ಮಗುವನ್ನು ನೋಡಿಕೊಳ್ಳುವವರಿಗೆ ಶಿಷ್ಟಾಚಾರದ ಸಲಹೆಗಳು

varthajala
0

1)ಯಾವಾಗಲೂ ಉತ್ಸಾಹದಿಂದ ಮತ್ತು ಭಾಮೋದ್ರೇಕದಿಂದಿರಿ.


2)ಮಗುವಿಗೆ ಬೇಕಾದ ಅಗತ್ಯತೆಗಳನ್ನು ತಕ್ಷಣವೇ ಪ್ರೀತಿಯಿಂದ ಪೂರೈಸಿರಿ.

3)ತಂದೆ-ತಾಯಿ ಮತ್ತು ಮಗುವಿನ ಜೊತೆ ನಂಬಿಕೆಯ ಸಂಬಂಧವನ್ನು ಕಟ್ಟಿಕೊಳ್ಳಿ.

4)ಯಾವಾಗಲೂ ಗುಣಾತ್ಮಕ ಶಕ್ತಿಯನ್ನು ರೂಢಿಸಿಕೊಳ್ಳಿ ಮತ್ತು ಮಗುವನ್ನು ಗುಣಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿ.

5)ನಿಮ್ಮನ್ನು ಎರಡನೇ ತಾಯಿಯಂತೆ ಚಿತ್ರಿಸಿಕೊಳ್ಳಿ ಮತ್ತೇ ಅದೇ ಸಮಯಕ್ಕೇ ಎಲ್ಲಿ ಶಿಸ್ತಿನ ಅವಶ್ಯಕತೆ ಇದೆಯೋ ಅಲ್ಲಿ ನಿರ್ಮಿಸಿ.

6)ಬೆಚ್ಚಗಿನ ಮತ್ತು ಸುರಕ್ಷತೆಯ ವಾತಾವರಣವನ್ನು ನಿರ್ಮಿಸಿ.

7)ಮಗುವು ಕೆರಳಿದಾಗ ಅದನ್ನು ಅರ್ಥ ಮಾಡಿಕೊಂಡು ಜವಾಬ್ದಾರಿಯನ್ನು ತೆಗೆದುಕೊಳ್ಳಿ.

8)ಆದರ್ಶವಾಗಿರಿ ಒಬ್ಬ ಉತ್ತಮ ನ್ಯಾನಿ ಪ್ರಾಮಾಣಿಕವಾಗಿ ಮಗುವಿನ ಜೊತೆಯನ್ನು ಪ್ರೀತಿಸುತ್ತಾಳೆ.

9)ಒಬ್ಬ ಉತ್ತಮ ನ್ಯಾನಿ ಮಗುವಿನ ಅಭಿವೃದಿದಿಗೋಸ್ಕರ ಕನಿಷ್ಠ ಆಧಾರದ ಮೇಲೆ ಅರ್ಥ ಮಾಡಿಕೊಳ್ಳಬೇಕು.

10)ಒಬ್ಬ ಉತ್ತಮ ನ್ಯಾನಿ ಮಗುವಿನ ಕಾಳಜಿಯಲ್ಲಿ ಯಾವಾÀಗಲೂ ಪರವಾಗಿ ನಿಲ್ಲಬೇಕು.

11)ಒಬ್ಬ ಉತ್ತಮ ನ್ಯಾನಿ ದಿನಪೊರ್ತಿ ಮಗುವನ್ನು ನೋಡಿಕೊಳ್ಳುವುದರಲ್ಲಿ ತನ್ನೆಲ್ಲಾ ಶಕ್ತಿಯನ್ನು ಹಾಕಿ ಆರೈಕೆಯಲ್ಲಿ ತೊಡಗಿಸಿಕೊಳ್ಳಬೇಕು.


12)ಒಬ್ಬ ಉತ್ತಮ ನ್ಯಾನಿ ತನ್ನ ತಾಳ್ಮೆಯನ್ನು ಮಗುವಿಗೊಸ್ಕರ ಮೀಸಲು ಇಡಬೇಕು.

13)ಒಬ್ಬ ಉತ್ತಮ ನ್ಯಾನಿ ಯಾವಾಗಲೂ ಜಾಗೃತೆಯಿಂದಿರಬೇಕು.

14)ಒಬ್ಬ ಉತ್ತಮ ನ್ಯಾನಿ ಒಳ್ಳೆಯ ಸಂವಹನಶೀಲರಾಗಿರಬೇಕು.

15)ಒಬ್ಬ ಉತ್ತಮ ನ್ಯಾನಿ ಯಾವಾಗಲೂ ಎಲ್ಲ ರೀತಿಯ ಪರಿಸ್ಥಿತಿಯಲ್ಲೂ ಹೊಂದಿಕೊಂಡು ಹೋಗುವಂತಿರಬೇಕು.

16)ಒಬ್ಬ ಉತ್ತಮ ನ್ಯಾನಿಗೆ ಆತ್ಮಪೋಷಣೆ ಇರುತ್ತದೆ.

17)ಒಬ್ಬ ಉತ್ತಮ ನ್ಯಾನಿ ವಿಶ್ವಾಸಾರ್ಹ, ನಂಬಿಕಸ್ಥ ಮತ್ತು ಜವಾಬ್ದಾರಿಯುತವಾಗಿರಬೇಕು.

18)ಒಬ್ಬ ಉತ್ತಮ ನ್ಯಾನಿ ಗೌರವಾನ್ವಿತವಾಗಿ ಆಯೋಜಿಸುವಂತಿರಬೇಕು.

19)ಒಬ್ಬ ಉತ್ತಮ ನ್ಯಾನಿ ಆತ್ಮಪ್ರೇರಿತದಿಂದಿರಬೇಕು. 

20)ಒಬ್ಬ ಉತ್ತಮ ನ್ಯಾನಿ ಎಂಥ ತುರ್ತುಪರಿಸ್ಥಿತಿಗಾದರೂ, ಪರಿಸ್ಥಿತಿಯನ್ನು ನಿಭಾಯಿಸುವ ಸಾಮಥ್ರ್ಯ ಹೊಂದಿರಬೇಕು.

21)ಒಬ್ಬ ಉತ್ತಮ ನ್ಯಾನಿ ಯಾವಾಗಲೂ ಪೂರ್ವಭಾವಿಯಾಗಿ ಚಟುವಟಿಕೆಯಿಂದಿರಬೇಕು.

22)ಒಬ್ಬ ಉತ್ತಮ ನ್ಯಾನಿ ಸ್ವಚ್ಛವಾದ ಹಿನ್ನಲೆಯನ್ನು ಹೊಂದಿರಬೇಕು.

23)ಒಬ್ಬ ಉತ್ತಮ ನ್ಯಾನಿ ತನ್ನ ಆರೈಕೆಯಲ್ಲಿ ಮಗುವಿನ ಜೀವನದಲ್ಲಿ ಗುಣಾತ್ಮಕ ವ್ಯತ್ಯಾಸವನ್ನು ತರುವುದಕ್ಕೆ ಬದ್ಧರಾಗಿರಬೇಕು.

24)ನ್ಯಾನಿ ಸೂಕ್ತವಾದ ಉಡುಪುಗಳನ್ನು ಧರಿಸಿ ವೃತ್ತಿಪರತೆಯ ತರಹ ತಮ್ಮನ್ನು ತಾವು ಪ್ರಸ್ತುತ ಪಡಿಸಬೇಕು.

25)ಎಲ್ಲ ಮೀಟಿಂಗ್‍ಗಳಿಗೆ ಹಾಜರಾಗಿ ಸಮಯಪರಿಪಾಲನೆಯನ್ನು ನಿರ್ವಹಿಸಬೇಕು.

26)ಮಗುವಿನ ಜೊತೆ ಇರುವಾಗ ಸಭ್ಯಸ್ಥ ನಡುವಳಿಕೆಯಿಂದ ನಡೆದುಕೊಳ್ಳಬೇಕು.

27) ಪ್ರತಿಯೊಬ್ಬರ ಜೊತೆ ಮರ್ಯಾದೆ ಮತ್ತು ಸೌಜನ್ಯದಿಂದ ವರ್ತಿಸಬೇಕು.

28)ಯಾವಾಗಲೂ  ಪಾಮಾಣಿಕತೆ ಮತ್ತು ಘನತೆಯಿಂದ ನಡೆದುಕೊಳ್ಳಬೇಕು

29)ಸುಮ್ಮನೆ ಊಹಿಸಬಾರದು ನಿದಾನವಾಗಿ ನಿರ್ದಾರವನ್ನು ತೆಗೆದುಕೂಳ್ಳÀಬೇಕು.

30)ಪ್ರತಿನಿತ್ಯದ ನಿಮ್ಮ ಮಾತಿನಲ್ಲಿ "ದಯವಿಟ್ಟು ; ಧನ್ಯವಾದಗಳು" ಎಂದು ಸೌಜನ್ಯದಿಂದ ಹೇಳಬೇಕು.


31)ಸಣ್ಣದೊಂದು ಸೌಜನ್ಯ ತೋರಿಸಿದರೂ ಅದನ್ನು ಗುರುತಿಸಬೆಕು.

32)ಯಾವಾಗ ಕ್ಷಮೆಯ ಅಗತ್ಯವಿರುತ್ತೊ ಆಗ ನಿಸ್ಸಂಕೋಚದಿಂದ ಕೇಳಬೇಕು.

33)ಅವಳು\ನು ಸಾಧಿಸಿರುವ ಸಾಧನೆಯ ಹಾದಿಯನ್ನು ನೀವು ಅನುಮೋದಿಸದಿದ್ದರೂ ಅವರನ್ನು ಅಭಿನಂದಿಸಬೇಕು.

34)ಸಮಯವನ್ನು ಸೂಕ್ತವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಬೇಕು.

35)ಪ್ರತಿಕ್ರಿಯೆಗಳನ್ನು ಕೇಳಿ ಮತ್ತು ಅದನ್ನು ಗುಣಾತ್ಮಕವಾಗಿ ತೆಗೆದುಕೊಳ್ಳುವಂತಿರಬೇಕು, ಏಕೆಂದರೆ "ಪ್ರತಿಬಿಂಬವು ವೃತ್ತಿಧರ್ಮದ ಏಳಿಗೆಗೆ ಕೀ ಇದ್ದ ಹಾಗೆ".

36)ಎಲ್ಲ ರೀತಿಯ ಸಂವಹನದಲ್ಲೂ ಆದಷ್ಟು ಎಚ್ಚರಿಕೆಯಿಂದ ಮತ್ತು ಸಭ್ಯ ರೀತಿಯಲ್ಲಿ ಇರಬೇಕು. 

37)ತಂದೆ-ತಾಯಿ ಮತ್ತು ಮಕ್ಕಳು ಎಸ್‍ಎಮ್‍ಎಸ್‍ಗಳನ್ನು ಕಳಿಸಿದಾಗ ಪ್ರತ್ಯುತ್ತರವನ್ನು ನೀಡಬೇಕು.

38)ಕೆಲಸದ ಸಮಯದಲ್ಲಿ ನಿಧಾನಗತಿಯಲ್ಲಿ ಕಾಣಿಸಿಕೊಳ್ಳಬಾರದು.

39)ನೀತಿಗಳು ಮತ್ತು ಅಭ್ಯಾಸಗಳನ್ನು ಕಡೆಗಣಿಸಬಾರದು.

40)ಅವಶ್ಯಕತೆ ಇಲ್ಲದಿರುವಾಗ ಜೋರುಧ್ವನಿಯಲ್ಲಿ ಮಾತನಾಡಬಾರದು.

41)ಪ್ರತಿನಿತ್ಯದ ಆಧಾರದ ಮೇಲೆ ನಿಧಾನವಾಗಿ ಆಗಮಿಸಬಾರದು.

42)ನಿಮ್ಮ ತಪ್ಪು ಇದ್ದಾಗ ಬೇರೆಯವರನ್ನು ದೂಷಿಸಬಾರದು.

43)ಸಕ್ರಿಯವಾಗಿ ಗಾಸಿಪ್‍ನಲ್ಲಿ ಭಾಗವಹಿಸಬಾರದು.

44)ಲೈಂಗಿಕ ಅತಿಕ್ರಮಣದ ಬಗ್ಗೆ ಜೋಕ್‍ಗಳನ್ನು ಹೇಳಿಕೊಂಡು ಮನೋರಮÀಜನೆಯನ್ನು ನೀಡಬಾರದು.

45)ರಚನಾತ್ಮಕ ಪ್ರತಿಕ್ರಿಯೆಗಳನ್ನು ತೆಗೆದುಕೊಳ್ಳುವಾಗ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸಬೇಕು.

ತಂದೆ-ತಾಯಿಗಳಿಗೆ ಸಲಹೆಗಳು


1) ನಾವು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ ನೀವು ನ್ಯಾನಿ\ಆಯಾ ಹತ್ತಿರ ಪ್ರತಿನಿತ್ಯ ಮಾತನಾಡಿ ಮತ್ತು ನಿಮ್ಮ ಮಗುವಿನ ಪ್ರತಿಯೊಂದು ಚಟುವಟಿಕೆಯ ಟ್ರಾಕ್‍ನ್ನು ಇಡಿ.

2)ನಿಮ್ಮ ಕಡೆಯಿಂದ ನಿರಂತರವಾಗಿ ಪ್ರತಿಕ್ರಿಯೆ ತೆಗೆದುಕೊಳ್ಳಲು ಇಷ್ಟಪಡುತ್ತೇವೆ, ಆದ್ದರಿಂದ ಪ್ರತಿಬಾರಿಯೂ ನಿಮಗೆ ಉತ್ತಮವಾದುದನ್ನೇ ಕೊಡುತ್ತೇವೆ.

3)ನ್ಯಾನಿ\ಆಯಾಗೆ ದಿನನಿತ್ಯದ ಆಧಾರದ ಮೇಲೆ ಸಂಬಳವನ್ನು ಕೊಡಲು ಕೋರುತ್ತೇವೆ.

4)ನ್ಯಾನಿ\ಆಯಾ ಜೊತೆ ಏನಾÀದರೂ ತೊಂದರೆ ಇದ್ದಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಮತ್ತು ವಿಷಯವನ್ನು ಶಮನ ಮಾಡುತ್ತೇವೆ.

5)ದಿನಪೂರ್ತಿ ನ್ಯಾನಿ\ಆಯಾ ಜೊತೆ ಮಗುವಿಗೆ ಬೇಕಾದ ಅವಶ್ಯಕತೆಗಳನ್ನು ನೀಡಿ.

6)ಅಪಘಾತೆಗಳನ್ನು ತಡೆಗಟ್ಟುವಂತೆ ಮಾಡಲು ಮನೆಯನ್ನು ಮಕ್ಕಳಿಗೆ ಹಾನಿಕಾರವಾಗದಂತೆ ಮತ್ತು  ಎಷ್ಟು ಸಾಧ್ಯವೊ ಅಷ್ಟು ಸುರಕ್ಷತೆ ಮಾಡಿ.

7)ಮಗುವಿಗೆ ಇಷ್ಟ ಮತ್ತು ಇಷ್ಟವಾಗದರ ಬಗ್ಗೆ ನ್ಯಾನಿ\ಆಯಾಗೆ ತಿಳಿಸಿ.

8)ಮನೆಯ ಎಲ್ಲ ಬೆಲೆಬಾಳುವ ವಸ್ತುಗಳನ್ನು ಕಣ್ಣಿಗೆ ಕಾಣದ ಹಾಗೆ  ದೂರದಲ್ಲಿಡಿ.

9)ಮನೆಯಲ್ಲಿ ಮಗುವಿನ ಔಷಧಿಗಳು ಎಲ್ಲಿವೆ ಮತ್ತು ಪ್ರಥಮ ಚಿಕಿತ್ಸಾ ಡಬ್ಬ ಎಲ್ಲಿ ಇಟ್ಟಿದೀರಾ ಎಂದು ತೋರಿಸಿ ಮತ್ತು ಮಗುವಿಗೆ ಕೊಡಬೇಕಾದ ಸರಿಯಾದ ರೀತಿಯಲ್ಲಿ ಹೇಗೆ ಕೊಡಬೇಕೆಂಬುದನ್ನು ವಿವರಿಸಿ.

10)ಮಗುವಿಗೆ ತಿನ್ನಲು ಕೊಡುವ ಬಗ್ಗೆ ವಿಶೇಷವಾಗಿ, ತುಂಬಾ ಸ್ಪಷ್ಟವಾಗಿ ತಿಳಿಸಿರಿ. ಆ ರೀತಿಯ ಊಟದಿಂದ ಮಗುವಿಗೆ ಅಲರ್ಜಿ ಏನಾದರೂ ಉಂಟಾಗಬಹುದೆ ಎಂದು ತಿಳಿದುಕೊಳ್ಳಿರಿ.

RADHIKA G N

7019990492




Post a Comment

0Comments

Post a Comment (0)