ಶಿಕ್ಷಣ ಕಾಶಿ ಧಾರವಾಡಕ್ಕೆ‌ ಮತ್ತೊಂದು ಗರಿ: ಐಐಟಿ ಸೇರಿ 3 ವಿಶ್ವವಿದ್ಯಾಲಯ ಹೊಂದಿದ ಜಿಲ್ಲೆಯಲ್ಲಿ ಐಐಐಟಿ

varthajala
0

 ಧಾರವಾಡ: ಸಾಹಿತಿಗಳ ತವರೂರು, ಶಿಕ್ಷಣ ಕಾಶಿ, ಪೇಡಾ ನಗರಿ ಎಂದು ಖ್ಯಾತಿ ಪಡೆದ ಧಾರವಾಡ ಜಿಲ್ಲೆಯಲ್ಲಿ ಮೂರು ವಿಶ್ವವಿದ್ಯಾಲಯ ಹೊಂದಿರುವುದರ‌ ಜೊತೆ ಈಗ ಐಐಐಟಿ ಸಹ ಆರಂಭವಾಗುವ‌ಮೂಲ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರಾಗಲಿದೆ ಧಾರವಾಡ. ಹೌದು ಧಾರವಾಡ ಜಿಲ್ಲೆಯ ತಡಸಿಕೊಪ್ಪ ಗ್ರಾಮದ ಬಳಿ 117 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಂಸ್ಥೆಯ ನೂತನ ಕಟ್ಟಡ ಕಾಮಗಾರಿ ಸಂಪೂರ್ಣ ಮುಕ್ತಾಯದ ಹಂತಕ್ಕೆ ಬಂದಿದೆ.


ಧಾರವಾಡದಲ್ಲಿ ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಹಾಗೂ ಕಾನೂನು ವಿಶ್ವವಿದ್ಯಾಲಯ ಸೇರಿದಂತೆ ಮೂರು ವಿಶ್ವವಿದ್ಯಾಲಯಗಳಿವೆ. ಇದರ ಜೊತೆಯಲ್ಲಿ ಐಐಟಿ ಕೂಡ ಆರಂಭವಾಗಿದೆ. ಐಐಐಟಿ ಕಟ್ಟಡದ ಕಾಮಗಾರಿ ಇನ್ನು ಎರಡು ತಿಂಗಳಲ್ಲಿ ಮುಕ್ತಾಯವಾಗಲಿದೆ. ತಡಸಿನಕೊಪ್ಪ ಗ್ರಾಮದ ಬಳಿ 61 ಎಕರೆಯಲ್ಲಿ ಈ ಬೃಹತ್ ಕ್ಯಾಂಪಸ್ ನಿರ್ಮಾಣ ಮಾಡಲಾಗಿದ್ದು, ಇದಕ್ಕಾಗಿ ಸರ್ಕಾರ 117 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಕ್ಯಾಂಪಸ್ ನಲ್ಲಿ ವಿವಿಧೋದ್ದೇಶ ಸಭಾಂಗಣ, ವರ್ಗ ಕೋಣೆಗಳು, ಆಡಳಿತ ಭವನ, ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗಳು ಬರದಿಂದ ಸಾಗಿದ್ದು ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. 61 ಎಕರೆ ಜಮೀನಲ್ಲಿ 117 ಕೋಟಿ ವೆಚ್ಚದಲ್ಲಿಐಐಐಟಿ ಕಟ್ಟಡ ಕಾಮಗಾರಿ ನಡೆದಿದ್ದು, ತರಗತಿ ಕೊಠಡಿಗಳು, ಗ್ರಂಥಾಲಯ ಹಾಗೂ ಹಾಸ್ಟೆಲ್ ವ್ಯವಸ್ಥೆ ಸೇರಿಂದತೆ ಹೈಟೆಕ್ ವ್ಯವಸ್ಥೆ ಹೊಂದಿದ ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ.
ಈ ಐಐಐಟಿ ಕ್ಯಾಂಪಸ್ ಕಟ್ಟಡ ಕಾಮಗಾರಿ‍ ಬಗ್ಗೆ ಮಾತನಾಡಿದ ಧಾರವಾಡ ಶಾಸಕ ಅರವಿಂದ ಬೆಲ್ಲದ, ವಿದ್ಯಾಕೇಂದ್ರ ಧಾರವಾಡಕ್ಕೆ ಐಐಐಟಿ ಬರಲು ಹಿಂದಿನ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಕೇಂದ್ರ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಕಾರಣ ಎಂದು ಹೇಳಿದರು. ಅಲ್ಲದೇ ಐಐಐಟಿ ಸ್ಥಾಪನೆಯಾಗಲು ತಡಸಿನಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನೀಡಿದ ಸಹಕಾರ ಕೂಡ ಮಹತ್ವದ್ದಾಗಿದೆ. ಐಐಐಟಿಯು ಸರ್ಕಾರ ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತವೆ. ಮುಂದೆ ಯಾವುದೇ ಅನುದಾನವಿಲ್ಲದೇ, ವಿದ್ಯಾರ್ಥಿಗಳ ಶುಲ್ಕ, ಸಂಶೋಧನೆ ಚಟುವಟಿಕಗಳ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿ ಸ್ವಾಯತ್ತವಾಗಿ ನಿರ್ವಹಿಸಲ್ಪಡುತ್ತದೆ ಎಂದು ಮಾಹಿತಿ ನೀಡಿದರು.
ಸದ್ಯ ಈ ಐಐಐಟಿಯನ್ನು ಹುಬ್ಬಳ್ಳಿಯ ಐಟಿ ಪಾರ್ಕ್​ನಲ್ಲಿ ನಡೆಸಲಾಗುತಿತ್ತು. ಕೊರೋನಾ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ಆನ್‍ಲೈನನಲ್ಲೇ ಕ್ಲಾಸ್ ನಡೆದಿವೆ. 645 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಏಪ್ರಿಲ್‍ನಲ್ಲಿ ನೂತನ ಐಐಐಟಿ ಕ್ಯಾಂಪಸ್ ಆರಂಭವಾದ ಬಳಿಕ ನೂತನ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯಲಿವೆ. ಈಗಾಗಲೇ ಶೇ.‌ 95 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಏಪ್ರಿಲ್‍ನಲ್ಲಿ ಉಳಿದ ಕಾಮಗಾರಿ‌ ಪೂರ್ಣಗೊಳ್ಳಲಿದೆ ಎಂದು ಐಐಐಟಿ ನಿರ್ದೇಶಕ ಕವಿ ಮಹೇಶ್ ಅವರು ಹೇಳಿದರು.ಇದರ ಬೆನ್ನಲ್ಲೇ ಐಐಟಿ ಕ್ಯಾಂಪಸ್ ಕೂಡ ಆರಂಭವಾಗಲಿದೆ. ಇದು ಕೂಡ ಧಾರವಾಡಕ್ಕೆ ಇನ್ನಷ್ಟು ಮೆರಗು ತರಲಿದೆ. ಸದ್ಯ ವಿದ್ಯಾಕಾಶಿ ಎಂದೇ ಹೆಸರಾದ ಧಾರವಾಡಕ್ಕೆ ಮತ್ತಷ್ಟು ಮೆರಗು ತರಲಿವೆ ಐಐಐಟಿ ವಿದ್ಯಾ ಸಂಸ್ಥೆಗಳು.
Source : news 18

Post a Comment

0Comments

Post a Comment (0)