ಕರ್ನಾಟಕ ಸರ್ಕಾರದ ಯೋಜನೆ ಶಿಕ್ಷಕ ಮಿತ್ರ ಲೋಕಾರ್ಪಣೆ

varthajala
0

ಶಿಕ್ಷಕರ ಸಮಸ್ಯೆಗಳಿಗೆ ಆ್ಯಪ್‍ನಲ್ಲಿ ಪರಿಹಾರ

ಇನ್ನು ಮುಂದೆ ಶಿಕ್ಷಕರ ಅಲೆದಾಟಕ್ಕೆ ಆ್ಯಪ್ ಇತಿಶ್ರೀ ಹಾಡಲಿದೆ. ಈ ಬಾರಿಯಿಂದ ಸಾರ್ವತ್ರಿಕ ವರ್ಗಾವಣೆ ಅರ್ಜಿಯನ್ನು ಸಹ ಈ ಆ್ಯಪ್ ಮೂಲಕವೇ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ ಆ್ಯಪ್ ಸಿದ್ಧಪಡಿಸಿದ್ದು ಶಿಕ್ಷಕರು ಮೊಬೈಲ್‍ನಲ್ಲಿ ಇದನ್ನು ಡೌನ್‍ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯ ಹಾಗೂ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಸಕಾಲ ಮಾದರಿಯಲ್ಲಿ ನಿರ್ದಿಷ್ಟ ಸಮಸ್ಯೆ ಪರಿಹರಿಸಲು ಇಂತಿಷ್ಟು ದಿನ ಎಂದು ನಿಗದಿಪಡಿಸಲಾಗಿದೆ. ಶಿಕ್ಷಕರು ಶಾಲೆಗಳಿಗೆ ರಜೆ ಹಾಕಿ ಇಲಾಖೆ ಕಚೇರಿಗಳಿಗೆ ಅಲೆದಾಡುವುದು ತಪ್ಪಿಸುವ ಉದ್ದೇಶದಿಂದ ಆ್ಯಪ್ ಸಿದ್ದಪಡಿಸಲಾಗಿದೆ. 

ಲಾಗ್‍ಇನ್ ಆಗುವುದು ಹೇಗೆ?

ಪ್ಲೇಸ್ಟೋರ್‍ನಲ್ಲಿ ‘ಶಿಕ್ಷಕ ಮಿತ್ರ’ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ನಂತರ ಲಿಂಕ್ ಕ್ಲಿಕ್ ಮಾಡಿ ಯೂಸರ್ ಐಡಿ ಹಾಗೂ ಕೆಜೆಡಿ ನಂಬರ್ ಹಾಕಬೇಕು. ಬಳಿಕ ಪಾಸ್‍ವರ್ಡ್ ಬದಲಾಗಿ ಜಿoಡಿgeಣ ಠಿಚಿssತಿoಡಿಜ ಕ್ಲಿಕ್ ಮಾಡಬೇಕು. ಮೊಬೈಲ್ ನಂಬರ್‍ಗೆ ಬಂದ ಒಟಿಪಿ ನಮೂದಿಸಿದ ಬಳಿಕ ಹೊಸ ಪಾಸ್‍ವರ್ಡ್ ಕ್ರಿಯೇಟ್ ಮಾಡಿ ಲಾಗಿನ್ ಆಗಬೇಕು. 

ಆ್ಯಪ್ ಪ್ರಮುಖ ಯೋಜನೆಗಳು

* ರಜೆ ಅರ್ಜಿ ಸಲ್ಲಿಕೆ   * ಗಳಿಕೆ ರಜೆ ನಗದೀಕರಣ   * ಹಬ್ಬದ ಮುಂಗಡ ಹಣ ಪರವಾನಿಗೆ  * ವೈಯಕ್ತಿಕ ವಿದೇಶ ಪ್ರವಾಸ ಕೈಗೊಳ್ಳಲು ನಿರಾಕ್ಷೇಪಣಾ ಪತ್ರ   * ಉನ್ನತ ಶಿಕ್ಷಣಕ್ಕೆ ಅನುಮತಿ * ವಾರ್ಷಿಕ ಕಾರ್ಯನಿರ್ವಹಣಾ ವರದಿ * ಖಾಲಿ ನಿವೇಶನ, ಕಟ್ಟಡಗಳ ವಾಹನ ಖರೀದಿಗೆ ಪರವಾನಿಗೆ * ಸ್ಥಿರ ಮತ್ತು ಚರಾಸ್ತಿ ಖರೀದಿಗೆ ಅನುಮತಿ * ಹೊಸ ಪಾಸ್‍ಪೋರ್ಟ್ ಅಥವಾ ನವೀಕರಣಕ್ಕೆ ನಿರಾಕ್ಷೇಪಣಾ ಪತ್ರ  * ಕುಟುಂಬ ಭತ್ಯೆ ಮಂಜೂರಾತಿಗೆ ಅನುಮತಿ * ಬೇರೆ ಬೇರೆ ಪರೀಕ್ಷೆ ಬರೆಯಲು ಅನುಮತಿ * ಅಂಗವಿಕಲ ಭತ್ಯೆ  * ಪ್ರಭಾರ ಭತ್ಯೆ ಮಂಜೂರಾತಿಗೆ ಪರವಾನಿಗೆ  * ಪಿಂಚಣಿ ಸೌಲಭ್ಯಕ್ಕಾಗಿ ಹೆಚ್ಚುವರಿ ಅರ್ಹತಾ ಸೇವೆ ಮಂಜೂರಾತಿ  * ಜಿಪಿಎಫ್ ಮುಂಗಡ ಭಾಗಶಃ ವಾಪಸಾತಿ ಅಥವಾ ಅಂತಿಮ ಪಾವತಿ 

2 ಮಂಡಳಿ ವಿಲೀನ

ರಾಜ್ಯದಲ್ಲಿ ಪದವಿಪೂರ್ವ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಂಬ ಪ್ರತ್ಯೇಕ ಮಂಡಳಿಗಳಿವೆ. ಇವೆರಡನ್ನೂ ವಿಲೀನಗೊಳಿಸಿ ಒಂದೇ ಮಂಡಳಿ ಮಾಡಲಾಗುವುದು. ಹೊಸ ಮಂಡಳಿಗೆ ಪ್ರಾಥಮಿಕ ಶಿಕ್ಷಣ ಪರಿಷತ್ ಎಂದು ನಾಮಕರಣ ಮಾಡಲಾಗುವುದು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್ ಮಾದರಿಯಲ್ಲೇ ಶಿಕ್ಷಣ ಪರಿಷತ್ ಆರಂಭಿಸಲಾಗುವುದು. ಇನ್ನು ಮುಂದೆ ಪದವಿಪೂರ್ವ ಪರೀಕ್ಷಾ ಮಂಡಳಿ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ವಿಲೀನಗೊಳಿಸಿ ಎರಡೂ ಪರೀಕ್ಷೆಗಳನ್ನು ಒಂದೇ ಮಂಡಳಿಯಿಂದ ನಡೆಸಲಾಗುವುದು. ರಾಜ್ಯದಲ್ಲಿ ಉತ್ತಮ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿ ಜಿಲ್ಲೆಯಲ್ಲಿ ಒಂದು ಉತ್ತಮ ಶಾಲೆಗೆ ಸ್ವಾಭಿಮಾನಿ ಶಾಲೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಉತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ ಆದರ್ಶ ಶಿಕ್ಷಕ ಗೌರವ ಸಲ್ಲಿಸಿ ಅವರ ಬೋಧನಾ ಕ್ರಮ ರಾಜ್ಯದ ಎಲ್ಲ ಶಾಲೆಗಳಿಗೆ ಪ್ರಚುರಪಡಿಸಲಾಗುವುದು. 

ಶಿಕ್ಷಣ ಇಲಾಖೆ ಆಯುಕ್ತರ ವಿಳಾಸ : 

www.schooleducation.kar.nic.in.,  wwww.ssakarnataka.gov.in

ಆಯುಕ್ತರ ಕಛೇರಿ, ನೃಪತುಂಗ ರಸ್ತೆ, ಬೆಂಗಳೂರು 560 001.

ಫೋನ್ : 080 22246976.

Post a Comment

0Comments

Post a Comment (0)