🎭 ಹೋಳಿ ಹುಣ್ಣಿಮೆ 🎭

varthajala
0

ಪೂರ್ವಕಾಲದಲ್ಲಿ ತಾರಕಾಸುರನೆಂಬ....ರಾಕ್ಷಸನಿದ್ದ. ದುರಹಂಕಾರಿಯೂ, ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ , ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂದು ಬ್ರಹ್ಮನಲ್ಲಿ ವರವನ್ನು ಪಡೆದಿದ್ದ.


ಭೋಗಸಮಾಧಿಯಲ್ಲಿದ್ದ ಶಿವನು ತನ್ನ ಪತ್ನಿಯಾದ ಪಾರ್ವತಿಯೊಂದಿಗೆ ಆ ವೇಳೆಯಲ್ಲಿ ಸಮಾಗಮ ಹೊಂದಲು ಸಾಧ್ಯವಿರಲಿಲ್ಲ.  ದೇವತೆಗಳು ನಿರುಪಾಯರಾಗಿ  ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು "ಮನ್ಮಥನಲ್ಲಿ"  { ಕಾಮ } ಬೇಡಿದರು. 

ಕಾಮ ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. 

ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿನಿಂದ ( ತ್ರಿನೇತ್ರ ) ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದುಃಖದಿಂದ ಶಿವನ ಹತ್ತಿರ ಪತಿಭಿಕ್ಷೆ ಬೇಡಿದಳು. ಆಗ ಶಾಂತಗೊಂಡ ಶಿವನು.... ಕಾಮನಿಗೆ ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ  ವರ ಕೊಟ್ಟನು.

ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾಗುತ್ತಾನೆ. ಈ ಘಟನೆ ನಡೆದದ್ದು ಪಾಲ್ಗುಣ ಶುದ್ದ ಹುಣ್ಣಿಮೆಯಂದು. 

ಆದ್ದರಿಂದ ಈ ದಿನವನ್ನು ಕಾಮನ ಹುಣ್ಣಿಮೆಯಾಗಿ ಆಚರಣೆಗೆ ಬಂದಿದೆ.

ಈ ದಿನದಂದು ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿದ ಗುಲಾಲು ತಯಾರಿಸಿ , ಬಿದರಿನಿಂದ ಪಿಚಕಾರಿ ತಯಾರಿಸಿ ಬಣ್ಣದಾಟ ಆಡುತ್ತಾರೆ. 

ರಂಗಿನಾಟದ ನಂತರ ಅಭ್ಯಂಜನ ಸ್ನಾನ ಮಾಡಿ  ದೇವರಲ್ಲಿ ಕೆಟ್ಟ ಗುಣಗಳೆಲ್ಲಾ ಸುಟ್ಟು ಹೋಗಲಿ ಅಂತ ಪ್ರಾರ್ಥಿಸಿ ವಿಶೇಷ ಸಿಹಿ ಅಡುಗೆ ಮಾಡಿ ನೈವ್ಯದ್ದೆ ಹಿಡಿದು ಊಟ ಮಾಡುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಈ ದಿನ ಊರಿನವರ ಮನೆಯಲ್ಲಿ ಸಿಗುವ ಬೇಡದ ವಸ್ತುಗಳನ್ನೆಲ್ಲಾ... ತಂದು ಒಂದೆಡೆ ಗುಡ್ಡೆ ಮಾಡಿ, ರಾತ್ರಿ ಹುಡುಗನೊಬ್ಬನಿಗೆ ಶಿಖಂಡಿಯ ವೇಷ ಹಾಕಿಸಿ , ಅವನಿಂದ ಊರಿನ ಐದು ಮನೆಗಳಲ್ಲಿ ಭಿಕ್ಷೆ ಬೇಡಿಸಿ ಕರೆತಂದು ಅವನಿಂದ ಬೇಡದ ವಸ್ತುಗಳ ಗುಡ್ಡೆಗೆ ಬೆಂಕಿ ಇಡಿಸುತ್ತಾರೆ......ಇದೇ ಕಾಮದಹನದ ಹಬ್ಬ.


Post a Comment

0Comments

Post a Comment (0)