*ಗಣಕರಂಗ(ರಿ), ಧಾರವಾಡ* ಆಯೋಜಿಸುವುದು
*ಇತ್ತೀಚೆಗೆ ಅಗಲಿದ ಬಂಡಾಯ, ನಾಡೋಜ ದಲಿತಕವಿ ಡಾ.ಸಿದ್ಧಲಿಂಗಯ್ಯನವರ ಏಳು ಕವನ ಸಂಕಲನಗಳಲ್ಲಿಯ ಯಾವುದಾದರೂ ಒಂದು ಕವನದ ವಿಮರ್ಶಾತ್ಮಕ ಲೇಖನ ಸ್ಪರ್ಧೆಯನ್ನು ವಾಟ್ಸಪ್ ದಲ್ಲಿ ಆಯೋಜಿಸಲಾಗಿದೆ.*
ಸ್ಪರ್ಧೆಯ ದಿನಾಂಕ : *27-06-2021, ರವಿವಾರ*
ಸ್ಪರ್ಧೆಯ ಸಮಯ : *ಸಾಯಂಕಾಲ 5:00ಗಂಟೆಯಿಂದ 8:00ಗಂಟೆಯವರೆಗೆ*
ಸ್ಪರ್ಧೆ ನಡೆಯುವ ವಾಟ್ಸಪ್ ಗುಂಪುಗಳು : *ಗಣಕರಂಗ ಕವನ ವಿಮರ್ಶೆ-1, ಗಣಕರಂಗ ಕವನ ವಿಮರ್ಶೆ-2 ಮತ್ತು ಗಣಕರಂಗ ಕವನ ವಿಮರ್ಶೆ-3.*
*ಸ್ಪರ್ಧೆಯ ನಿಯಮಗಳು:*
*1.* ಬಂಡಾಯಕವಿ, ದಲಿತಕವಿ ನಾಡೋಜ ಡಾ.ಸಿದ್ದಲಿಂಗಯ್ಯನವರ ರಚನೆಯ ಯಾವುದಾದರೂ ಕವನ ಸಂಕಲನದಲ್ಲಿಯ ಯಾವುದಾದರೂ ಕವನದ ಆಯ್ಕೆ ನಿಮ್ಮದು.
*2.* ವಿಮರ್ಶೆಗೆ ಆಯ್ಕೆ ಮಾಡಿಕೊಂಡಿರುವ ಕವನ ಸಂಕಲನದ ಹೆಸರು ಮತ್ತು ಕವನದ ಶೀರ್ಷಿಕೆಯನ್ನು ಸ್ಪಷ್ಟವಾಗಿ ಬರೆದ ತಲೆಬರಹವುಳ್ಳ ವಿಮರ್ಶಾ ಲೇಖನವು ಕನಿಷ್ಟ 400-600 ಶಬ್ದಗಳ ಮಿತಿ ಅಥವಾ ಎರಡು ಪುಟಗಳ ಮಿತಿಯಲ್ಲಿರಲಿ.
*3.* ಲೇಖನದ ಆರಂಭದಲ್ಲಿ *ಗಣಕರಂಗ ಕವನ ವಿಮರ್ಶೆ ಸ್ಪರ್ಧೆ* ಎಂದು ಕಡ್ಡಾಯವಾಗಿ ಹಾಕಿರಬೇಕು. ಲೇಖನದ ಕೊನೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ, ಸಂಪೂರ್ಣ ವಿಳಾಸ (ಪಿನ್ ಕೋಡ್ ಸಹಿತ) ಮತ್ತು ಇತ್ತೀಚಿನ ಪೋಟೋ (ಪ್ರಮಾಣಪತ್ರದಲ್ಲಿ ಹಾಕಲು) ಕಳಿಸಬೇಕು.
*4.* ಲೇಖನದ ಪೋಟೋ, ಪಿಡಿಎಪ್ ಆವೃತ್ತಿ ಕಳಿಸಬಾರದು. ತಿರಸ್ಕರಿಸಲಾಗುವುದು.ಲೇಖನವು ಕಡ್ಡಾಯವಾಗಿ ಮೊಬೈಲಿನಲ್ಲಿ ಟೈಪಿಸಿ (ಅಕ್ಷರರೂಪದಲ್ಲಿ) ಕಳಿಸಬೇಕು.
*5.* ಒಬ್ಬರು ಒಂದೇ ಲೇಖನ ಕಳಿಸಬೇಕು. ವಯಸ್ಸಿನ ನಿರ್ಭಂಧವಿಲ್ಲ.
*6.* ಫಲಿತಾಂಶ ಪ್ರಕಟವಾಗುವವರೆಗೆ ಬರಹವನ್ನು ಬೇರೆಲ್ಲೂ ಪ್ರಕಟಿಸಬಾರದು. ಪ್ರಕಟಿಸಿದರೆ ಸ್ಪರ್ಧೆಗೆ ಪರಿಗಣಿಸುವುದಿಲ್ಲ.
*7.* ಸ್ಪರ್ಧೆಯಲ್ಲಿ ಯಾರನ್ನೇ ಆಗಲಿ, ಯಾವುದೇ ರೀತಿಯ ಅವಹೇಳನಕಾರಿ, ಅಪಮಾನಿಸುವ, ಸಮಾಜವಿರೋಧಿ, ಸಂವಿಧಾನ ವಿರೋಧಿ, ದೇಶದ ಭಾವೈಕ್ಯತೆಗೆ ದಕ್ಕೆ ತರುವ ವಿಷಯಗಳಿರಬಾರದು. ಹಾಗೇನಾದರೂ ಕಂಡು ಬಂದರೆ ಲೇಖನವನ್ನು ಆರಂಭದಲ್ಲಿಯೇ ತಿರಸ್ಕರಿಸಲಾಗುವುದು.
*8.* ಲೇಖನವನ್ನು (ನಿಮ್ಮ ಅನುಕೂಲಕ್ಕಾಗಿ ಮೊದಲೇ ಸಿದ್ಧಪಡಿಸಿಕೊಂಡು) ಕಡ್ಡಾಯವಾಗಿ ಸ್ಪರ್ಧೆ ನಡೆಯುವ ವಾಟ್ಸಪ್ ಗುಂಪಿನಲ್ಲಿ ಒಂದೇ ಸಲ ಹಾಕಬೇಕು. ಸಂಯೋಜಕರ ಮತ್ತು ಗಣಕರಂಗ ಮುಖ್ಯಸ್ಥರ ವೈಯಕ್ತಿಕ ನಂಬರಿಗೆ ವಾಟ್ಸಪ್ ಮಾಡುವ/ಕಳಿಸುವ ಲೇಖನಗಳನ್ನು ಪರಿಗಣಿಸುವುದಿಲ್ಲ. ಸಹಕರಿಸಿರಿ.
*9. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆಯುವ ಮೂವರು ವಿಮರ್ಶಕರಿಗೆ ಪುಸ್ತಕ ಗೌರವ ಹಾಗೂ ವಿಶೇಷ ಉಡುಗೊರೆ ನೀಡಿ ಗೌರವಿಸಲಾಗುವುದು. ಉಳಿದ ಐವರು ವಿಮರ್ಶಕರ ಮೆಚ್ಚುಗೆಯ (ಉತ್ತಮ) ಲೇಖನಗಳಿಗೆ ಮೆಚ್ಚುಗೆ ಬಹುಮಾನವಾಗಿ ಪುಸ್ತಕ ಗೌರವ ಕಳಿಸಲಾಗುವುದು. ಆದರೆ ಬಹುಮಾನ ಪಡೆಯಲು ಬಹುಮಾನಿತರು ಫಲಿತಾಂಶ ಪ್ರಕಟವಾದ ತಕ್ಷಣವೇ ತಮ್ಮ ವಿಮರ್ಶಾ ಲೇಖನ ವಾಚನದ ವಿಡಿಯೋ ಕಳಿಸಬೇಕು. ನಮ್ಮ ಸಂಸ್ಥೆಯ ದಾಖಲಾತಿಗಾಗಿ ಸಹಕರಿಸಿರಿ.*
*10.* ಫಲಿತಾಂಶ ಪ್ರಕಟಣೆಯ ನಂತರ ಆಯೋಜಿಸುವ ಅಭಿನಂಧನೆ ಸಲ್ಲಿಸುವ ‘ಗೂಗಲ್ ಮಿಟ್’ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.
*11.* ಗೌರವಾನ್ವಿತ ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ. ತೀರ್ಪಿಗೆ ಎಲ್ಲ ಸ್ಪರ್ಧಿಗಳು ಬದ್ಧರಾಗಿರಬೇಕು. ಈ ವಿಷಯದಲ್ಲಿ ಯಾವುದೇ ಚರ್ಚೆಗೆ ಅವಕಾಶವಿಲ್ಲ. ಸಹಕರಿಸಿರಿ.
*12.* ಮುಕ್ತ ಅವಕಾಶದ ಈ ಸ್ಪರ್ಧೆಯಲ್ಲಿ ವಿಶ್ವದ ಎಲ್ಲಾ ಭಾಗಗಳಿಂದ ಆಸಕ್ತರೆಲ್ಲರೂ ಭಾಗವಹಿಸಬಹುದು. ಸ್ಪರ್ಧಾಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸದವರನ್ನು ತಕ್ಷಣವೇ ವಾಟ್ಸಪ್ ಗುಂಪಿನಲ್ಲಿ ಬ್ಲಾಕ್ ಮಾಡಲಾಗುವುದು. ಅಂಥವರನ್ನು ಮುಂದಿನ ನಮ್ಮ ಯಾವುದೇ ಸ್ಪರ್ಧೆಗಳಿಗೆ ಪರಿಗಣಿಸುವುದಿಲ್ಲ.
*13.* ದಯವಿಟ್ಟು ಸ್ಪರ್ಧೆ ನಡೆಯುವಾಗ ಸ್ಪರ್ಧೆಯ ವಿಷಯದ ಹೊರತಾಗಿ ಬೇರೆ ಏನನ್ನೂ ಸ್ಪರ್ಧೆ ನಡೆಯುವ *ಗಣಕರಂಗ ವಿಮರ್ಶಾ ಸ್ಪರ್ಧೆ* ವಾಟ್ಸಪ್ ಗುಂಪುಗಳಲ್ಲಿ ಹಾಕಬಾರದು. ದಯವಿಟ್ಟು ಸಹಕರಿಸಬೇಕು.
*14.* ಕೃತಿಚೋರತನಕ್ಕೆ ಸಂಬಂಧಿಸಿದಂತೆ ದೇಶದ ಕಾನೂನು ಕ್ರಮಗಳಿಗೆ ಸಂಬಂಧಿಸಿದ ಲೇಖಕರು ಜವಾಬ್ದಾರರು. ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ತಿಳಿಸಿದರೆ ಗಣಕರಂಗ ಸಂಸ್ಥೆಯು ಅಂತಹ ಲೇಖನಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಸಹಕಾರವಿರಲಿ.
*15.* ಸ್ಪರ್ಧೆಯ ನಂತರ ಸೂಕ್ತವೆನಿಸುವ ಲೇಖನಗಳನ್ನು ಸಾಧ್ಯವಾದರೆ ಗಣಕರಂಗ ಪ್ರಕಾಶನದಿಂದ ಮುದ್ರಣ ಅಥವಾ ಡಿಜಿಟಲ್ ಆವೃತ್ತಿ ಸೇರಿದಂತೆ ಆಧುನಿಕ ತಂತ್ರಜ್ಞಾನದ ಸೂಕ್ತ ಆವೃತ್ತಿ/ರೂಪದಲ್ಲಿ ಪ್ರಕಟಿಸುವಿಕೆಯ ಹಕ್ಕನ್ನು ಗಣಕರಂಗ ಪ್ರಕಾಶನವು ಹೊಂದಿರುತ್ತದೆ. ಸಹಕರಿಸಿರಿ.
*16.* ಈ ಕೆಳಗಿನ ಯಾವುದಾದರು ಒಂದು ಲಿಂಕನ್ನು ಒತ್ತುವ ಮೂಲಕ ನೀವು ಸ್ಪರ್ಧೆಯ ಗುಂಪಿಗೆ ಸೇರಿಕೊಳ್ಳಬಹುದು.
ಗಣಕರಂಗ ಕವನ ವಿಮರ್ಶೆ-1
https://chat.whatsapp.com/GY8P9j3iatUBsvbNapVNSr
ಗಣಕರಂಗ ಕವನ ವಿಮರ್ಶೆ -2
https://chat.whatsapp.com/DBigvRXbfNZ3oSw6yXr3i2
ಗಣಕರಂಗ ಕವನ ವಿಮರ್ಶೆ-3
https://chat.whatsapp.com/JH9p3RR9icN8W0HESRfYjM
*ಸ್ಪರ್ಧೆಯ ನಿಯಮಗಳನ್ನು ದಯವಿಟ್ಟು ಸಾವಧಾನವಾಗಿ ಸಂಪೂರ್ಣ ಓದಿಕೊಳ್ಳಿ, ಅನಗತ್ಯ ವಿಚಾರಿಸಬೇಡಿ.*
ಈ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗೆ ಮಾತ್ರ ಸಂಪರ್ಕಿಸಿರಿ : (ದಯವಿಟ್ಟು ಅನಾವಶ್ಯಕ ವಿಚಾರಣೆ ಮಾಡಬೇಡಿ)
*ಗಣಪತಿ ಗೋ ಚಲವಾದಿ(ಗಗೋಚ)*
ಸ್ಪರ್ಧೆಯ ಸಂಯೋಜಕರು-9620685599 ಮತ್ತು 9740691429.
ಮತ್ತು
*ಸಿದ್ಧರಾಮ ಹಿಪ್ಪರಗಿ,*
ಮುಖ್ಯಸ್ಥರು,
ಗಣಕರಂಗ (ರಿ), ಧಾರವಾಡ. 9845109480, 9902674005. ganakaranga@gmail.com