರು ಕೃಪೆಯಿಂದ, ``ವಿಜಯವಿಠಲ”ರ ಮೂಲಕ ಕೀರ್ತನೆಗಳ ರೂಪದಲ್ಲಿ ಹೊರಹೊಮ್ಮಲಾರಂಭಿಸಿದವು. ಇಷ್ಟಾದರೂ ವಿಜಯದಾಸರಿಗೆ ಬಡತನದ ಬೇಗೆ ಕಡಿಮೆಯಾಗಲಿಲ್ಲ. ಆರ್ತರಾಗಿ, ಭಕ್ತರಾಗಿ, ``ನೊಂದು ಸಂಸಾರದೊಳು ವಂದಿಸಿದೆನೊ|  ಇಂದು ಬಿಂದು ಮಾಧವಾ” ಎಂದು ಅನನ್ಯ ಶರಣರಾಗಿ ಶ್ರೀ ಹರಿಯನ್ನು ಮೊರೆಯಿಟ್ಟರು. ಬಡತನದಲ್ಲಿ ನೋಯುವವರನ್ನು ಕುರಿತೇ ದಾಸರು, ದೇವರು ಹೀಗೇಕೆ ಹುಟ್ಟಿಸಿದನೆಂದು ಮರುಗುವುದಿದೆ:

1. ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ

ಲೋಕದೊಳಗನುಗಾಲ ತಿರಿದು ತಿಂಬುವAತೆ ಮಾಡಿ

ಒಡಲಿಗಾಗಿ ಒಬ್ಬನ ಸಂಗಾತ ಹೋಗಲು

ಕೊಡುವವನು ಇಲ್ಲೆಂದು ಪರಿಹರಿಸುತ

ಸುಡು ಈ ಶರೀರವ ಬಳಲಲಾರೆನೊ ವಿಷದ

ಮಡುವನಾದರು ಧುಮುಕಿ ಮರಣನಾಗುವೆ ರಂಗ ||


2. ಕೊಡುವವನು ನೀನು ಕೊಂಬುವವನು ನಾನು

ಬಡಮನದ ಮನುಜರನ ಬೇಡಿದರೇನುಂಟು ||ಪ||

ಹದಿನಾರು ಪಲ್ಗಳ ಕೆರೆದು ಆಲ್ಪರಿದರೆ

ಇದು ಸಮಯವಲ್ಲೆಂದು ಪೇಳುವನೊ

ಮದನಕೇಳಿಗೆ ನೂರು ಒಂದು ಮಾಡಿ ನೋಡುವನು

ಮದಡ ಮನುಜ ಎನಗೆ ಏನು ಕೊಡುವನೊ ಹರಿಯೆ ||1||


ಈ ಸಾಲುಗಳು, ಅದರಲ್ಲಿಯೂ ಕೊನೆಯ ಎರಡು ಪಂಕ್ತಿ, ಅಂದು ಇದ್ದ ಮನಸ್ಸಿನ ಬಡತನ, ಅಲ್ಪತೆ, ಲೋಲುಪತೆ, ಜತೆಗೆ ದಾಸರು ಪಟ್ಟ ಬವಣೆಯನ್ನು ಚಿತ್ರಿಸುತ್ತವೆ.

ಕ್ರಮೇಣ ಜನತೆಗೆ, ವಿಜಯದಾಸರಲ್ಲಿ ಆದರಾಭಿಮಾನ ಹೆಚ್ಚಿದಂತೆಲ್ಲ, ದಾಸರ ಬಡತನವೂ ದೂರಾಗಿರಬೇಕು. ಅದಕ್ಕೆ ಇಂಬುಗೊಡುವAತೆ ದಾಸರ ಅಲೌಕಿಕ ವ್ಯಕ್ತಿತ್ವ, ವಾಕ್ ಶುದ್ಧಿಯೂ ಕಾರಣವಿದ್ದೀತು-ಹರಿದಾಸ ದೀಕ್ಷೆಯೊದಗಿಸಿದ ಕೀರ್ತನ ಸಂಪದ, ಜನಮನ್ನಣೆಯೊಂದಿಗೆ ಐಸಿರಿಯನ್ನೂ ಒದಗಿಸಿದ್ದೀತು. ವಿಜಯದಾಸರು ತಮಗೆ ದೊರಕಿಬಂದ ನೆಮ್ಮದಿಯ ಸ್ಥಿತಿ ಕುರಿತಂತೆ ಹಾಡಿರುವುದು ಸುವಿದಿತ. ಇಲ್ಲಿ ಅವರ ``ಭಕ್ತಸ್ಥಿತಿ” ಹಾಗೂ ಮನದ ವಿನಯ ಕೂಡ ಸ್ಪಷ್ಟ ಆಗುತ್ತವೆ:


ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು

ಮನ್ನಿಸುವರೋ ಮಹರಾಯ

ಎನ್ನ ಪುಣ್ಯಗಳಿಂದ ಈ ಪರಿಯುಂಟೇನೊ

ನಿನ್ನದೆ ಸಕಲ ಸಂಪತ್ತು


ಒಬ್ಬ ಹೆಂಗಸಿಗೆ ಹಾಕುವುದಕಿನ್ನು

ತಬ್ಬಿಬ್ಬುಗೊಂಡೆನೊ ಹಿಂದೆ

ನಿಬ್ಬರದಿAದಲಿ ಸರ್ವರ ಕೂಡುಂಬೊ

ಹಬ್ಬವನುಣಿಸುವಿ ಹರಿಯೆ ||1||

ಸಂಜೆತನಕವಿದ್ದು ಸಣ್ಣ ಸವುಟಿನ ತುಂಬ

ಗAಜಿ ಕಾಣದೆ ಬಳಲಿದೆನೊ

ವ್ಯಂಜನ ಮೊದಲಾದ ನಾನಾ ರಸಂಗಳ

ಭುAಜಿಸುವುದು ಮತ್ತೇನೋ ||2||


ಜೀರ್ಣ ಮಲಿನವಸ್ತç ಕಾಣದ ನರನಿಗೆ

ಊರ್ಣ ವಿಚಿತ್ರ ಸುವಸನ

ವರ್ಣವರ್ಣದಿಂದ ಬಾಹೊದದೇನೊ ಸಂ

ಪೂರ್ಣ ಗುಣಾರ್ಣವ ದೇವ ||3||


ನೀಚೋಚ್ಚ ತಿಳಿಯದೆ ಸರ್ವರ ಚರಣಕ್ಕೆ

ಚಾಚಿದೆ ನೊಸಲ ಹಸ್ತಗಳ

ಯೋಚಿಸಿ ನೋಡಲು ಸೋಜಿಗವಾಗಿದೆ

ವಾಚಕ್ಕೆ ನಿಲುಕದು ಹರಿಯೆ ||4||


ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ

ಮೆದ್ದೆನೆಂದರೆ ಈಯೆಗಾಣೆ

ಈ ಧರೆಯೊಳಗೆ ಸತ್ಪಾತ್ರರ ಕೂಡುಂಬೊ

ಪದ್ಧತಿ ನೋಡೊ ಪುಣ್ಯಾತ್ಮ ||5||


ಮನೆಮನೆ ತಿರಿದರು ಕಾಸು ಪುಟ್ಟದೆ ಸು

ಮ್ಮನೆ ಕಾಲ್ವರಿದು ಬಳಲಿದೆನೊ

ಹಣ ಹೊನ್ನು ದ್ರವ್ಯಂಗಳಿದ್ದಲ್ಲಿಗೆ ತನಗೆ

ತಾನೆ ಪ್ರಾಪ್ತಿ ನೋಡೊ ಜೀಯಾ ||6||


ವೈದಿಕ ಪದವಿಯ ನೀವಗೆ ಲೌಕಿಕ

ಐದಿಸುವುದು ಬಹು ಖ್ಯಾತೆ

ಮೈದುನಗೊಲಿದ ಶ್ರೀ ವಿಜಯವಿಠ್ಠಲ ನಿನ್ನ

ಪಾದಸಾಕ್ಷಿಯನುಭವವೊ ||7||


ಎಂದು ದಾಸರು ಮನಮುಟ್ಟಿ ಹಾಡುತ್ತ, ತಮ್ಮ ಉಪಾಸ್ಯ ದೈವವನ್ನು ಹಾಡಿ, ಹರಸುವುದೂ ಕಾಣುತ್ತೇವೆ. ಮನೆಯಲ್ಲಿ ಅನುಕೂಲತೆಯೊದಗಿದಂತೆ, ದಾಸರ ಶಿಷ್ಯ ಸಂಪತ್ತೂ ಹೆಚ್ಚಿತು. ಮಧ್ವಶಾಸ್ತçದಲ್ಲಿ ವಿಜಯದಾಸರಿಗಿದ್ದ ಏಕಮೇವ ನಿಷ್ಠೆ, ಖಚಿತ ಶಾಸ್ತçಜ್ಞಾನ, ಪಾಂಡಿತ್ಯ, ಗಹನತೆ - ಎಲ್ಲವನ್ನೂ ಅವರ ಅನೇಕ ಸುಳಾದಿಗಳಲ್ಲಿ ಮಡುಗಟ್ಟಿರುವುದು ಕಾಣಬರುವ ಪ್ರಮುಖ ಗುಣ.  ಇಷ್ಟಂತೂ ದಿಟ: ಸಂಸ್ಕೃತದಲ್ಲಿ ಅಡಕವಾಗಿದ್ದ, ಗಹನವಾದ ದ್ವೆöÊತಸಿದ್ಧಾಂತ, ಶ್ರೀರಾಮಾಯಣ-ಭಾರತ ಭಾಗವತ ಗೀತೆ-ಉಪನಿಷತ್ತುಗಳ ಸಾರಸರ್ವಸ್ವವನ್ನು ಸಾಮಾನ್ಯರಿಗಾಗಿ ತಿಳಿಗನ್ನಡದಲ್ಲಿ ಕನ್ನಡ ನುಡಿಗಟ್ಟಿನಲ್ಲಿ ಕೀರ್ತನೆಗಳ ಮೂಲಕ ಹಾಡಿರುವ ಶ್ರೀ ವಿಜಯದಾಸರು, ಖಿಲ ಆಗುತ್ತಿದ್ದ ದಾಸಸಾಹಿತ್ಯವನ್ನು ಪುನಃ ಉದ್ದೀಪಿಸಿದ್ದೂ (ಏiಟಿಜಟeಜ) ಅಲ್ಲದೆ, ದಾಸರ ಬಣ ದಾಸಕೂಟವನ್ನೂ ಸಂಘಟಿಸಿದರು. ಪಂಡಿತರಿಗೆ ಹಿರಿಯರಾದಂತೆ, ಶಾಸ್ತೊçಪದೇಶ ಪ್ರವರ್ತಕರೂ ಆದರು. ವಿಜಯದಾಸರು ಇಂತು ಸಂಘಟಿಸಿ ಮುಂದೆ ಪ್ರಖ್ಯಾತರಾದವರಲ್ಲಿ ಸುಮಾರು ಜನ ಹರಿದಾಸರು ಪ್ರಮುಖರಾಗಿ ಕಾಣಬರುತ್ತಾರೆ. ಗೋಪಾಲದಾಸರು (ಗೋಪಾಲ ವಿಠಲ), ಆನಂದದಾಸ (ಹಯವದನ ವಿಠಲ), ಕೊಂಡಲಿ ಮಧ್ವಾಚಾರ್ಯ (ಗುರುಮಧ್ವೇಶ ವಿಠಲ), ಮೋಹನದಾಸರು (ಮೋಹನ ವಿಠಲ), ಆದವಾನಿಯ ತಿಮ್ಮಣ್ಣದಾಸರು (ವೇಣುಗೋಪಾಲ ವಿಠಲ), ಶೇಷಗಿರಿದಾಸ (ಹಯಗ್ರೀವ ವಿಠಲ), ವೆಂಕಟೇಶ ವಿಠಲರು, ಮಾನಪ್ಪದಾಸ (ಮುದ್ದು ವಿಠಲ) ರಾಮದಾಸ (ರಾಮಚಂದ್ರವಿಠಲ), ವೆಂಕಟ್ರಾಮಾಚಾರ್ಯ (ವಾಸುದೇವವಿಠಲ) (ವ್ಯಾಸತತ್ವಜ್ಞರು) ಗೋಪಾಲದಾಸರ ತಮ್ಮಂದಿರಾದ ಗುರುಗೋಪಾಲ ವಿಠಲ, ವರದಗೋಪಾಲವಿಠಲ ಹಾಗೂ ತಂದೆ ಗೋಪಾಲವಿಠಲರು, ಐಜಿಸ್ವಾಮಿಗಳು, ರಂಗಪ್ಪದಾಸರು, ದಾಸಪ್ಪದಾಸರು, ಸೀನಪ್ಪದಾಸರು, ಕಲ್ಲೂರು ಸುಬ್ಬಣ್ಣಾಚರ‍್ಯರು (ವ್ಯಾಸವಿಠಲರು), ಮೊದಲಕಲ್ ಶೇಷದಾಸರು, ಜಗನ್ನಾಥದಾಸರು (ಜಗನ್ನಾಥವಿಠಲ) ಹಾಗೂ ಅವರ ಶಿಷ್ಯ ಪ್ರಶಿಷ್ಯರು ಹೆಳವನಕಟ್ಟೆ ಗಿರಿಯಮ್ಮನೆಂಬಾಕೆ, ಹೀಗೆ. ಇದರಿಂದ, ವಿಜಯದಾಸರು ತಮ್ಮ ಶ್ರೀ ಹರಿಭಕ್ತಿಯ ಘನವಂತಿಕೆಯಿAದ, ಪಂಡಿತ ಪಾಮರರೆಲ್ಲರನ್ನೂ ತಮ್ಮತ್ತ ಸೆಳೆದುಕೊಂಡರೆನ್ನುವುದು ಸೂಕ್ತ.

ವಿಜಯದಾಸರು, ಕಾಶಿಯಾತ್ರೆಯನ್ನಂತೂ ಅನೇಕಾವರ್ತಿ ಗೈದರೆಂದು, ಅವರ ಶಿಷ್ಯರ ಕೀರ್ತನೆಗಳ ಮೂಲಕ ತಿಳಿಯಬರುತ್ತದೆ. ಅಂತೆಯೇ ಮುಂದೊಮ್ಮೆ ಅವರ ಬದುಕಿನಲ್ಲಿ ಜರುಗಿದ ಒಂದು ಪ್ರಸಂಗದಲ್ಲಿ ಅವರು, ``ಕಾಶೀಕ್ಷೇತ್ರ ಯಾತ್ರೆಯ ಫಲಧಾರೆಯೆರೆದು  ಕೊಡಬಹುದು, ಆದರೆ ಕತ್ತೆಗೆ ನೀರು ಕುಡಿಸಿದುದರ ಫಲ ಕಾಶೀಯಾತ್ರೆಯದಕ್ಕೂ ಮಿಗಿಲೆಂದು ಪ್ರಿಯ ಶಿಷ್ಯ ಗೋಪಾಲದಾಸರಿಗೆ ತಿಳಿಸಿದಂತೆ. ಮೂರು ಸಲ ಕಾಶೀಯಾತ್ರೆ ಗೈದ ದಾಸರು, ಅವರ ಮೂರನೆಯ ರ‍್ಯಟನ ಸಂದರ್ಭದಲ್ಲಿ, ಕೀರ್ತನ ಕೇಳಿ ಹರಸುವ ಅಭಿಲಾಷೆಯಿಂದೆAಬAತೆ, ಶ್ರೀ ವಿಷ್ಣುಪಾದೋದ್ಭನೆ ಗಂಗಾಮಾತೆ ಉಕ್ಕೇರಿ ಬಂದಳAತೆ! ಗಂಗೆಯನ್ನು ಸಂಗ್ರಹಿಸಿ, ತಾನೇ ಹೆಗಲ ಮೇಲೆ ಹೊತ್ತು ತಂದು, ``ಭಾಸ್ಕರ ಕ್ಷೇತ್ರ” ವೆನಿಸಿದ ``ಚಿಪ್ಪಗಿರಿ”ಯಲ್ಲಿ ತಾವೇ ನಿರ್ಮಿಸಿದ ನೀರಿನ ಹೊಂಡವೊAದರಲ್ಲಿ ಬೆರಸಿ, ತೀರ್ಥ ಆಗಿಸಿದರಂತೆ. ಇದೇ ತೆರನಾಗಿ, ವಿಜಯದಾಸರು ಮೂರಾವರ್ತಿ ಸೇತುಸ್ನಾನ, ಇಪ್ಪತ್ತೇಳುಸಲ ``ಭೂವೈಕುಂಠ”ವೆನಿಸಿರುವ, ಶ್ರೀ ತಿರುಪತಿಯಾತ್ರೆಯನ್ನೂ ಮಾಡಿದರು. ಅಷ್ಟೇ ಅಲ್ಲ, ಸಮಸ್ತ ಪುಣ್ಯ ತೀರ್ಥ ಕ್ಷೇತ್ರಗಳನ್ನು ಪಾದಚಾರಿಯಾಗಿ ಸಂದರ್ಶಿಸಿ, ಅದರ ಅನುಭವ ವಿಶೇಷವನ್ನು ತಮ್ಮ ``ತೀರ್ಥ ಕ್ಷೇತ್ರ ಮಹಿಮಾ ಸುಳಾದಿ” ಎಂಬ ಸುಳಾದಿಗಳಲ್ಲಿ ಬಗೆ ಬಗೆಯಾಗಿ ಹಾಡಿದ್ದಾರೆ. ಇದರ ಜತೆಗೇ ಹೆಸರಿಸಬೇಕಾದವು, ``ಸಾಧನ ಭಾಗ ಸುಳಾದಿಗಳು” ಹಾಗೂ ``ಪ್ರಮೇಯ ಭಾಗ ಸುಳಾದಿಗಳು”.

ವಿಜಯದಾಸರ ಬದುಕಿನ ಮೊದಲ ದಿನಗಳನ್ನು ಹಾಗೂ ಹರಿದಾಸರಾದ ನಂತರ ಅವರು ಕಳೆದ ದಿನಗಳನ್ನು ಕುರಿತು ಅವರ ಹಾಡಲ್ಲೇ ತಿಳಿಸಿದ್ದೇವೆ. ಅದೇ ತೆರನಾಗಿ, ``ಯದೃಚ್ಛಾಲಾಭಸಂತುಷ್ಟೋ” ಎಂಬAತೆ, ಬದುಕಿದ್ದು ಮಾತ್ರ ಅಲ್ಲ. ಬಂದ ಸಂಪತ್ತನ್ನು ಕೂಡಿಡದೆ, ದಾನಗೈದು, ದಿಟವಾಗಿ ಹರಿದಾಸ ಮನೋಧರ್ಮದಿಂದಲೇ ಬದುಕಿ ಬಾಳಿದರು. ವಿಜಯದಾಸರು ರಚಿಸಿರುವ, ``ಹರಿನಾಮ ಸುಳಾದಿ” ಹರಿದಾಸ ಲಕ್ಷಣಕ್ಕೂ ಅವರ ಪರಿಶುದ್ಧ ವ್ಯಕ್ತಿತ್ವಕ್ಕೂ ಹಿಡಿದ ಕನ್ನಡಿಯಾಗಿದೆ. ``ಹರಿನಾಮ ದಾಸ್ಯವು ಸತತದಲ್ಲಿ ಜ್ವರತಾಪ ನಿವಾರಣವೆನಿಸುವುದು, ಹರಿನಾಮ ವಿಜಯ ವಿಠ್ಠಲರೇಯ ಸಜ್ಜನರ ಮಾತು ಪುಸಿಯಾಗಗೊಡನೇ” ಎನ್ನುತ್ತಾರೆ. ``ನಾಳೆಯೆನ್ನದಿರು, ನಾಳೆಗಿರಿಸದಿರು” ಎಂಬುವುದೇ ದಾಸರ ಮಂತ್ರ. ಭಗವದ್ಭಕ್ತಿಯೊಂದೇ ದೃಢ, ನಿಶ್ಚಲ, ಸ್ಥಾಣು. ``ಹೊನ್ನು ಹಣವ ಕೊಡಲಿಬೇಡ, ಮನ್ನಣೆಯ ಮಾಡಿಸಬೇಡ, ಎನ್ನದೆಂಬೊ ಮಾತು ಎಂದೆAದಿಗೂ ಬೇಡ, ನಿನ್ನವನು ನಿನ್ನವನು ನಿನ್ನವನೆಂದಿಸಿ, ಮನ್ನಿಸಿ ಪಾಲಿಸೈಯ ವಿಜಯವಿಠ್ಠಲರೇಯ” ಎಂದು `ಭಕುತಿ ಸುಳಾದಿ’ಯಲ್ಲಿ ಮೊರೆಯಿಡುತ್ತಾರೆ ವಿಜಯದಾಸರು. ಕುಟುಂಬದ ಕಷ್ಟ-ಕಾರ್ಪಣ್ಯ, ಹರಿದಾಸ್ಯದ ಅನುಸರಣೆ, ದೇಶಸಂಚಾರ-ಲೋಕಾನುಭವ-ಲೋಕನೀತಿ-ಇವೆಲ್ಲ ಸೇರಿ ಮುಪ್ಪುರಿಗೊಂಡು ಒಡಮೂಡಿದ ಸಾಹಿತ್ಯ ರಚನೆ, ಆಳವಾದ ಚಿಂತನೆ-ಇವುಗಳಿAದ ವಿಜಯದಾಸರ ವ್ಯಕ್ತಿತ್ವ ಪುಟಕ್ಕಿಟ್ಟ ಮಿಸುನಿಯಾಯಿತಷ್ಟೇ ಅನುಭವೈಕಜ್ಞಾನ, ಅವರ ರಚನೆಗಳ ತಿರುಳು.

ವಿಜಯದಾಸರು, ಭೃಗುಮಹರ್ಷಿ ಅಂಶಸAಭೂತರೆAದೇ ಒಂದು ಐತಿಹ್ಯವಿದೆ. ಪುರಂದರದಾಸರ ಮಕ್ಕಳಲ್ಲಿ ಒಬ್ಬನಾದ ಮಧ್ಯಪತಿಯೇ ವಿಜಯದಾಸರಾಗಿ ಅವತಾರವೆತ್ತಿ ಬಂದರೆAದೂ ಪ್ರತೀತಿಯುಂಟು. ಇದನ್ನು ದಾಸರ ಕೃತಿಸಾಲೇ ಧ್ವನಿಸುವಂತಿದೆ: ``.......... ದಾಸ ಪುರಂದರನ ಪಾದವನು ಪೊಂದಿದೆನು.... ಹರಿಕೃಪೆಯಿಂದಲಿ ಇವರ ಸದನದೊಳಗೆ ತುರುಕರುವು ಆಗಿದ್ದು ಜನಿಸಿದೆನು ಸುಕೃತದಿಂದ.....”. ಈ ವಿಚಾರವನ್ನೇ ಶ್ರೀ ವೇಣುಗೋಪಾಲ ವಿಠ್ಠಲರೂ ಹಾಡಿದ್ದಾರೆ ಹಾಗೂ ಶ್ರೀ ಮೋಹನದಾಸರು ಕೂಡ ತಮ್ಮ ಕೃತಿಯೊಂದರಲ್ಲಿ ಪ್ರಸ್ತಾಪಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣ, ವಿಜಯದಾಸರ ದೃಢವಾದ ವಿಷ್ಣು ಭಕ್ತಿ, ಹರಿಸರ್ವೋತ್ತಮತೆಯ ಪ್ರತಿಪಾದಕ ಮನೋರ‍್ಮ, ಪುರಂದರದಾಸರ ಆಶೀರ್ವಚನದಿಂದ ಅವರು ಕೈಗೊಂಡ ಹರಿದಾಸ ಪರಂಪರೆಯ ಪುನರುಜ್ಜೀವನ-ಇವುಗಳೆನ್ನಬಹುದು.

ಅಪರೋಕ್ಷ ಜ್ಞಾನಿಗಳೆಂದೇ ಪ್ರಸಿದ್ಧರಾದ ವಿಜಯದಾಸರು, ಎಸಗಿದ ಪವಾಡಗಳನೇಕ ಎಂಬುದು ಅವರ-ಶಿಷ್ಯರ ರಚನೆಗಳ ಮೂಲಕ ತಿಳಿಯಬರುತ್ತದೆ. ಮಹಿಮರ ಬದುಕಲ್ಲಿ ಇದು ಸಂಭವನೀಯ, ವಿಜಯದಾಸರ ಹಿರಿತನಕ್ಕೆ ನಿದರ್ಶನ. ಅವರು ತಬ್ಬಲಿಯಾದ ತಾಯಿ-ಮಗುವನ್ನು ಮನೆಗೆ ಕರೆತಂದು ಸಲಹಿ, `ಮೋಹನದಾಸ’ರೆಂದು ಕರೆದು ಸಾಕುಮಗನಾಗಿ ನೋಡಿಕೊಂಡು, ಅವರ ಅಪಮೃತ್ಯ ನಿವಾರಿಸಿದ್ದು, ಜಗನ್ನಾಥ ದಾಸರಿಗೆ, ಗೋಪಾಲದಾಸರ ಮೂಲಕ ಆಯುರ್ದಾನ ಮಾಡಿಸಿ ಅನುಗ್ರಹಿಸಿದ್ದು ಎಂಬುದು ಸ್ಮರಣೀಯವೆನಿಸುತ್ತವೆ.

ವಿಜಯದಾಸರಿಗೂ, ತಿರುಪತಿಯ ಶ್ರೀ ಶ್ರೀನಿವಾಸನಿಗೂ ಒಂದು ತೆರನಾದ ಅನನ್ಯ ದಿವ್ಯ ಸಂಬAಧ. ಅವರು ತಮ್ಮ ಅನೇಕ ಕೃತಿಗಳಲ್ಲಿ ತಿರುಪತಿಯ ಶ್ರೀ ಶ್ರೀನಿವಾಸನ ಅಪಾರ ಮಹಿಮೆ, ಗುಣಾತಿಶಯಗಳನ್ನು ಹಾಡಿ, ಹೊಗಳಿರುವುದುಂಟು. ಒಮ್ಮೆಯಂತೂ, ಬ್ರಹ್ಮೋತ್ಸವದ ಸಂದರ್ಭದಲ್ಲಿ ಸ್ವಾಮಿದರ್ಶನ ಆಗದಾಗ ಅವರು ಹಾಡಿದ್ದು, ಜನತೆಯಲ್ಲಿ ಜನಾರ್ದನನನ್ನು, ಕಾಣುವುದಾಗಿದೆ:

ನಿನ್ನ ದರುಶನಕೆ ಬಂದವನಲ್ಲವೋ ದೇವ |

ಪುಣ್ಯವಂತರ ದಿವ್ಯಚರಣ ನೋಡಲು ಬಂದೆ ||ಪ||


ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು

ಇಲ್ಲಿಗೇ ಬರುವ ಕಾರಣವ್ಯಾವುದೋ |

ಸೊಲ್ಲಿಗೇ ಸ್ತಂಭದಲಿ ತೋರಿದ ಮಹಾಮಹಿಮ

ಎಲ್ಲಿಲ್ಲವೋ ನೀನು ಬಲ್ಲ ಭಕುತಗೇ ||1||


ಕರೆದಾಗಲೇ ಓಡಿಬಂದೊದಗುವ ಸ್ವಾಮಿ |

ಮರಳಿ ಗಾವುದವೆಣಿಸಿ ಬರಲ್ಯಾತಕೆ |

ನೆರೆನಂಬಿದವರಿಗಾವಲ್ಲಿಯಾದರೆ ಏನೊ

ಅರಿತವರ ಮನದಲ್ಲಿ ನಲಿದಾಡುವ ಚಲುವ

........... ವಿಜಯ ವಿಠಲ ರೇಯಾ .........

ಮುಕುತಿ ಲಕ್ಷಣಗಳು

ವಿಜಯದಾಸರು ತಮ್ಮ ಬದುಕಿನ ಕೊನೆಯ ದಿನಗಳನ್ನು ‘ಚಿಪ್ಪಗಿರಿ’ಯಲ್ಲಿ ಕಳೆದರು. ಕ್ರಿ.ಶ. 1755 ನೆಯ ಕಾರ್ತಿಕ ಶುದ್ದ ದಶಮಿ ಗುರುವಾರ ಶಾಂತಚಿತ್ತತೆಯಿAದ, ವಿಜಯವಿಠ್ಠಲನ ದಿವ್ಯಸಾನ್ನಿಧ್ಯ ಸೇರಿದರೆಂಬ ಸಂಗತಿ, ಜಗನ್ನಾಥದಾಸರ ಹಾಗೂ ಆನಂದದಾಸರ ಪದಗಳಿಂದ ತಿಳಿದು ಬರುತ್ತದೆ.

ಎಪ್ಪತ್ತಮೂರು ವರ್ಷ ಕಾಲ ಜೀವಿಸಿದ್ದ ವಿಜಯದಾಸರ ಬದುಕು, ಭಕ್ತಿ, ಜ್ಞಾನಿ, ಸಾಧಕನ ಬದುಕು. ಸಂಸಾರದಲ್ಲಿದ್ದು ಅಂಟದAತಿದ್ದ ಅಲಿಪ್ರನ ಬದುಕು. ತಮ್ಮ ಸ್ವರೂಪೋದ್ಧಾರಕ ಗುರುರ‍್ಯರೆನಿಸಿದ ಪುರಂದರದಾಸರ ಜೀವನ ಚರಿತ್ರೆಯನ್ನು ಮೊದಲಿಗೆ ನೀಡಿದವರು ವಿಜಯದಾಸರೇ. ನೂರಾರು ವರ್ಷದಂತರ, ಕೇವಲ ಕಾಲಮಾನದ ದೃಷ್ಟಿಯಿಂದ; ಗುರುಶಿಷ್ಯರ ನಂಟಿನಿAದಲ್ಲ. ಸಾಂಪ್ರದಾಯಿಕ ಅಥವಾ ಶಿಷ್ಯವರ್ಗದ ಶಿಕ್ಷಣ ವಿಜಯದಾಸರಿಗೆ ದೊರಕದಿದ್ದಾತು. ಆದರೂ, ದಾಸರು ವೇದಾಂತ ತತ್ವದ ಪ್ರಮೇಯಗಳನ್ನು ತಮ್ಮ ಕೀರ್ತನೆಗಳಲ್ಲಿ ಬಳಸಿರುವ ಪರಿ, ಗಹನ ಆದ ತತ್ವವಿಚಾರವನ್ನು ತಿಳಿಯಾಗಿ ಹೇಳಿರುವ ಕುಶಲತೆ, ಸ್ವಾರಸ್ಯವೆನಿಸುತ್ತದೆ. 

Source 

Post a Comment

0Comments

Post a Comment (0)