ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ದಾರ್ಶನಿಕ ಮಾರ್ಗದರ್ಶನದಲ್ಲಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಎಂ. ಸಿ. ನಾರಾಯಣ ಗೌಡ ಅವರ ಕ್ರಿಯಾಶೀಲ ನಾಯಕತ್ವದಲ್ಲಿ ಕರ್ನಾಟಕ ಸರ್ಕಾರವು ನೀತಿ ಆಯೋಗದ ಮಾದರಿಯಂತೆ ಕೋವಿಡ್-19 ಮಹಾಮಾರಿ ಸಮಯದಿಂದ ಇಂಟರ್ನ್ಶಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಆಸಕ್ತಿ ಹೊಂದಿರುವ ಸ್ನಾತಕೋತ್ತರ ಅಭ್ಯರ್ಥಿಗಳು ʼಸೇವಾಸಿಂಧುʼ ವೆಬ್ಸೈಟ್ ವಿಳಾಸ: :www.sevasindhu.karnataka.gov.
ಯಾವುದೇ ಆರ್ಥಿಕ ಸೌಲಭ್ಯವಿಲ್ಲದೇ ಕೇವಲ ಸರ್ಕಾರದ ಪ್ರಮಾಣಪತ್ರವನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನಾ ಅಭ್ಯರ್ಥಿಗಳು ಮುಂದೆ ಬಂದಿರುತ್ತಾರೆ. ಈಗಾಗಲೇ 81 ವಿದ್ಯಾರ್ಥಿಗಳು ತಮ್ಮ ಸಂಶೋಧನಾ ವರದಿಯನ್ನು ಸಲ್ಲಿಸಿದ್ದಾರೆ ಹಾಗೂ ಪ್ರಮಾಣಪತ್ರವನ್ನು ಪಡೆದಿರುತ್ತಾರೆ.
ಅಲ್ಲದೆ, 80 ಸಂಶೋಧನೆಗಳು ಪ್ರಗತಿಯಲ್ಲಿವೆ. ಅವರ ವರದಿಗಳಲ್ಲಿರುವ ಅತ್ಯುತ್ತಮ ಸಲಹೆಗಳನ್ನು ಹಾಗೂ ವಿಶ್ಲೇಷಣೆಗಳನ್ನು ಆಯಾ ಇಲಾಖೆಯ ಅಧಿಕಾರಿಗಳ ಮೂಲಕ ಉಪಯೋಗವನ್ನು ಪಡೆಯಲಾಗುತ್ತಿದೆ. ಇದರಿಂದ, ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ವೇಗ ಲಭಿಸುವುದಲ್ಲದೇ ಹಾಗೂ ಗಾತ್ರ ಜಾಸ್ತಿಯಾಗುತ್ತದೆ.
ಇದೇ ಮಾದರಿಯಲ್ಲಿ ಭಾರತೀಯ ಆಡಳಿತ ಫೆಲೋಶಿಪ್ಗಾಗಿ ಅರ್ಜಿಗಳನ್ನು ಆಹ್ವಾನಿಸಲು ದ ನಡ್ಜ್ ಫೌಂಡೇಶನ್ನೊಂದಿಗೆ ಅದರ ಸಾಮಾಜಿಕ ಆವಿಷ್ಕಾರ ಕೇಂದ್ರದೊಂದಿಗೆ ಪಾಲುದಾರಿಕೆ ಹೊಂದಿದೆ. ದ ನಡ್ಜ್ ಫೌಂಡೇಶನ್ ಪಾವತಿಸುವ 12 ಭಾರತೀಯ ಆಡಳಿತ ವ್ಯಕ್ತಿ (ಫೆಲೋ)ಗಳು 11 ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಕಾರ್ಯತಂತ್ರ ಪ್ರಸ್ತುತತೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ರಾಜ್ಯ ಯೋಜನೆಗಳ ಮೇಲೆ ಕಾರ್ಯನಿರ್ವಹಿಸಬೇಕಿದೆ.
ಈ ಫೆಲೋಶಿಪ್ನ ಅವಧಿ 18 ತಿಂಗಳುಗಳಾಗಿದ್ದು, ಇದರಲ್ಲಿ ಫೆಲೋಗಳು ಉನ್ನತ ಸಾಧಕರಾಗಿದ್ದು ಕರ್ನಾಟಕ ಸರ್ಕಾರದೊಂದಿಗೆ ನೇರವಾಗಿ ಕಾರ್ಯನಿರ್ವಹಿಸಲು ವಿವಿಧ ಕ್ಷೇತ್ರಗಳಲ್ಲಿನ ದೊಡ್ಡ ಸಂಸ್ಥೆಗಳ GM / VP / CXO ಮೊದಲಾದವುಗಳಲ್ಲಿ ಪ್ರಮುಖ ಪ್ರಮಾಣದ ಉಪಕ್ರಮಗಳ ಅನುಭವ ಹೊಂದಿರುತ್ತಾರೆ.
ಭಾರತೀಯ ಆಡಳಿತ ಫೆಲೋಶಿಪ್ ಆವಿಷ್ಕಾರ ಮತ್ತು ಪಾಲುದಾರಿಕೆಯ ಮೂಲಕ ಅಭಿವೃದ್ಧಿ ಸೂಚಕಗಳಲ್ಲಿ ರಾಜ್ಯದ ಬೆಳವಣಿಗೆಯನ್ನು ತ್ವರಿತಗೊಳಿಸುವ ಗುರಿಯನ್ನು ಹೊಂದಿದೆ. ಪ್ರತಿ ಫೆಲೋಗಳು ಆಡಳಿತ ತರಬೇತಿ ಸಂಸ್ಥೆ, ಮೈಸೂರು ಮತ್ತು ಇತರೆ ಉದ್ಯಮದ ಪ್ರಮುಖ ಪಾಲುದಾರರಿಂದ ವ್ಯಾಪಕ ನಾಯಕತ್ವ ಅಭಿವೃದ್ಧಿ ತರಬೇತಿಯನ್ನು ಪಡೆಯುತ್ತಾರೆ ಮತ್ತು ಅವರಿಗೆ ಸಂಬಂಧಪಟ್ಟ ಯೋಜನೆಗಳಲ್ಲಿ ಸ್ಮಾರ್ಟ್ SMART (Specific, Measurable, Achievable, Realistic, and Timely) ಹೊರಹರಿವನ್ನು ನಿರೀಕ್ಷಿಸಲಾಗುತ್ತದೆ.
ದಿ ನಡ್ಜ್ ಫೌಂಡೇಶನ್ “ಗೈಡ್ಸ್ಟಾರ್ ಪ್ಲಾಟಿನಂ ಟ್ರಾನ್ಸ್ಪರೆನ್ಸಿ” ಹಂತದ ಲಾಭರಹಿತ ಸಂಸ್ಥೆಯಾಗಿದ್ದು ಬಡತನವನ್ನು ಸುಸ್ಥಿರವಾಗಿ ಮತ್ತು ಪ್ರಮಾಣದಲ್ಲಿ ನಿವಾರಿಸುವ ಕಾರ್ಯದಲ್ಲಿ ತೊಡಗಿದೆ. ದಿ ನಡ್ಜ್ ಸಂಸ್ಥೆಗೆ ಟಾಟಾ ಟ್ರಸ್ಟ್, ನೀತಿ ಆಯೋಗ, ರಾಕ್ಫೆಲ್ಲರ್, ಓಮಿಡ್ಯಾರ್, ಫೇಸ್ಬುಕ್, ಇಂಡಸ್ ಟವರ್ಸ್, ಸಿಸ್ಕೊ, ಹೆಚ್.ಡಿ.ಎಫ್.ಸಿ. ಬ್ಯಾಂಕ್, ಹೆಚ್.ಎಸ್.ಬಿ.ಸಿ., ಕೆ,ಪಿ.ಎಂ.ಜಿ., ಎಂಫಸಿಸ್, ಹೆಚ್.ಸಿ.ಎಲ್ ಫೌಂಡೇಶನ್ ಮತ್ತು 50ಕ್ಕೂ ಹೆಚ್ಚು ಕಾರ್ಪೋರೇಟ್ಗಳು ಮತ್ತು ಫೌಂಡೇಶನ್ಗಳು ನೆರವು ನೀಡುತ್ತಿವೆ.
ದಿ ನಡ್ಜ್ ಸಾಮಾಜಿಕ ಆವಿಷ್ಕಾರ ಕೇಂದ್ರವು (ಸಿ.ಎಸ್.ಐ) ಭಾರತದ ಕಠಿಣ ಅಭಿವೃದ್ಧಿ ಸವಾಲುಗಳನ್ನು ಪರಿಹರಿಸುವ ಸಲುವಾಗಿ ಉನ್ನತ ಪ್ರತಿಭೆಗಳನ್ನು ರೂಪಿಸಲು ಮತ್ತು ಬೆಳೆಸಲು ಅಸ್ತಿತ್ವದಲ್ಲಿದೆ. ಅಂತೆಯೇ, 2017ರಿಂದ ಕೇಂದ್ರವು 80 ಕ್ಕೂ ಹೆಚ್ಚು ಲಾಭರಹಿತ ಸಂಸ್ಥೆಗಳಿಗೆ ನೆರವು ನೀಡಿದ್ದು ಅವರ ಕಾರ್ಯವು 9 ಮಿಲಿಯನ್ ಜನರಿಗೆ ತಲುಪಿದೆ.
ದಿ ನಡ್ಜ್ ಫೌಂಡೇಶನ್ ಸಂಸ್ಥೆಯ ಈ ಪಾಲುದಾರಿಕೆಯ ಮೂಲಕ ಕರ್ನಾಟಕ ಸರ್ಕಾರವು ಕಾರ್ಯತಂತ್ರದ ಕುಶಾಗ್ರಮತಿ, ಉದ್ಯಮಶೀಲತೆ ಚಾಲನೆ ಮತ್ತು ಇದರ ಜೊತೆಗೆ ವಿವಿಧ ಇಲಾಖೆಗಳಿಗೆ ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ತರಬಲ್ಲ ಹಿರಿಯರು ಮತ್ತು ಬದ್ಧತೆಯುಳ್ಳ ವೃತ್ತಿಪರರೊಂದಿಗೆ ಆಡಳಿತಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಿರ್ಣಾಯಕ ಅಭಿವೃದ್ಧಿ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಮತ್ತು ಕಾರ್ಯತಂತ್ರಗಳನ್ನು ರೂಪಿಸುವುದು ವಿಶೇಷ ಕರ್ತವ್ಯ ಹೊಂದಿರುವ ಪ್ರತಿ ಫೆಲೋ ಜವಾಬ್ದಾರಿಯಾಗಿದೆ. ಫೆಲೋಗಳು ಫೆಲೋಶಿಪ್ ಅವಧಿಯಲ್ಲಿ ಪ್ರತಿ ವರ್ಷ ರೂ. 20 ಲಕ್ಷಗಳ ವೇತನವನ್ನು ದಿ ನಡ್ಜ್ ಫೌಂಡೇಶನ್ಗೆ ಬಂದಿರುವ ಸಿಎಸ್ಆರ್ ಕೊಡುಗೆಯಿಂದ ಪಡೆಯುತ್ತಾರೆ.
ಸರ್ಕಾರದ ಕಾರ್ಯದರ್ಶಿ ಹಾಗೂ ದಿ ನಡ್ಜ್ ಫೌಂಡೇಶನ್ ಸಂಸ್ಥೆಯ ಪ್ರತಿನಿಧಿಗಳು ಸೇರಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಮತ್ತು ಈ ಅವಧಿಯಲ್ಲಿ ಆಯ್ಕೆ ಆದ ಅಭ್ಯರ್ಥಿಗಳು ಸರ್ಕಾರದ ನಿಯಮಗಳಿಗೆ ಬದ್ಧರಾಗಿ ಕೆಲಸವನ್ನು ನಿರ್ವಹಿಸಲಿದ್ದಾರೆ.
ಯೋಜನಾ ಇಲಾಖೆಯಿಂದ ನಿರ್ವಹಿಸುವ ಈ ಫೆಲೋಶಿಪ್ ಕಾರ್ಯಕ್ರಮವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಕೇಂದ್ರೀಕರಿಸುವ 11 ಇಲಾಖೆಗಳನ್ನು ಒಳಗೊಂಡಿರುತ್ತದೆ.
ಯೋಜನೆಯ ವಿವರಗಳು ಮತ್ತು ಅವಶ್ಯವಿರುವ ಪರಿಣಿತಿಗಳನ್ನು ಅಡಕದಲ್ಲಿ ನೀಡಲಾಗಿದೆ.
ಫೆಲೋಶಿಪ್ನ ಮಾಹಿತಿ ಮತ್ತು ಅರ್ಜಿಗಳನ್ನು https://iaf.thenudge.org/ / ರಲ್ಲಿ ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 15 ಏಪ್ರಿಲ್ 2021.
ಯಾವುದೇ ಮಾಹಿತಿ ಮತ್ತು ನೆರವಿಗಾಗಿ ದಯವಿಟ್ಟು iaf@thenudge.org ಅಥವಾ chayakd@gmail.com, ace
ಕರ್ನಾಟಕ ಸರ್ಕಾರವು ಸುಸ್ಥಿರ ಅಭಿವೃದ್ಧಿ ಗುರಿ-2030 ಅನ್ನು ಸಾಧಿಸುವ ಸಲುವಾಗಿ ಸರ್ಕಾರದೊಂದಿಗೆ ಕೈಜೋಡಿಸಲು ಹಾಗೂ ಪ್ರಾಯೋಜಿತ ಸಹಭಾಗಿತ್ವಕ್ಕೆ ಮುಂದೆ ಬರಲು, ಇತರೆ ಕಾರ್ಪೊರೇಟ್ ವಲಯದ ಸಂಸ್ಥೆಗಳನ್ನು ಆಹ್ವಾನಿಸುತ್ತದೆ.
ಅರ್ಜಿಗಾಗಿ ಲಭ್ಯವಿರುವ ಆಯ್ದ ಯೋಜನೆಗಳ ಪಟ್ಟಿ
ಅನುಭವ ಮತ್ತು ಪರಿಣಿತಿ ಅವಶ್ಯಕತೆ: ಫೆಲೋಗಳು ದೊಡ್ಡ ಸಂಸ್ಥೆಗಳ GM / VP / CXO ಮೊದಲಾದವುಗಳಲ್ಲಿ ಪ್ರಮುಖ ಪ್ರಮಾಣದ ಉಪಕ್ರಮಗಳ 10 ವರ್ಷದ ಅನುಭವ ಹೊಂದಿರಬೇಕು; ಯೋಜನೆಯ ನಿರ್ದಿಷ್ಟ ಪಾತ್ರಗಳೊಂದಿಗಿನ ಅನುಭವವು ವಿಶೇಷ ಪ್ರಯೋಜನವಾಗಲಿದೆ.
ಕ್ರ.ಸಂ ಇಲಾಖೆ ಯೋಜನೆ
1 ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಛೇರಿ ಆಡಳಿತಾತ್ಮಕ ಭೂದೃಶ್ಯ ಮೌಲ್ಯಮಾಪನ ಮತ್ತು ಬೃಹತ್ ದೃಷ್ಟಿಕೋನದಿಂದ ಆಡಳಿತ ಮರುವಿನ್ಯಾಸ.
2 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಆಡಳಿತ ಸುಧಾರಣೆ) ಇಲಾಖೆ ಪ್ರಸ್ತುತವಿರುವ ಆಡಳಿತಾತ್ಮಕ ವ್ಯವಸ್ಥೆಯ (ಆಚರಣೆ ಮತ್ತು ನೀತಿಗಳು) ಮೌಲ್ಯಮಾಪನ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಉತ್ತಮ ಆಚರಣೆಗಳ ಅಧ್ಯಯನ ಮತ್ತು ಸಂಪನ್ಮೂಲ ದಕ್ಷತೆಯ ಮಾಪಕಗಳನ್ನು ವಿನ್ಯಾಸಗೊಳಿಸುವ ಮತ್ತು ಸುಧಾರಿಸುವ ಕಾರ್ಯ.
3 ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ರಾಜ್ಯ ಮಟ್ಟದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಸಲುವಾಗಿ ವಿವಿಧ ಆಂತರಿಕ ಮತ್ತು ಬಾಹ್ಯ ಭಾಗೀದಾರರೊಡನೆ ಯೋಜನೆ ಮತ್ತು ಉಸ್ತುವಾರಿ ಸಂಯೋಜನೆ.
4 ಕೃಷಿ ಇಲಾಖೆ ಎ.ಐ. ಮತ್ತು ಜಿಯೋಸ್ಪೇಷಿಯಲ್ ತಾಂತ್ರಿಕತೆ ಬಳಸಿ ಕೃಷಿಯ ಮೌಲ್ಯಮಾಪನ ಮತ್ತು ನಿಖರ ಕೃಷಿ ಅನುಷ್ಟಾನ.
5 ಶಿಕ್ಷಣ ಇಲಾಖೆ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಮಾರುಕಟ್ಟೆಯ ಅವಶ್ಯಕತೆಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡಲು ಮರುವಿನ್ಯಾಸ ಮತ್ತು ಜಾರಿ ಚೌಕಟ್ಟನ್ನು ರೂಪಿಸುವುದು.
6 ಸಿಬ್ಬಂದಿ ಮತ್ತು ಆಡಳಿತ (ಆಡಳಿತ ಸುಧಾರಣೆ )ಇಲಾಖೆ ಪ್ರಸ್ತುತವಿರುವ ಐ.ಟಿ. ಮೂಲಸೌಲಭ್ಯಗಳ ಮೌಲ್ಯಮಾಪನ ಮತ್ತು ಉತ್ತಮಿಕೆಗಾಗಿ ಮರುವಿನ್ಯಾಸ, ಭವಿಷ್ಯದ ಭೂದೃಶ್ಯವನ್ನು ಪರಿಗಣಿಸಿ ಸದೃಢವಾದ ಸೈಬರ್ ಸುರಕ್ಷತೆ ಮತ್ತು ಬೃಹತ್ ಮಾಹಿತಿಗಳ ಏಕೀಕರಣ.
7 ತೋಟಗಾರಿಕೆ ಇಲಾಖೆ ತೋಟಗಾರಿಕಾ ಉತ್ಪನ್ನಗಳಿಗೆ ಮೌಲ್ಯ ಸರಪಳಿ ಅಭಿವೃದ್ಧಿಯೂ ಸೇರಿದಂತೆ ಸದೃಢ ಸುಗ್ಗಿ ನಂತರದ ನಿರ್ವಹಣೆಯ ಮೌಲ್ಯಮಾಪನ, ಮರುವಿನ್ಯಾಸ ಮತ್ತು ಜಾರಿ
8 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೀರಿನ ಸಂರಕ್ಷಣೆಯ ಕಡೆ ನಿರಂತರ ಗಮನದೊಂದಿಗೆ ನೀರಿನ ಸಂಪರ್ಕದ ಲಭ್ಯತೆ ಮತ್ತು ಮಾಪಕವನ್ನು ಸಕ್ರಿಯಗೊಳಿಸಲು ಉದ್ದೇಶಿತ ಅನುಷ್ಠಾನ.
ಸ್ಥಳೀಯ ಗ್ರಾಮೀಣ ಪ್ರತಿನಿಧಿಗಳ ಸಾಂಸ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವುದು – ಪ್ರಕ್ರಿಯೆ, ಸೇವಾ ಒದಗಣೆ ಮತ್ತು ಸಾರ್ವಜನಿಕ ಕುಂದುಕೊರತೆ.
9 ಕೌಶಲ್ಯಾಭಿವೃದ್ಧಿ, ಉದ್ದಿಮೆ ಮತ್ತು ಜೀವನೋಪಾಯ ಇಲಾಖೆ ರಾಜ್ಯದಲ್ಲಿ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಂ) ಅನ್ನು ಅಂದಾಜಿಸುವುದು ಮತ್ತು ಪುನರುಜ್ಜೀವನಗೊಳಿಸುವುದು.
10 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೌಷ್ಟಿಕತೆ ಕೇಂದ್ರಿತ ಮಾಹಿತಿಯ ಲಭ್ಯತೆಯಲ್ಲಿನ ಕೊರತೆಯನ್ನು ಗುರುತಿಸುವುದು ಮತ್ತು ಆಳವಾದ ತಾಂತ್ರಿಕತೆಯ ಏಕೀಕರಣದೊಂದಿಗೆ ಪ್ರಸ್ತುತ ಸಮಯದ ಮಾಹಿತಿಯನ್ನು ಸಂಗ್ರಹಿಸಲು ಸಕ್ರಿಯಗೊಳಿಸುವುದು.
11 ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ನಿರ್ಣಾಯಕ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ಹೆಚ್ಚು ಗಮನ ಹರಿಸುವುದರ ಜೊತೆಗೆ ನೀತಿಗಳು ಮತ್ತು ಕಾರ್ಯಕ್ರಮಗಳ ಯೋಜನೆ ಮತ್ತು ಜಾರಿ.